ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ತೆಂಕಮಿಜಾರಿನಲ್ಲಿ ಮಾತೃವಂದನಾ, ಮಾತೃ ಭೋಜನ ಕಾಯ೯ಕ್ರಮ

Date:

ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್ ಪಿ ವೈ ಎಸ್ ಎಸ್) ಕರ್ನಾಟಕ ಪೊಳಲಿ ನಗರದ ಅಶ್ವಥಪುರ ಶ್ರೀ ಸೀತಾರಾಮಚಂದ್ರ ಶಾಖೆಯ ವತಿಯಿಂದ ತೆಂಕಮಿಜಾರು ಪಂಚಾಯತ್ ನ ಸಂತೆಕಟ್ಟೆ ವಿವಿದೋದ್ಧೇಶ ಸಭಾಂಗಣದಲ್ಲಿ ಸಮಿತಿಯ ವಿಶೇಷ ಕಾರ್ಯಕ್ರಮವಾಗಿರುವ ಮಾತೃಧ್ಯಾನ, ಮಾತೃವಂದನಾ, ಮಾತೃಭೋಜನ ಕಾರ್ಯಕ್ರಮ ನಡೆಯಿತು.

ಉಷಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಾವಿತ್ರಿ ಭಾಗವಹಿಸಿದ್ದರು. ಜಿಲ್ಲಾ ಪ್ರಮುಖರು, ನಗರ ಪ್ರಮುಖರ ಉಪಸ್ಥಿತಿಯಲ್ಲಿ ಭಜನೆ, ಆಟೋಟಗಳು, ನಗುವೇ ಯೋಗ ಮುಂತಾದ ಚಟುವಟಿಕೆಗಳನ್ನು ನಡೆಸಲಾಯಿತು. ನಗರದಿಂದ ಸುಮಾರು 350 ಸಂಖ್ಯೆಯಲ್ಲಿ ಯೋಗಬಂಧುಗಳು ಜೋಡಿಸಿಕೊಂಡಿದ್ದರು. ಜಯಶ್ರೀ ಸ್ವಾಗತಿಸಿದರು. ರೇಖಾ ಮಾತೃಧ್ಯಾನದ ಜೊತೆ ಪ್ರಾಸ್ತವಿಕ ಮಾತುಗಳನ್ನಾಡಿದರು. ಲಕ್ಷ್ಮೀ 48 ದಿನಗಳ ಯೋಗ ತರಗತಿಯ ವರದಿಯನ್ನು ಮಂಡಿಸಿದರು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...