ಮೂಡುಬಿದಿರೆ: ಇಲ್ಲಿನ ರೋಟರಿ ಪಿ.ಯು.ಕಾಲೇಜಿನಲ್ಲಿ ಮಾದಕ ದ್ರವ್ಯ ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮ ಮಂಗಳವಾರ ನಡೆಯಿತು.

ಮೂಡುಬಿದಿರೆ ಪೋಲಿಸ್ ಠಾಣೆಯ ಎಸ್.ಐ ಪ್ರತಿಭಾ ಕೆ.ಸಿ ಅವರು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆಯ ಬಗ್ಗೆ ಮತ್ತು ಅದನ್ನು ಸಂಗ್ರಹಿಸುವ,ಮಾರುವುದರಿಂದ ಆಗುವ ಕಾನೂನಾತ್ಮಕ ಸಮಸ್ಯೆಗಳ ಬಗ್ಗೆ ತಿಳಿಸಿ, ಅದರ ಬಳಕೆಯಿಂದ ಸಮಾಜ, ಕುಟುಂಬ, ಸ್ನೇಹಿತರು, ಮತ್ತು ಆರೋಗ್ಯದ ಮೇಲೆ ಆಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ರವಿ ಕುಮಾರ್ ಉಪಸ್ಥಿತರಿದ್ದರು.
ಕಾಲೇಜಿನ ಉಪ ಪ್ರಾಂಶುಪಾಲೆ ವೈಶಾಲಿ ಸ್ವಾಗತಿಸಿದರು.
ಆಂಗ್ಲ ಭಾಷೆ ಉಪನ್ಯಾಸಕ ಗೌರಿಶಂಕರ್ ಕಾರ್ಯಕ್ರಮ ನಿರೂಪಿಸಿದರು. ಗಣಕ ವಿಜ್ಞಾನ ಉಪನ್ಯಾಸಕಿ ವಿದ್ಯಾಶ್ರೀ ಜೈನ್ ಅವರು ವಂದಿಸಿದರು.


