ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

Date:

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಅಬುದಾಬಿ ಸಮಿತಿ ವತಿಯಿಂದ, ಇಂಡಿಯನ್ ಇಸ್ಲಾಮಿಕ್ ಸೆಂಟರ್ ಸಹಯೋಗದೊಂದಿಗೆ ಆಗಸ್ಟ್ 26, ಬುಧವಾರ ದಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

“ಪ್ರವಾದಿ ﷺ ರವರ ಜೀವನ ಮಾನವತೆಗೆ ಮಾದರಿ” ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮೌಲಿದ್ ಮಜ್ಲಿಸ್, ಬುರ್ದಾ ಮಜ್ಲಿಸ್ ಹಾಗೂ ದೀನಿ ಪ್ರಭಾಷಣ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ KCF UAE ರಾಷ್ಟ್ರೀಯ ಅಧ್ಯಕ್ಷ, ಪ್ರಸಿದ್ಧ ವಾಗ್ಮಿ ಇಬ್ರಾಹೀಂ ಸಖಾಫಿ ಕೆದುಂಬಾಡಿ ಅವರು ಮುಖ್ಯ ಪ್ರಭಾಷಣ ಮಾಡಲಿರುವರು.

ಹಲವು ಧಾರ್ಮಿಕ, ಸಾಮಾಜಿಕ ಮತ್ತು ಅನಿವಾಸಿ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಅನಿವಾಸಿ ಪ್ರವಾದಿ ಪ್ರೇಮಿಗಳ ಆಗಮನವನ್ನು ನಿರೀಕ್ಷಿಸಲಾಗಿದೆ.

ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು:
ಚೇರ್ಮನ್: ಮುಹಮ್ಮದ್ ಅಲಿ ಹಾಜಿ ಬ್ರೈಟ್
ಕನ್ವೀನರ್: ಅಬ್ದುಲ್ ರಝಾಕ್ ಸಅದಿ ವಗ್ಗ
ಖಜಾಂಜಿ: ಹಮೀದ್ ಕುಂಬಳೆ

ಸದಸ್ಯರು: ಉಮರ್ ಈಶ್ವರಮಂಗಿಲ, ಅಶ್ರಫ್ ಮುಸ್ಲಿಯಾರ್, ಹಮೀದ್ ಮುಸ್ಲಿಯಾರ್ ಕುಪ್ಪೆಟ್ಟಿ, ಇಮ್ರಾನ್ ಕೆ.ಸಿ ರೋಡ್, ಹಾರಿಸ್ ಸಅದಿ ಮೂರ, ಲತೀಫ್ ಕನ್ನಡ್ಕ, ಅಶ್ರಫ್ ಸರಳಿಕಟ್ಟೆ, ಉಮರ್ ಸಖಾಫಿ, ಶರೀಫ್ ಬೊಳ್ಮಾರ್, ಹಂಝ ಬಂಗ್ಲೆ, ಹನೀಫ್ ಪಡೀಲ್, ಮುಕ್ಸಿತ್ ಝುಹ್ರಿ, ಫಾರೂಕ್ ಸಖಾಫಿ ಕನ್ಯಾನ, ನಿಸಾರ್ ಕುಂಬಳೆ, ಸಿದ್ದೀಕ್ ತೆಕ್ಕಾರ್, ಸಿದ್ದೀಕ್ ಅಳಿಕೆ, ಅರ್ಷದ್ ಪಡೀಲ್, ಸುಹೈಲ್ ಬಜ್ಪೆ, ಸಿದ್ದೀಕ್ ಕೆ.ಹೆಚ್ ಮೊದಲಾದವರನ್ನು ಆಯ್ಕೆ ಮಾಡಲಾಗಿದೆ.

ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು KCF ಅಬುದಾಬಿ ಸಮಿತಿಯ ಅಧ್ಯಕ್ಷ ಕಬೀರ್ ಬಾಯಂಬಾಡಿ ಹಾಗೂ ಸ್ವಾಗತ ಸಮಿತಿಯ ಕೋಆರ್ಡಿನೇಟರ್ ಹಕೀಂ ತುರ್ಕಳಿಕೆ ಕರೆ ನೀಡಿದ್ದಾರೆ.


LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...

ಮಂಗಳೂರು ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನಲ್ಲಿರಕ್ತದಾನ ಶಿಬಿರ

ದೇರಳಕಟ್ಟೆ 19: ಮಂಗಳೂರು ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಹಾಗೂ ಕಸ್ತೂರ್ಬಾ ಮೆಡಿಕಲ್...