ಮೂಡಬಿದಿರೆ ಜ್ಯೋತಿನಗರ ಶಾಲೆಯಲ್ಲಿ ವಿಶೇಷ ಮಕ್ಕಳಿಗಾಗಿ ‘ಕ್ರೀಡೆ-ಅರಿವು’ ಕಾರ್ಯಕ್ರಮ

Date:

ಮೂಡುಬಿದಿರೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮೂಡುಬಿದಿg ಸಹಯೋಗದೊಂದಿಗೆ ಜ್ಯೋತಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಮಕ್ಕಳು ಮತ್ತು ಅವರ ಪೋಷಕರಿಗಾಗಿ ಕ್ರೀಡೆ ಮತ್ತು ಅರಿವು ಕಾರ್ಯಕ್ರಮ ಮಂಗಳವಾರ ನಡೆಯಿತು.

ಸಮನ್ವಯ ಅಧಿಕಾರಿ ಸೌಮ್ಯ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಡಿಎಂಸಿ ಸದಸ್ಯೆ ಸಂಗೀತ ಅಧ್ಯಕ್ಷತೆವಹಿಸಿದ್ದರು.

ಸುಶೀಲ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.

ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಖಾದರ್, ವಿಶೇಷ ಮಕ್ಕಳು ಮತ್ತು ಪೋಷಕರಿಗೆ ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯ ನಿಯಮಗಳ ಮಾಹಿತಿ ನೀಡಿದರು.

ವಿಶೇಷ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ದೈಹಿಕ ಶಿಕ್ಷಕಿ ಶಾಂತಿ ಮತ್ತು ಚಂದ್ರಿಕಾ ಕ್ರೀಡಾಕೂಟವನ್ನು ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ಆಪೋಲಿನ್ ಸ್ವಾಗತಿಸಿದರು. ಶಿಕ್ಷಕಿ ಹೇಮಾ ಕಾರ್ಯಕ್ರಮ ನಿರೂಪಿಸಿ, ಗೌರವ ಶಿಕ್ಷಕಿ ಮನಿಷಾ ವಂದಿಸಿದರು. ಬಿ.ಐ.ಆರ್.ಟಿ ಸುಶೀಲಾ ಹೆಗ್ಡೆ ಮತ್ತು ಫ್ಲೇವಿ ಕಾರ್ಯಕ್ರಮವನ್ನು ಸಂಘಟಿಸಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಜ್ಯಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟ: ಆಳ್ವಾಸ್ ಕ್ರೀಡಾಪಟುಗಳ ಗಮನಾಹ೯ ಸಾಧನೆ

ಮೂಡುಬಿದಿರೆ: ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾದ ರಾಜ್ಯಮಟ್ಟದ ದಸರಾ ಸಿಎಂ ಕಪ್...

ಪುತ್ತಿಗೆ ಗುಂಡ್ಯಡ್ಕದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕ ಶ್ರೀನಿವಾಸಪುರ ವಿಠೋಭ ಭಜನಾ...

ಮೂಡಬಿದಿರೆ: ಧವಲಾ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ‘ವೇಯ್ಟ್ ಲಿಫ್ಟಿಂಗ್’ ಸ್ಪರ್ಧೆ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಶ್ರೀ ಧವಲಾ ಕಾಲೇಜಿನಲ್ಲಿ 2026-27ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ...

ಮಂಗಳೂರು: ಎಂಆರ್‌ಪಿಎಲ್ ಸ್ಫೋಟ ದುರಂತಕ್ಕೆ ಮತ್ತೊಂದು ಬಲಿ; ಗಂಭೀರ ಗಾಯಗೊಂಡಿದ್ದ ರಾಜೇಶ್ ಡಿಸಿಲ್ವ ನಿಧನ

ಮಂಗಳೂರು: ಮಂಗಳೂರು ನಗರದ ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ದುರಂತ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ...