ಜಾನಪದ ಪರಿಷತ್ತಿನ ಡಾ.ಜೀ.ಶಂ.ಪರಮಶಿವಯ್ಯ ಪ್ರಶಸ್ತಿಗೆ ಪ್ರೊ.ಕೆ.ಚಿನ್ನಪ್ಪ ಗೌಡ ಆಯ್ಕೆ

Date:

ಕೊಣಾಜೆ: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇವರು ಕೊಡಮಾಡುವ ‌2026 ನೇ ಸಾಲಿನ ಡಾ.ಜಿ.ಶಂ.ಪರಮಶಿವಯ್ಯ ಪ್ರಶಸ್ತಿಗೆ ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪ ಗೌಡ ಅವರು ಆಯ್ಕೆಯಾಗಿದ್ದಾರೆ. ರಾಮನಗರದ ಜಾನಪದ ಲೋಕದಲ್ಲಿ ಫೆಬ್ರವರಿ 7 ಮತ್ತು 8 ರಂದು ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯಲಿರುವ ವಿದ್ಯಾರ್ಥಿ ಲೋಕೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕರ್ನಾಟಕ ಜಾನಪದ ಪರಿಷತ್ತು ಡಾ.ಕೆ.ಚಿನ್ನಪ್ಪ ಗೌಡರು ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿರುವ ಸಾಧನೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ. ಈ ಪ್ರಶಸ್ತಿಯು ರೂ. 25,000 ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಜಾನಪದ‌ ಪರಿಷತ್ತುವಿನ ಇತರ ಪ್ರಶಸ್ತಿಗಳಾದ ನಾಡೋಜ ಎಚ್ ಎಲ್ ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿಗೆ ಜಾನಪದ ವಿದ್ವಾಂಸ ಹಿ.ಶಿ.ರಾಮೇಚಂದ್ರೇ ಗೌಡ, ನಾಡೋಜ ಡಾ.ಜಿ. ನಾರಾಯಣ ಜಾನಪದ ಲೋಕ ಪ್ರಶಸ್ತಿಗೆ ವಾದನ ಕಲಾವಿದರಾದ ಚಿಕ್ಕಣ್ಣ, ಶ್ರೀಮತಿ ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿಗೆ ಜನಪದ ಛಾಯಾ ಗ್ರಾಹಕರಾದ ಡಾ.ಸಿರಿಗಂಧ ಶ್ರೀನಿವಾಸ ಮೂರ್ತಿ ಅವರು ಆಯ್ಕೆಯಾಗಿದ್ದು, ಹಾಗೆಯೇ ಜಾನಪದ ಕ್ಷೇತ್ರದ ಇತರ ಪ್ರಶಸ್ತಿಗಳಿಗೆ ನಾಡಿನ ಸಾಧಕರು ಆಯ್ಕೆಯಾಗಿದ್ದಾರೆ. ಫೆ.8 ರಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆದಿ ಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳು ಉಪಸ್ಥಿತಿಯಲ್ಲಿ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...