ಪಡುಮಾರ್ನಾಡು: ಸುಮುಖ ಮಂದಿರ, ಸಭಾಭವನಕ್ಕೆ ಧರ್ಮಸ್ಥಳ ಯೋಜನೆಯಿಂದ ದೇಣಿಗೆ

Date:


ಮೂಡುಬಿದಿರೆ: ಪಡುಮಾರ್ನಾಡು ಅಚ್ಚರಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸುಮುಖ ಮಂದಿರ ಹಾಗೂ ಸಭಾಭವನದ ಅಭಿವೃದ್ಧಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 1 ಲಕ್ಷ ರೂ. ದೇಣಿಗೆಯನ್ನು ಉಷಾ ಡಿ.ಪೈ-ದಯಾನಂದ ಪೈ ವೇದಿಕೆಯಲ್ಲಿ ಶುಕ್ರವಾರ ಹಸ್ತಾತರಿಸಲಾಯಿತು.


ತಾಲೂಕು ಯೋಜನಾಧಿಕಾರಿ ಧನಂಜಯ್ ದೇಣಿಗೆಯನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಂ.ದಯಾನಂದ ಪೈ ಅವರಿಗೆ ಹಸ್ತಾಂತರಿಸಿದರು. ದೇಣಿಗೆ ಸ್ವೀಕರಿಸಿ ಮಾತನಾಡಿ ದಯಾನಂದ ಪೈ, ಗಣೇಶೋತ್ಸವ ಸಮಿತಿ ಮಾತ್ರವಲ್ಲದೆ ಊರಿನ ಧಾರ್ಮಿಕ, ಶೈಕ್ಷಣಿಕ ಕೇಂದ್ರಗಳಿಗೆ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಯೋಜನೆಯ ಮುಖೇನ ದೇಣಿಗೆ, ಸವಲತ್ತುಗಳು ಲಭಿಸಿವೆ. ಸಮಿತಿಯಿಂದ ಈಗಾಗಲೇ ಸುಸಜ್ಜಿತವಾದ ಸಭಾಭವನ ಹಾಗೂ ಮಂದಿರ ನಿರ್ಮಾಣಗೊಂಡಿದೆ. ಮುಂದೆ ಭೋಜನಾಲಯ, ಅಡುಗೆ ಕೋಣೆಯ ಯೋಜನೆಯನ್ನು ರೂಪಿಸಿದ್ದೇವೆ ಎಂದರು.


ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಬೆಳುವಾಯಿ ವಲಯಾಧ್ಯಕ್ಷ ಜಗತ್ಪಾಲ್ ಎಸ್.ಹೆಗ್ಡೆ, ಯೋಜನೆಯ ಮೇಲ್ವಿಚಾರಕಿ ಯಶೋಧ, ಒಕ್ಕೂಟದ ಅಧ್ಯಕ್ಷ ಶ್ಯಾಮ್ ಹೆಗ್ಡೆ, ಸೇವಾ ಪ್ರತಿನಿಧಿ ಉಷಾಕಿರಣ, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಉದಯ ಪೂಜಾರಿ, ಸಂಚಾಲಯ ದಯಾನಂದ ಭಟ್, ಕೋಶಾಧಿಕಾರಿ ಜಯರಾಂ, ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...