ದೇರಳಕಟ್ಟೆ 19: ಮಂಗಳೂರು ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಹಾಗೂ ಕಸ್ತೂರ್ಬಾ ಮೆಡಿಕಲ್ ಕಾಲೇಜು ಬ್ಲಡ್ ಸೆಂಟರ್, ಅತ್ತಾವರ, ಮಂಗಳೂರು, ಸಹಯೋಗದಲ್ಲಿ ರಕ್ತದಾನ ಶಿಬಿರ ವನ್ನು ಕಾಲೇಜು ಸಭಾಂಗಣ ದಲ್ಲಿ ಆಯೋಜಿಸಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಕಸ್ತೂರ್ಬಾ ಮೆಡಿಕಲ್ ಕಾಲೇಜು ಅತ್ತಾವರ ಬ್ಲಡ್ ಸೆಂಟರ್ ನ ವೈದ್ಯಾಧಿಕಾರಿ ಡಾ. ಶ್ರೀ ವಿಧ್ವತಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ರಕ್ತದಾನದ ಮಹತ್ವ ವನ್ನು ತಿಳಿಸಿ, ರಕ್ತ ದಾನದಿಂದ ಅಗತ್ಯವಿರುವವರ ಜೀವ ಉಳಿಸಲು ಸಾಧ್ಯವಾಗುತ್ತದೆ. ರಕ್ತದಾನ ಮಾಡಿದ ಬಳಿಕ ದೇಹವು ಕಳೆದುಕೊಂಡ ರಕ್ತವನ್ನು ಸ್ವಾಭಾವಿಕವಾಗಿ ಪುನಃ ಉತ್ಪಾದಿಸಿಕೊಳ್ಳುತ್ತದೆ. ಹಾಗಾಗಿ ಎಲ್ಲರೂ ರಕ್ತ ದಾನಕ್ಕೆ ಮುಂದಾಗುವಂತೆ , ರಕ್ತ ದಾನವೇ ಶ್ರೇಷ್ಠ ದಾನ ಎಂದು ಹೇಳಿ ದರು. ಶಿಬಿರದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು.

ಕಾಲೇಜಿನ ಟ್ರಸ್ಟಿ ಹಾಗೂ ಪ್ರವೇಶ ಮತ್ತು ಸಂಪರ್ಕ ನಿರ್ದೇಶಕರಾದ ಡಾ. ಅನಿತಾ ಟಿಟ್ಟೊ ಮಾಥ್ಯೂ, ಮಂಗಳೂರು ಕಾಲೇಜ್ ಆಪ್ ಆಲೈಡ್ ಹೆಲ್ತ್ ಸೈನ್ಸ್ ನ
ಪ್ರಾಂಶುಪಾಲರಾದ ಡಾ.ಬೀನಾ ಬೆನಿಟೊ ಡಿಸೋಜ , ಮಂಗಳೂರು ಕಾಲೇಜ್ ಆಪ್ ಪಿಸಿಯೋಥೆರಪಿ ಉಪಪ್ರಾಂಶುಪಾಲರಾದ ಡಾ. ರಮ್ಶಾ ಹಾಗೂ ಮಂಗಳೂರು ಕಾಲೇಜ್ ಆಪ್ ನರ್ಸಿಂಗ್ ನ ಉಪಪ್ರಾಂಶುಪಾಲರಾದ ಪ್ರೊ. ಹರೀಶ್ ಮತ್ತಿತರರಿದ್ದರು.
ಉಪನ್ಯಾಸಕರಾದ ಅಲೀನಾ ಜೋನ್ ನಿರೂಪಿಸಿ,ರಜತ್ ಕಾಮತ್ ಸ್ವಾಗತಿಸಿ, ಡಾ. ನಸ್ರಿನಾ ಬಾನು ವಂದಿಸಿದರು.


