ಹಲ್ಲೆ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು

Date:

ಮಂಗಳೂರು: ಕಾಂಜಾರು ಗ್ರಾಮದ ಪರಾರಿ ಮನೆಯ ನಿವಾಸಿಗಳಾದ ಮೂವರು ಆರೋಪಿಗಳಿಗೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಕಾಂಜಾರು ಅಂಚೆ ಮತ್ತು ಗ್ರಾಮದ ದಯಾನಂದ ಹೆಗ್ಡೆಯವರ ಪುತ್ರರಾದ ಜಯಾನಂದ ಹೆಗ್ಡೆ, ಪಿ. ಮಂಜುನಂದ ಹೆಗ್ಡೆ, ಹಾಗೂ ಶೇಖರ್ ಹೆಗ್ಡೆಯವರ ಪುತ್ರ ಚಂದ್ರಹಾಸ ಹೆಗ್ಡೆಯವರ ವಿರುದ್ಧ ಶಿವರಾಜ್ ಶೆಟ್ಟಿ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಬಳಿಕ, ಜಯಾನಂದ ಹೆಗ್ಡೆ, ಪಿ. ಮಂಜುನಂದ ಹೆಗ್ಡೆ ಮತ್ತು ಚಂದ್ರಹಾಸ ಹೆಗ್ಡೆ ಅವರ ಪರವಾಗಿ ವಕೀಲರಾದ ಮೂಡುಬಿದಿರೆಯ ಶರತ್ ಶೆಟ್ಟಿ ಡಿ. ಅವರು ಉಡುಪಿಯ 2ನೇ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಆರೋಪಿಗಳ ಪರವಾಗಿ ವಕೀಲರಾದ ಶರತ್ ಶೆಟ್ಟಿ ಡಿ. ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...