ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಆಳ್ವಾಸ್ ಕಾಲೇಜಿಗೆ ಅವಳಿ ಪ್ರಶಸ್ತಿ

Date:

ಬೆಳ್ತಂಗಡಿ: ಮಂಗಳೂರು ವಿ.ವಿ ಮತ್ತು ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ. ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ಸತತ 22ನೇ ಬಾರಿ ಅವಳಿ ಪ್ರಶಸ್ತಿ ಪಡೆದುಕೊಂಡಿದೆ.


ಫೈನಲ್ ಪಂದ್ಯಾಟದಲ್ಲಿ ಪುರುಷರ ತಂಡವು ಭುವನೇಂದ್ರ ಕಾಲೇಜು ತಂಡವನ್ನು ಸೋಲಿಸಿ ಶ್ರೀ ಎಂ.ಕೆ ಅನಂತರಾಜ್ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ಪಡೆದುಕೊಂಡಿತು. ಮಹಿಳೆಯರ ತಂಡವು ಎಸ್.ವಿ.ಟಿ ಕಾಲೇಜು ಕಟೀಲು ತಂಡವನ್ನು ಸೋಲಿಸಿ ಫೇಬಿಯನ್ ಬಿ ಎನ್ ಕುಲೊಸೊ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ಪಡೆದುಕೊಂಡಿದೆ.


ಪುರುಷರ ವಿಭಾಗದಲ್ಲಿ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಆಳ್ವಾಸ್‌ನ ನಂದ ಕುಮಾರ್ ಪಡೆದುಕೊಂಡರೆ, ಬೆಸ್ಟ್ ರಿಸಿವರ್ ಪ್ರಶಸ್ತಿಯನ್ನು ಆಕಾಶ್ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಆಳ್ವಾಸ್‌ನ ತನುಶ್ರೀ ಪಡೆದುಕೊಂಡರೆ ಬೆಸ್ಟ್ ರಿಸಿವರ್ ಪ್ರಶಸ್ತಿಯನ್ನು ಗೀತಾ ಪಡೆದುಕೊಂಡರು.


ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದರೆಗುಡ್ಡೆ: ಸಿಡಿಲು ಬಡಿದು ಮೂರು ದನಗಳ ಸಾವು

ಮೂಡಬಿದಿರೆ: ಸೋಮವಾರ ಸಂಜೆ ದರೆಗುಡ್ಡೆ ಗ್ರಾಮದ ಕೆಲ್ಲಪುತ್ತಿಗೆ ಪರಾರಿ ಬಳಿಯ ಆನಂದ...

“ತುಳುನಾಡ ಸಿರಿ ಮದಿಪು-2026, ತುಳು ಭಾಷೆಯ ಕಾಯ೯ಕ್ರಮಗಳಿಂದ ಪ್ರೋತ್ಸಾಹ: ತಾರಾನಾಥ ಗಟ್ಟಿ

ಮಂಗಳೂರು: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು 1994ರಲ್ಲಿ ತುಳು ಅಕಾಡೆಮಿಯನ್ನು...

ಸರಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡುವುದಾದರೆ ಆರೋಗ್ಯ ಇಲಾಖೆ ಯಾಕೆ? ಮುನೀರ್ ಕಾಟಿಪಳ್ಳ ಪ್ರಶ್ನೆ

ಮೂಡಬಿದಿರೆ: ಸರಕಾರಿ ಆಸ್ಪತ್ರೆಯನ್ನು ಖಾಸಗಿ ಮೆಡಿಕಲ್ ಕಾಲೇಜಿಗಳಿಗೆ ಕೊಟ್ಟ ಬಳಿಕ ಸರ್ಕಾರಿ...

ಆಳ್ವಾಸ್ ಪತ್ರಿಕೋದ್ಯಮ ಹಿರಿಯ ವಿದ್ಯಾರ್ಥಿಗಳ ಸಂಘದ ಅಸ್ತಿತ್ವಕ್ಕೆ: ಪ್ರಥಮ ಅಧ್ಯಕ್ಷರಾಗಿ ಪ್ರಕಾಶ್ ಡಿ.ರಾಂಪುರ್

ಮೂಡುಬಿದಿರೆ: ಆಳ್ವಾಸ್ ಸ್ವಾಯತ್ತ ಕಾಲೇಜಿನ ದಶಮಾನ ಸಂಭ್ರಮದಲ್ಲಿರುವ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು...