ಕೂಟ ಮಹಾಜಗತ್ತು ಮೂಡುಬಿದಿರೆ ಅಂಗಸಂಸ್ಥೆ ಉದ್ಘಾಟನೆ

Date:

ಮೂಡುಬಿದಿರೆ: ಸಾಲಿಗ್ರಾಮದ ಕೂಟ ಮಹಾ ಜಗತ್ತು ಸಂಸ್ಥೆಯ 38 ನೇ ಅಂಗ ಸಂಸ್ಥೆಯ ಸ್ಥಾಪನೆ ಮತ್ತು ಉದ್ಘಾಟನೆ ಇತ್ತೀಚೆಗೆ ಮೂಡುಬಿದಿರೆ ಶ್ರೀ ಗೋಪಾಲಕೃಷ್ಣ ದೇವಳದ ಪ್ರಾಂಗಣದಲ್ಲಿ ನಡೆಯಿತು.

ಕೂಟ ಮಹಾ ಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷರಾದ ಎಚ್‌. ಸತೀಶ್‌ ಹಂದೆ ಅವರು ಉದ್ಘಾಟಿಸಿದರು. ಡಾ. ಎನ್‌. ಸೋಮಶೇಖರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗುರು ನರಸಿಂಹ ದೇವಳದ ಆಡಳಿತ ಮಂಡಳಿಯ ಸದಸ್ಯರೂ, ಕೇಂದ್ರ ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ಪಿ. ಸದಾಶಿವ ಐತಾಳ್ ಅವರು ಈ ಶುಭಾಂಶನೆಗೈದರು.


ಕೇಂದ್ರ ಸಂಸ್ಥೆಯ ಪದಾಧಿಕಾರಿಗಳ ಪೈಕಿ ಉಪಾಧ್ಯಕ್ಷರಾದ ಸಿಎ ಚಂದ್ರಶೇಖರ ಐತಾಳರು , ಹಾಗೂ ಪ್ರಧಾನ ಕಾರ್ಯದರ್ಶಿ ಗಳಾದ ಸುರೇಶ್ ತುಂಗ, ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಹೊಳ್ಳ, ಜೊತೆ ಕಾರ್ಯದರ್ಶಿ ಗಳಾದ ಭಾರತಿ ಶ್ರೀಧರ್ ತುಂಬೆ,ಮತ್ತು ಹೆಚ್. ಕೆ ಕುಮಾರ ಹೊಳ್ಳ ಶುಭ ಹಾರೈಸಿದರು.


ಬಿಲಿಯನ್ ಫೌಂಡೇಷನ್ ಟ್ರಸ್ಟ್ ನ ಗೌರವ ಕೋಶಾಧಿಕಾರಿ ವಿಶ್ವನಾಥ ಸೋಮಯಾಜಿ ಅವರು ಟ್ರಸ್ಟ್ ಬಗ್ಗೆ ಮಾಹಿತಿ ನೀಡಿದರು. ರಮೇಶ್ ಹೊಳ್ಳ ಕೋರ್ಯ,ಶ್ರೀಧರ ಹೊಳ್ಳ , ವಾಸುದೇವ ಸೋಮಯಾಜಿ ವಿನಯ ಕಾರಂತ್, ಆರ್.ಕೆ. ಎಂಟರ್ ಪ್ರೈಸಸ್ ನ ರಾಮಕೃಷ್ಣ ಭಟ್, ದೇವಳದ ಆನುವಂಶಿಕ ಮೊಕ್ತೇಸರ ಗುರು ಪ್ರಸಾದ್ ಹೊಳ್ಳ ಉಪಸ್ಥಿತರಿದ್ದರು. ಸುದರ್ಶನ್ ರಾವ್ ಕಾಯ೯ಕ್ರಮ ನಿರೂಪಿಸಿದರು.


