ಉಳ್ಳಾಲ: ಉಚಿತ ವೈದ್ಯಕೀಯ, ಆರೋಗ್ಯ ತಪಾಸಣಾ ಶಿಬಿರ

Date:

ಉಳ್ಳಾಲ:ರಹ್ಮಾನಿಯ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ,ಕಣಚೂರ್ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್, ನಾಟೆಕಲ್ ಇದರ ಸಹಯೋಗದಲ್ಲಿ ಉಚಿತ ವೈದ್ಯಕೀಯ ಆರೋಗ್ಯ ತಪಾಸಣೆ ಶಿಬಿರವು ಬೀರಿಯ ಕಾರ್ಮೆಲ್ ಶಾಲಾವರಣದಲ್ಲಿ ನಡೆಯಿತು.

ರಹ್ಮಾನಿಯ ಮಸೀದಿ ಖತೀಬ್ ಮೌಲಾನ ಮೌಸಿನ್ ನವಾಝ್ ಕಾರ್ಯಕ್ರಮ ಉದ್ಘಾಟಿಸಿದರು.
ಕಣಚೂರು ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಮೆನೇಜರ್ ಅಬ್ದುಲ್ಲಾ ಎನ್ ಖಾನ್ ಮಾತನಾಡಿ, ವೈದ್ಯಕೀಯ ಆರೋಗ್ಯ ತಪಾಸಣೆ ಶಿಬಿರ, ಅಭಾ ಕಾರ್ಡ್ ಮತ್ತದರ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ರಹ್ಮಾನಿಯ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಚಯರ್ ಮ್ಯಾನ್ ಅಬ್ದುಲ್ ರಹಿಮಾನ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು
ಈ ಸಂದರ್ಭದಲ್ಲಿ ,ಡಾ .ತಾರನಾಥ್ ಶೆಟ್ಟಿ , ಕಣಚೂರು ಮೆಡಿಕಲ್ ಕಾಲೇಜು ಅಬ್ದುಲ್ಲಾ ಖಾನ್ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಸಂಘಟನೆಗಳ ಸದಸ್ಯರು, ವಿದ್ಯಾರ್ಥಿಗಳು ಮಹಿಳೆಯರು ಭಾಗವಹಿಸಿ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು
ಈ ಕಾರ್ಯಕ್ರಮ ದಲ್ಲಿ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಕರೀಮ್, ಸೋಮೇಶ್ವರ ಪುರಸಭೆ ಸೆಕ್ಷನ್ ಆಫೀಸರ್ ಕೃಷ್ಣ ಆರ್,ಕೌನ್ಸಿಲರ್ ಶ್ರೀಲತಾ ದಿನೇಶ್, ಕರ್ಮೆಲ್ ಸ್ಕೂಲ್ ಜೊತೆ ಕಾರ್ಯದರ್ಶಿ ಬಗಿನಿ ಜುಲಿಯಾನ ಮೇರಿ, ಪ್ರಿನ್ಸಿಪಾಲ್ ಪ್ರಮೀಳಾ ಎ.ಸಿ. ಉಪಸ್ಥಿತರಿದ್ದರು.
ಚಾರಿಟೇಬಲ್ ಟ್ರಸ್ಟ್ ಯೂತ್ ಫಾರ್ಮ್ ಉಪಾಧ್ಯಕ್ಷ ಶೇಖ್ ಮೊಹಮ್ಮದ್ ಮೌಸೀನ್ ಸ್ವಾಗತಿಸಿದರು.
ಹಮೀದ್ ಹಸನ್ ಮಾಡೂರು ಕಾರ್ಯಕ್ರಮ ನಿರೂಪಿಸಿದರು. ಅಫ್ರಾನ್ ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...