ಹೊಸ್ಮಾರಿನ ಅಣ್ಣಾಜೇರ್ ಪ್ರೇಮ್ ಕುಮಾರ್ ಜೈನ್ (ಅಣ್ಣಾಜಿ) ಇನ್ನಿಲ್ಲ

Date:

ಮೂಡಬಿದಿರೆ: ಪ್ರೇಮ್ ಕುಮಾರ್ ಜೈನ್

ಮೂಡಬಿದಿರೆ: ತುಳುನಾಡಿನ ಒಬ್ಬ ಪ್ರಮುಖ ಧಾರ್ಮಿಕ ಮುಖಂಡ, ಉದ್ಯಮಿ ಹಾಗೂ ಸೇವಕ ಹೊಸ್ಮಾರಿನ ಪ್ರೇಮ್ ಕುಮಾರ್ ಜೈನ್ (ಅವರು ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ಬೆಳಿಗ್ಗೆ ನಿಧನರಾದರು. ತಾಯಿ, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಕಾರ್ಕಳ ತಾಲೂಕಿನ ಹೊಸ್ಮಾರಿನಲ್ಲಿ ನೆಲೆಸಿದ್ದ ಇವರು ಕೃಷಿ, ವ್ಯಾಪಾರ ಮತ್ತು ರಾಜಕೀಯ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದರು.
ಆರಂಭಿಕ ಜೀವನ ಮತ್ತು ಹಿನ್ನೆಲೆ :
ಪ್ರೇಮ್ ಕುಮಾರ್ ಅವರು ಕಾರ್ಕಳ ತಾಲೂಕಿನ ನೂರಾಳ್ ಬೆಟ್ಟು ಮನೆತನದ ಆದಿರಾಜ ಮುರಾಯರು ಮತ್ತು ಲಲಿತಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಅವರು ಜೈನ ಸಂಪ್ರದಾಯದ ಧಾರ್ಮಿಕ ಪರಿಸರದಲ್ಲಿ ಬೆಳೆದು ಬಾಲ್ಯದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಮುನಿ ಸಂಘಗಳ ಸೇವೆಯಿಂದ ಪ್ರಭಾವಿತರಾಗಿದ್ದರು.

ವೃತ್ತಿಜೀವನ
ಕೃಷಿ ಮತ್ತು ಉದ್ಯಮ: ಮೂಲತಃ ಕೃಷಿಕರಾದ ಪ್ರೇಮ್ ಕುಮಾರ್ ಅವರು ನಂತರದ ದಿನಗಳಲ್ಲಿ ಹೊಸ್ಮಾರಿನಲ್ಲಿ ವ್ಯಾಪಾರ ಮತ್ತು ಉದ್ಯಮ ರಂಗಕ್ಕೆ ಪ್ರವೇಶಿಸಿ ಪರಿಚಿತ ವ್ಯಾಪಾರೋದ್ಯಮಿಯಾಗಿ ಗುರುತಿಸಿಕೊಂಡಿದ್ದರು.

ರಾಜಕೀಯ: ರಾಜಕೀಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದು, ಕಾರ್ಕಳ ತಾಲ್ಲೂಕು ಪಂಚಾಯತ್ ಸದಸ್ಯರಾಗಿ ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಧಾರ್ಮಿಕ ಸೇವೆ:
ಪ್ರೇಮ್ ಕುಮಾರ್ ಅವರು ಮುಖ್ಯವಾಗಿ ಧಾರ್ಮಿಕ ಕಾರ್ಯಕ್ರಮಗಳ ಸಂಘಟನೆಯಲ್ಲಿ “ರೂವಾರಿ” ಎಂದು ಹೆಸರಾಗಿದ್ದರು.

ಕ್ಷೇತ್ರಗಳು: ಶ್ರವಣಬೆಳಗೊಳ, ಕಾರ್ಕಳ, ವೇಣೂರು ಮತ್ತು ಧರ್ಮಸ್ಥಳದಂತಹ ಪುಣ್ಯಕ್ಷೇತ್ರಗಳ ಮಹಾಮಸ್ತಕಾಭಿಷೇಕಗಳಲ್ಲಿ ಸಕ್ರಿಯ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದಾರೆ.
ನಿರ್ವಹಣೆ: ಪೂಜಾ ಸಾಮಗ್ರಿಗಳ ಪೂರೈಕೆ, ಆಹಾರ ವಿಭಾಗದ ಮೇಲ್ವಿಚಾರಣೆ ಮತ್ತು ಪೂಜ್ಯ ತ್ಯಾಗಿಗಳ/ಮುನಿಗಳ ಆಹಾರ ವ್ಯವಸ್ಥೆಯನ್ನು (ಆಹಾರ ದಾನ) ಬಹಳ ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಇವರು ನಿಪುಣರು.
ಧಾರ್ಮಿಕ ಸೌಹಾರ್ದತೆ: ಕೇವಲ ಜೈನ ಧರ್ಮ ಮಾತ್ರವಲ್ಲದೆ, ಹಿಂದೂ ದೇವಸ್ಥಾನಗಳ ಬ್ರಹ್ಮಕಲಶೋತ್ಸವಗಳು ಮತ್ತು ದೈವಸ್ಥಾನಗಳ ಜಾತ್ರೆಗಳಲ್ಲೂ ಮುಂಚೂಣಿಯಲ್ಲಿ ನಿಂತು ಸಹಕರಿಸುವ ಮೂಲಕ ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ.
ಕೊಡುಗೈ ದಾನಿ: ಅನೇಕ ಬಸದಿಗಳು, ದೇವಸ್ಥಾನಗಳು, ಸಭಾಭವನಗಳು ಮತ್ತು ಅನ್ನಛತ್ರಗಳ ನಿರ್ಮಾಣ ಕಾರ್ಯದಲ್ಲಿ ಆರ್ಥಿಕವಾಗಿಯೂ ಸಹಾಯ ಹಸ್ತ ನೀಡಿದ್ದಾರೆ.
ಸಮಾಜ ಸೇವೆ ಮತ್ತು ಸಂಘಟನೆ
ಧಾರ್ಮಿಕ ಕ್ಷೇತ್ರವಲ್ಲದೆ ಇವರು ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಮದ್ಯವರ್ಜನ ಶಿಬಿರಗಳ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸಿದ್ದಾರೆ.
ಲಯನ್ಸ್ ಕ್ಲಬ್: ಲಯನ್ಸ್ ಕ್ಲಬ್ ಮೂಲಕ ವಿವಿಧ ಜನಪದ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ಶಿಕ್ಷಣ ಮತ್ತು ಕ್ರೀಡೆ: ಸ್ಥಳೀಯ ಶಾಲೆಗಳ ಅಭಿವೃದ್ಧಿ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

ಜೈನ ಧರ್ಮದ ಪ್ರಮುಖ ಧಾರ್ಮಿಕ ವಿಧಿವಿಧಾನಗಳಾದ ಮಹಾಮಸ್ತಕಾಭಿಷೇಕ ಮತ್ತು ಪಂಚಕಲ್ಯಾಣಗಳ ಯಶಸ್ವಿ ನಿರ್ವಹಣೆಯಲ್ಲಿ ಇವರು ಗುರುತಿಸಿಕೊಂಡಿದ್ದರು.

ವ್ಯಕ್ತಿತ್ವ :

ಇವರನ್ನು ಸಾರ್ವಜನಿಕರು ಪ್ರೀತಿಯಿಂದ “ಅಣ್ಣಾಜೇರ್” ಎಂದು ಕರೆಯುತ್ತಾ ಇದ್ದರು . ಸರಳತೆ, ನಗುಮುಖದ ಸೇವೆ ನೀಡುತ್ತಿದ್ದರು.

ಮೃತರ ಪಾರ್ಥಿವ ಶರೀರವು ಇಂದು ಮದ್ಯಾಹ್ನ ಹೊಸ್ಮಾರು ಧರ್ಮಶ್ರೀ ಆಗಮಿಸಲಿದ್ದು 12.00 ಗಂಟೆಯಿಂದ 2.00 ಗಂಟೆಯ ತನಕ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುವುದು, ನಂತರ ನೂರಾಳ್ ಬೆಟ್ಟು ಮನೆಯಲ್ಲಿ ಅಂತಿಮ ವಿಧಿ ವಿಧಾನ ನೆರವೇರಲಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದಾವಣಗೆರೆ ಸಾಮೂಹಿಕ ಅತ್ಯಾಚಾರ ಪ್ರಕರಣ: ವಿಮೆನ್ ಇಂಡಿಯಾ ಮೂವ್ಮೆಂಟ್ ಖಂಡನೆ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ...

ಜೂನ್ 21: ಮೂಡಬಿದಿರೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಮಹಾಸಭೆ

ಮೂಡಬಿದಿರೆ: ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ...

ಉಡುಪಿ: ತಾಯಿಯ ಕಂಕುಳಲ್ಲಿದ್ದ ಮಗುವಿನ ತಲೆಗೆ ಬಿದ್ದ ತೆಂಗಿನಕಾಯಿ; ಒಂದೂವರೆ ವರ್ಷದ ಕಂದಮ್ಮ ದಾರುಣ ಸಾವು

ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಹೆರಂಜೆಯಲ್ಲಿ ಹೃದಯವಿದ್ರಾವಕ ಘಟನೆ...

ಜನ ಸಾಮಾನ್ಯರಿಗೆ ಹಕ್ಕುಗಳು ನಿರಾಕರಣೆಯಾದಾಗ ಹೋರಾಟ ರೂಪಿಸುವುದು ನಾಯಕರ ಮೊದಲ ಜವಾಬ್ದಾರಿ: ಶಾಕಿರ್ ಅಳಕೆಮಜಲ್

ಬಂಟ್ವಾಳ, ಜೂನ್ 11: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)...