ಮಂಗಳೂರು: ಹವ್ಯಕ ಬ್ರಾಹ್ಮಣರ ಸ್ವಾಮೀಜಿ ರಾಘವೇಶ್ವರ ಬಾರತಿ ಸ್ವಾಮೀಜಿ ಮತ್ತು ಮಠದ ವಿರುದ್ಧ ದಿನಾಂಕ 27/5/2009 ರ ಗೌರಿ ಲಂಕೇಶ್ ಪತ್ರಿಕೆಯ ಸಂಚಿಕೆಯಲ್ಲಿ, ಮಠಕ್ಕೆ ಹಿಂದಿ ಸಿನಿಮಾ ತಾರೆ ಮಲ್ಲಿಕಾ ಶರಾವತ್ ಬೇಟಿ ಕೊಟ್ಟದರ ಹಿನ್ನೆಲೆಯಲ್ಲಿ ಪತ್ರಿಕೆಯ ಮುಖಪುಟದ ಪ್ರಮುಖ ವಿಷಯವಾಗಿ ಪೋರಿ ಹಿಂದೆ ಹೊರಿ ಎಂಬ ತಲೆಬರಹದಲ್ಲಿ ಸ್ವಾಮೀಜಿ ಮತ್ತು ಮಠದ ಕುರಿತು ಅವಹೇಳನ ಮತ್ತು ಜಾತಿ ಜಾತಿ ಮದ್ಯೆ ವೈರುಧ್ಯ ಉಂಟು ಮಾಡುವ ವರದಿಯನ್ನು ಪ್ರಮುಖ ಅಂಕಣಕಾರ ಬೀಳಿದಳೆ ಇಶಾ ಬರೆದು ಅದನ್ನು ಫೋಟೋ ಸಹಿತವಾಗಿ ಲಂಕೇಶ್ ಪತ್ರಿಕೆ ಪ್ರಕಟ ಪಡಿಸಿತು ಎಂದು ಮಠದ ಭಕ್ತ ಉಪ್ಪಿನಂಗಡಿಯ ಕೇಶವ ಕೃಷ್ಣ ಎಂಬವರು ಪುತ್ತೂರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿ ಒಂದನೇ ಆರೋಪಿಯಾಗಿ ಗೌರಿ ಲಂಕೇಶ ಮತ್ತು ಎರಡನೇ ಆರೋಪಿಯಾಗಿ ಅಂಕಣಕಾರ ಬೀಳಿದಳೆ ಇಶಾರ ವಿರುದ್ಧ ದೂರು ನೀಡಿದ್ದರು.

ಅದರಂತೆ ನ್ಯಾಯಾಲಯ ಆರೋಪಿಗಳ ವಿರುದ್ಧ ದೋಷಾರೋಪಣೆ ಮಾಡಿತು, ಈ ಮಧ್ಯದಲ್ಲಿ ಒಂದನೇ ಆರೋಪಿ ಗೌರಿ ಲಂಕೇಶ್ ಕೊಲೆಗೆಯ್ಯಲ್ಪಟ್ಟರು, ಎರಡನೇ ಆರೋಪಿ ವಿರುದ್ಧ ಸುದೀರ್ಘ ಹದಿನಾರು ವರ್ಷ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಆರೋಪ ಮುಕ್ತ ಗೊಳಿಸಿ ಆದೇಶ ಮಾಡಿತು. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಅಶ್ರಫ್ ಅಗ್ನಾಡಿ , ಮಜೀದ್ ಖಾನ್, ಸಲೀನಾ ನೆಕ್ಕಿಲಾಡಿ ಮತ್ತು ಮಿಸ್ರಿಯಾ ಮಿತ್ತೂರು ವಾದಿಸಿದ್ದರು.
ಹಿರಿಯ ಶ್ರೇಣಿ ನ್ಯಾಯಾಲಯದ ಹೊಸ ಕಟ್ಟಡದಲ್ಲಿ ಆರಂಭವಾದ ಬಳಿಕ ಇದು ಮೊದಲ ಜಡ್ಜ್ಮೆಂಟ್ ಆಗಿದೆ.



