ಮೂಡುಬಿದಿರೆ : ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಶ್ರೀ ದೇವರ ಹರಿಕೆ ಸೇವಾ ಚಿಕ್ಕಮೇಳ ( ಪುತ್ತಿಗೆ ಚಿಕ್ಕಮೇಳ ) ವು ೩೬ ನೇ ವರ್ಷ ತಿರುಗಾಟ ನಡೆಸುತ್ತಾ ಮೂಡುಬಿದಿರೆ ಹಾಗೂ ಪರಿಸರದ ಮತ್ತು ಕಾರ್ಕಳ ವಠಾರದ ಸುಮಾರು ೩೩೦೪ ಮನೆಗಳಲ್ಲಿ ಹರಿಕೆ ಸೇವಾ ಯಕ್ಷಗಾನ ಕಾರ್ಯಕ್ರಮ ವನ್ನು ನಡೆಸಿ ಈ ತಿರುಗಾಟದ ಕೊನೆಯ ಸೇವೆ ಆಟವನ್ನು ಶ್ರೀ ಕ್ಷೇತ್ರ ಪುತ್ತಿಗೆ ಶ್ರೀ ದೇವರ ಸನ್ನಿಧಿಯಲ್ಲಿ ಅ. ೨೦ ರಂದು ದೀಪಾವಳಿ ಅಮಾವಾಸ್ಯೆಯಂದು ನಡೆಸಿತು.



