ನಾಳೆ ಸಂಬಾರತೋಟ ಕುಟುಂಬದ “ಫ್ಯಾಮಿಲಿ ಸ್ಪೋರ್ಟ್ಸ್ ಡೇ – 2026”

Date:

ಉಳ್ಳಾಲ: ಸಂಬಾರತೋಟ ಕುಟುಂಬದ ಸದಸ್ಯರ ಸೌಹಾರ್ದತೆ, ಒಗ್ಗಟ್ಟು ಹಾಗೂ ಕುಟುಂಬ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ “ಸಂಬಾರತೋಟ ಫ್ಯಾಮಿಲಿ ಸ್ಪೋರ್ಟ್ಸ್ ಡೇ – 2026” ಕಾರ್ಯಕ್ರಮವು ಜುಲೈ 19, 2026 (ಭಾನುವಾರ) ರಂದು ಇನೋಳಿ ಲಾಲ್‌ಪತ್ತಾರ್ ರೆಸಾರ್ಟ್ ನಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 5.30ರವರೆಗೆ ನಡೆಯಲಿದೆ.
ಕುಟುಂಬದ ಹಿರಿಯರಾದ ಅಹ್ಮದ್ ಅಜ್ಜ ಹಾಗೂ ಬೀಚಿಮ್ಮ ಅಜ್ಜಿ ಅವರ ಕುಟುಂಬದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕುಟುಂಬದ ಅಗಲಿದ ಹಿರಿಯರಾದ ಅರಬಿ ಅಜ್ಜ, ಮೊಯ್ದೀನ್ ಅಜ್ಜ, ಔರಾನ್ ಅಜ್ಜ, ಇಸ್ಮಾಯಿಲ್ ಅಜ್ಜ, ಹಸೈನ್ ಅಜ್ಜ, ಮೂಸಾ ಅಜ್ಜ, ಇಬ್ರಾಹಿಂ ಅಜ್ಜ, ಖತೀಜುಮ್ಮ, ಉಮ್ಮನ್ಹಿಯುಮ್ಮ ಹಾಗೂ ಬೀಫಾತುಮ್ಮ ಅವರ ನೆನಪಿಗೂ ಗೌರವ ಸಲ್ಲಿಸಲಾಗುವುದು.
ಕಾರ್ಯಕ್ರಮದಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು, ಮನರಂಜನಾ ಆಟಗಳು, ಮಕ್ಕಳಿಗಾಗಿ ವಿಶೇಷ ಸ್ಪರ್ಧೆಗಳು ಹಾಗೂ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿವೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುವುದು.
ಇದರೊಂದಿಗೆ, ಕುಟುಂಬದ ಸದಸ್ಯರ ಪರಸ್ಪರ ಪರಿಚಯ, ನೆನಪುಗಳ ಹಂಚಿಕೆ ಹಾಗೂ ಒಗ್ಗಟ್ಟಿನ ಸಂದೇಶ ಸಾರುವ ವಿವಿಧ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ
ಸಂಬಾರತೋಟ ಕುಟುಂಬದ ಎಲ್ಲಾ ಸದಸ್ಯರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜುಲೈ 20: ಕಲ್ಲಡ್ಕ ಮಸೀದಿಯ ನೂತನ ಖಾಝಿಯಾಗಿ ಜಿಫ್ರಿ ಮುತ್ತುಕೋಯಾ ತಂಙಳ್ ಅಧಿಕಾರ ಸ್ವೀಕಾರ

ಬಂಟ್ವಾಳ: ಇತ್ತೀಚೆಗೆ ನಿಧನರಾದ ಶೈಖುನಾ ತ್ವಾಖಾ ಉಸ್ತಾದ್ ಅವರ ಉತ್ತರಾಧಿಕಾರಿಯಾಗಿ ಕಲ್ಲಡ್ಕ...

ಉಚ್ಚಿಲ: ಸೋಮೇಶ್ವರ ಪೆಟ್ರೋಲ್ ಪಂಪ್‌ನಲ್ಲಿ ಸ್ಪೀಡ್-೧೦೦ ಮಾರುಕಟ್ಟೆಗೆ ಬಿಡುಗಡೆ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಪರಿಚಯಿಸಿರುವ ಅತಿ ಉನ್ನತ ಮಟ್ಟದ...

ಟಿಪ್ಪುನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ ವಾರ್ಷಿಕೋತ್ಸವದ ಸ್ವಾಗತ ಸಮಿತಿ ರಚನೆ

ವಿಟ್ಲ: ವಿಟ್ಲದ ಟಿಪ್ಪು ನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ...