ಉಳ್ಳಾಲ: ಬದ್ರಿಯಾ ಜುಮಾ ಮಸೀದಿ ಹಾಗೂ ಸಿರಾಜುಲ್ ಉಲೂಂ ಮದ್ರಸ ಸಂತೋಷ ನಗರ, ಕುತ್ತಾರ್ ಇದರ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ಜಮಾಅತ್ ಅಧ್ಯಕ್ಷ ನಾದರ್ ಶಾ ಧ್ವಜಾರೋಹಣ ನೆರವೇರಿಸಿದರು. ಖತೀಬ್ ಉಸ್ತಾದ್ ಅಲೀ ಮದನಿ ಸಂದೇಶ ಭಾಷಣ ಮಾಡಿದರು. ಮುನ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಮಾಜಿ ಸದಸ್ಯ ಬಾಸ್ಕರ್ ಕುತ್ತಾರ್ ಹಾಗೂ ಹಸೈನಾರ್ ಸಂತೋಷ ನಗರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮದ್ರಸ ಸದರ್ ಉಸ್ತಾದ್ ಅಬ್ದುಲ್ ಹಮೀದ್ ಬದವಿ ಅಲ್ ಪುರ್ಖಾನಿ, ಅಧ್ಯಾಪಕ ಮುಹಮ್ಮದ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಇಬ್ರಾಹೀಮ್ ಖಲೀಲ್, ಕೋಶಾಧಿಕಾರಿ ಹಾಜಿ ಇಸ್ಮಾಈಲ್, ಸದಸ್ಯರುಗಳಾದ ಅಬ್ದುಲ್ ರಹ್ಮಾನ್, ಇಬ್ರಾಹೀಮ್, ಅಬೂಬಕರ್, ರಹ್ಮತ್ ಹಾಗೂ ಊರಿನ ಹಿರಿಯ ನಾಯಕರುಗಳು ಮುಂತಾದವರು ಉಪಸ್ಥಿತರಿದ್ದರು. ಅಧ್ಯಾಪಕ ಎಂ. ಮುಸ್ತಫಾ ಸಅದಿ ಹರೇಕಳ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.


