ದೇರಳಕಟ್ಟೆ: ಕಣಚೂರು ಕಾಲೇಜ್ ಆಫ್ ಫಾರ್ಮಸಿಯ ವತಿಯಿಂದ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ–2026ರ ಅಂಗವಾಗಿ ದೇರಳಕಟ್ಟೆಯಿಂದ ಕಣಚೂರು ಕ್ಯಾಂಪಸ್ ವರೆಗೆ ಕಾಲ್ನಡಿಗೆ ಜಾಥ ನಡೆಯಿತು.

ಆರೋಗ್ಯಕರ ಭವಿಷ್ಯಕ್ಕಾಗಿ ಫಾರ್ಮಸಿಸ್ಟ್ಗಳನ್ನು ಸಬಲೀಕರಣಗೊಳಿಸುವುದು – ಸ್ವಚ್ಛ ಭಾರತ, ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ವಿರುದ್ಧ ಹೋರಾಟ” ಎಂಬ ಸಂದೇಶದೊಂದಿಗೆ ಕಾಲ್ನಡಿಗೆ ಜಾಥಕ್ಕೆ ಬೆಂಗಳೂರಿನ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸೆಂಟ್ರಲ್ ಕೌನ್ಸಿಲ್ ಸದಸ್ಯ ಡಾ. ಸಲೀಮುಲ್ಲಾ ಖಾನ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ವಿಶ್ವ ಫಾರ್ಮಸಿಸ್ಟ್ ದಿನದ ಮಹತ್ವ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್ಗಳ ಜವಾಬ್ದಾರಿಯ ಕುರಿತು ಮಾತನಾಡಿದರು.

ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು ವಹಿಸಿದ್ದರು.

ಕೊಣಾಜೆ ಪೊಲೀಸ್ ಠಾಣೆಯ ಎಸ್.ಐ. ನಾಗರಾಜ್ , ಕಾನ್ಸ್ಟೇಬಲ್ ಶರೀಫ್, ಕಣಚೂರು ಆಯುರ್ವೇದ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ. ಸುರೇಶ್ ನೆಗಳಗುಳಿ, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ವೈದ್ಯಕೀಯ ಅಧೀಕ್ಷಕ ಡಾ. ಅಂಜನ್ ಕುಮಾರ್ , ಮುಖ್ಯ ವೈದ್ಯಕೀಯ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್, ಕಣಚೂರು ನರ್ಸಿಂಗ್ ಸೈನ್ಸಸ್ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಡಾ. ಮೋಲಿ ಸಲ್ಡಾನ್ಹಾ, ಫಾರ್ಮಸಿ ಕಾಲೇಜ್ ಪ್ರಾಂಶುಪಾಲ್ ಡಾ. ರಾಜೀವ್ ಕುಮಾರ್ ಉಪಸ್ಥಿತರಿದ್ದರು.


