ಬೆಳ್ತಂಗಡಿ; ನಮ್ಮೂರ ಪ್ರೌಢ ಶಾಲೆ ಗುರುವಾಯನಕೆರೆ ಇಲ್ಲಿನ ವಿದ್ಯಾರ್ಥಿ ಮಹಮ್ಮದ್ ಶಹಝಾದ್ 625 ರಲ್ಲಿ 616 ಅಂಕಗಳನ್ನು ಪಡೆಯುವ ಮೂಲಕ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ತಾಲೂಕಿಗೇ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

ಅವರಿಗೆ ಹಿಂದಿಯಲ್ಲಿ 100, ಕನ್ನಡದಲ್ಲಿ 124, ಇಂಗ್ಲೀಷ್ ಮತ್ತು ವಿಜ್ಞಾನದಲ್ಲಿ 99, ಗಣಿತದಲ್ಲಿ 98, ಸಮಾಜ ವಿಜ್ಞಾನದಲ್ಲಿ 96 ಅಂಕಗಳು ಲಭಿಸಿದೆ.
ಸಹಝಾದ್ ಅವರು ಅಲ್ ಮಸ್ಜಿದುಲ್ ಹುದಾ ಜುಮಾ ಮಸ್ಜಿದ್ ಸುನ್ನತ್‌ಕೆರೆಯ ನಿಕಟಪೂರ್ವ ಅಧ್ಯಕ್ಷ, ಪಿಲಿಚಂಡಿಕಲ್ಲು ಸರಕಾರಿ ಶಾಲಾ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಅಬ್ದುಲ್ ಹಕೀಂ ಶಾಫಿ ಮತ್ತು ಝೀನತ್ ದಂಪತಿ ಪುತ್ರರಾಗಿದ್ದಾರೆ.



