ಬಹುಮುಖ ಪ್ರತಿಭೆ ಅಭಿಷ್ ಪೂಜಾರಿಗೆ “ಕಲಾರತ್ನ” ಪ್ರಶಸ್ತಿ

Date:

ಮೂಡುಬಿದಿರೆ: ಮಾರ್ನಾಡಿನ ಬಹುಮುಖ ಪ್ರತಿಭೆಯ ವಿದ್ಯಾರ್ಥಿ ಅಭಿಷ್ ಪೂಜಾರಿಗೆ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ವತಿಯಿಂದ ‘ಕಲಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ತಂಡ್ರಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಯಾಗಿರುವ ಅಭಿಷ್‌ಗೆ ಸಂಸ್ಥೆಯ ಮಂಗಳೂರು ಕಚೇರಿಯಲ್ಲಿ ನಡೆದ ವ್ಯಾಲ್ಯೂ ಅವಾರ್ಡ್ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧಿಕಾರಿಗಳು ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.


ಮಾರ್ನಾಡು ಬಂಗೇರದಡಿಯ ವಿಶ್ವನಾಥ ಪೂಜಾರಿ ಮತ್ತು ಸುಮಿತ್ರಾ ದಂಪತಿಯ ತೃತೀಯ ಪುತ್ರನಾಗಿರುವ ಅಭಿಷ್, ಈ ಹಿಂದೆ ಜನಪ್ರಿಯ ರಿಯಾಲಿಟಿ ಶೋ ‘ಡ್ರಾಮಾ ಜೂನಿಯರ್’ ಮೂಲಕ ಮನೆಮಾತಾಗಿದ್ದಾನೆ. ಅಲ್ಲದೆ, ‘ಸೂ ಫ್ರಮ್ ಸೋ’, ‘ದಸ್ಕತ್’ ಸಹಿತ ಹಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾನೆ.

ಅಭಿಷ್ ನೃತ್ಯ, ಯಕ್ಷಗಾನ, ಸಂಗೀತ, ನಟನೆ ಮತ್ತು ಭಜನೆ ಸೇರಿದಂತೆ ಬಹುವಿಧದ ಕಲಾಪ್ರತಿಭೆಯನ್ನು ಹೊಂದಿದ್ದಾನೆ. ಪ್ರಶಸ್ತಿ ಸ್ವೀಕರಿಸಿದ ಈ ಸಾಧಕ ವಿದ್ಯಾರ್ಥಿಯನ್ನು ಶಾಲೆಯ ಎಸ್.ಡಿ.ಎಂ.ಸಿ., ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಹರೀಶ್ ಮಾಂಬಾಡಿ ಅವರಿಗೆ ಸಾಧನಾಶ್ರೀ ಪ್ರಶಸ್ತಿ ಪ್ರದಾನ

ಮಡಂತ್ಯಾರಿನ ಕಲಾಸಭಾಂಗಣದಲ್ಲಿ ಭಾನುವಾರ ಮಡಂತ್ಯಾರು ಜೇಸಿ ಆಯೋಜಿಸಿದ ಜೇಸಿ ವಲಯ 15ರ...

ಹುಬ್ಬುರ್ರಸೂಲ್ ಕಾನ್ಫರೆನ್ಸ್: ‘ಪ್ರವಾದಿಯ ಜೀವನದ ಬಗ್ಗೆ ಅಧ್ಯಯನ ಮಾಡಿ’

ಉಳ್ಳಾಲ: ಇಸ್ಲಾಮ್ ಧರ್ಮ ಭೊದಕ ಪ್ರವಾದಿ ಅವರ ಜೀವನದ ಬಗ್ಗೆ ಅಧ್ಯಯನ...

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...