ಕೂಟ ಮಹಾಜಗತ್ತು ಸಾಲಿಗ್ರಾಮ ಸಂಸ್ಥೆ ಯ ನಿಬಂಧನೆಗಳನ್ನು ಡಾ. ಎನ್.ಸೋಮಶೇಖರ್ ಮಯ್ಯರಿಗೆ ವಿದ್ಯುಕ್ತವಾಗಿ ಹಸ್ತಾಂತರಿಸಿ, ಹೊಸ ಶಾಖೆಯ ಅಧ್ಯಕ್ಷತೆ ವಹಿಸುವಂತೆ ಸೂಚಿಸಲಾಯಿತು. ಗೌರವ ಅಧ್ಯಕ್ಷರಾಗಿ ರಾಮಕೃಷ್ಣ ಭಟ್, ಉಪಾದ್ಯಕ್ಷ ರುಗಳಾಗಿ ಚಂದ್ರಶೇಖರ್ ಮಯ್ಯ ಮತ್ತು ಅನಂತ ಪದ್ಮನಾಭ ಹೊಳ್ಳ , ಕಾರ್ಯದರ್ಶಿ ಯಾಗಿ ಸುದರ್ಶನ್ ರಾವ್, ಖಜಾಂಚಿಯಾಗಿ ಜಯರಾಮ ರಾವ್ ರವರ ಆಯ್ಕೆಯಾದರು.


ಸ್ಥಾಪಕ ಸಮಿತಿಯ ಗೌರವ ಸದಸ್ಯರಾದ, ವಾಸುದೇವ ಉಪಾಧ್ಯ,ರವಿ ಶಂಕರ ಕಾರಂತ್, ಪರಶುರಾಮ ಐತಾಳ್,ಉದಯ ಕುಮಾರ್,ನರಸಿಂಹ ಕಾರಂತ್, ಸೀತಾರಾಮ ರಾವ್, ರಾಮಕೃಷ್ಣರಾವ್ ಅವರನ್ನು ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

IPS ಅಧಿಕಾರಿಯ ವಿರುದ್ಧ SP ಗಂಭೀರ ಆರೋಪ – DGP ಗೆ ಪತ್ರ ಬರೆದು, “30 ನಿಮಿಷ ಕೊಡಿ, ಸತ್ಯ ಬಯಲು ಮಾಡ್ತೇನೆ” ಎಂದು ಉಲ್ಲೇಖ…!!!

ಮಾನಸಿಕ ಕಿರುಕುಳ, ತಾರತಮ್ಯ ಆರೋಪ; ಪೊಲೀಸ್ ಇಲಾಖೆಯಲ್ಲಿ ಸಂಚಲನ ಬೆಂಗಳೂರು: ಕರ್ನಾಟಕ ಪೊಲೀಸ್...

ಬಳ್ಕುಂಜೆಯಲ್ಲಿ ಕುದಿ ಕಂಬಳ: ಹೊಳೆಗೆ ಹಾರಿ ಪ್ರಾಣಬಿಟ್ಟ ದೂಜ

ಮೂಡುಬಿದಿರೆ: ಕಂಬಳದ ಕನೆ ಹಲಗೆ ವಿಭಾಗದಲ್ಲಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿದ್ದ ತಿರುವೈಲು...

ಲೇಖಕಿ ರೆಶೆಲ್ ಫೆರ್ನಾಂಡಿಸ್ ಅವರಿಗೆ ದಿವಾ ಪ್ಲಾನೆಟ್ ವತಿಯಿಂದ ಟಾಪ್ 50 ಗಮನಾರ್ಹ ಮಹಿಳಾ ಗೌರವ

ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಪ್ರಮುಖ ಯುವ ಲೇಖಕಿ ಮತ್ತು ವಾಗ್ಮಿ, ಎಬಿವಿಪಿ...

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಮೂಡುಬಿದಿರೆ: ಕರಾವಳಿ ಹಾಗೂ ಮಲೆನಾಡಿನ...