ಫೆಬ್ರವರಿ 21ಕ್ಕೆ ಮೂಡಬಿದಿರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Date:

ಮೂಡುಬಿದಿರೆ: ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ನಡೆಯಲಿರುವ ದ್ವಿತೀಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರವರಿ ೨೧, ಶನಿವಾರದಂದು ಕಡಂದಲೆಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನೆರವೇರಲಿದ್ದು ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಸಾಮಾಜಿಕ ಮುಂದಾಳು ಸುಚರಿತ ಶೆಟ್ಟಿಯವರು ಆಯ್ಕೆಯಾಗಿರುತ್ತಾರೆ.

ಫೆಬ್ರವರಿ 2ರಂದು ಕಡಂದಲೆಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಪರಿಷತ್ತಿನ ಪದಾಧಿಕಾರಿಗಳ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ಪರಿಷತ್ತಿನ ಕೋಶಾಧ್ಯಕ್ಷರಾದ ಅಂಡಾರು ಗುಣಪಾಲ ಹೆಗ್ಡೆಯವರು ಪ್ರಸ್ತಾವಿಕ ಮಾತುಗಳನ್ನಾಡಿದರು, ತಾಲೂಕು ಅಧ್ಯಕ್ಷರಾದ ಕೆ.ವೇಣು ಗೋಪಾಲ ಶೆಟ್ಟಿಯವರು ಸಮ್ಮೇಳನದ ರೂಪುರೇಷೆಗಳನ್ನು ಸಭೆಯ ಮುಂದೆ ಮಂಡಿಸಿದರು. ಕಡಂದಲೆ ಅಸುಪಾಸಿನಲ್ಲಿರುವ ಎಲ್ಲಾ ಸಂಘ ಸಂಸ್ಥೆಗಳ ಸಹಕಾರವನ್ನು ಅಪೇಕ್ಷಿಸಲಾಯಿತು. ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿ ಹೋಬಳಿ ಅಧ್ಯಕ್ಷರಾದ ರಾಮಕೃಷ್ಣ ಶಿರೂರು ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

IPS ಅಧಿಕಾರಿಯ ವಿರುದ್ಧ SP ಗಂಭೀರ ಆರೋಪ – DGP ಗೆ ಪತ್ರ ಬರೆದು, “30 ನಿಮಿಷ ಕೊಡಿ, ಸತ್ಯ ಬಯಲು ಮಾಡ್ತೇನೆ” ಎಂದು ಉಲ್ಲೇಖ…!!!

ಮಾನಸಿಕ ಕಿರುಕುಳ, ತಾರತಮ್ಯ ಆರೋಪ; ಪೊಲೀಸ್ ಇಲಾಖೆಯಲ್ಲಿ ಸಂಚಲನ ಬೆಂಗಳೂರು: ಕರ್ನಾಟಕ ಪೊಲೀಸ್...

ಬಳ್ಕುಂಜೆಯಲ್ಲಿ ಕುದಿ ಕಂಬಳ: ಹೊಳೆಗೆ ಹಾರಿ ಪ್ರಾಣಬಿಟ್ಟ ದೂಜ

ಮೂಡುಬಿದಿರೆ: ಕಂಬಳದ ಕನೆ ಹಲಗೆ ವಿಭಾಗದಲ್ಲಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿದ್ದ ತಿರುವೈಲು...

ಲೇಖಕಿ ರೆಶೆಲ್ ಫೆರ್ನಾಂಡಿಸ್ ಅವರಿಗೆ ದಿವಾ ಪ್ಲಾನೆಟ್ ವತಿಯಿಂದ ಟಾಪ್ 50 ಗಮನಾರ್ಹ ಮಹಿಳಾ ಗೌರವ

ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಪ್ರಮುಖ ಯುವ ಲೇಖಕಿ ಮತ್ತು ವಾಗ್ಮಿ, ಎಬಿವಿಪಿ...

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಮೂಡುಬಿದಿರೆ: ಕರಾವಳಿ ಹಾಗೂ ಮಲೆನಾಡಿನ...