ಮಂಗಳೂರು:ಕಣಚೂರು ಮಹಿಳಾ ಪದವಿಪೂರ್ವ ಕಾಲೇಜು ದೇರಳಕಟ್ಟೆ ಇದರ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 99 ಫಲಿತಾಂಶ ಲಭಿಸಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು 218 ವಿದ್ಯಾರ್ಥಿನಿಯರಲ್ಲಿ 68 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ, 132 ವಿದ್ಯಾರ್ಥಿನಿಯರು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ (PCMB) 32 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅನ್ ಫ ಮರಿಯಮ್ ಕೆ ಎ 581(96.83%),ಸಾರ ಸೈಮಾ 579(96.5%), ಅಂಕಗಳನ್ನು ಗಳಿಸಿರುತ್ತಾರೆ.


ವಾಣಿಜ್ಯ ವಿಭಾಗದ ಕಂಪ್ಯೂಟರ್ ಸೈನ್ಸ್ (ಗಣಕ ವಿಜ್ಞಾನ) ವಿಭಾಗದಲ್ಲಿ 30 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಅಲೀನ ಆಯಿಷಾ 588(98 %) , ಶರೋನ್ ಸಲೋನಿ ಮಾಬೆನ್ 586 (97.66%) ಅಂಕ ಗಳಿಸಿರುತ್ತಾರೆ.


ವಾಣಿಜ್ಯವಿಭಾಗದಲ್ಲಿ (HEBA) 01 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಆಮಿನಾ ಹಸ್ನ ಅನೀಫ್ (87 %) ಗಳಿಸಿರುತ್ತಾರೆ . ಕಲಾ ವಿಭಾಗದಲ್ಲಿ 05 ವಿದ್ಯಾರ್ಥಿನಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಹಲೀಮತ್ ರಮೀಝ 574 (95.66% ), ಹಿಬಾ ಜೈನಬ 548 (91.33%) ಅಂಕಗಳನ್ನು ಗಳಿಸಿರುತ್ತಾರೆ.



ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿನಿಯರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ಬೋಧಕೇತರ ಸಿಬ್ಬಂಧಿಗಳ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


