ಬಳ್ಕುಂಜೆಯಲ್ಲಿ ಕುದಿ ಕಂಬಳ: ಹೊಳೆಗೆ ಹಾರಿ ಪ್ರಾಣಬಿಟ್ಟ ದೂಜ

Date:

ಮೂಡುಬಿದಿರೆ: ಕಂಬಳದ ಕನೆ ಹಲಗೆ ವಿಭಾಗದಲ್ಲಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿದ್ದ ತಿರುವೈಲು ಗುತ್ತುವಿನ ದೂಜ ಹೆಸರಿನ ಕೋಣವು ಭಾನುವಾರ ಶಾಂಭವಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದೆ.

ಬಳ್ಕುಂಜೆ ಕಂಬಳದ ರೂವಾರಿ ಮಲ್ಲಿಕಾ ಯಶವಂತ ಶೆಟ್ಪಿ ತನ್ನ ಜತೆ ಇರುವ ಕಂಬಳದ ಕೋಣಕ್ಕೆ ಜೊತೆ ಮಾಡಿಸಲು ತಿರುವೈಲು ಗುತ್ತುವಿನ ಕಂಬಳದ ಕೋಣ ದೂಜನನ್ನು ತರಿಸಿ ಭಾನುವಾರ ಕೋಟ್ನಾಯ ಗುತ್ತುವಿನಲ್ಲಿ ಕುದಿ ಕಂಬಳವನ್ನು ಏಪ೯ಡಿಸಿದ್ದರು.
ಭಟ್ಕಳದ ಕಂಬಳ ಓಟಗಾರ ಕುದಿ ಕಂಬಳದ ಕರೆಗೆ ಕೋಣಗಳನ್ನು ಇಳಿಸಿದ್ದು ಈ ಸಂದಭ೯ ಕೋಣಗಳು ಹಾಯಲು ಬಂದ ರೀತಿಯಲ್ಲಿ ಓಡಲು ಯತ್ನಿಸಿದಾಗ ಓಟಗಾರ ಜಾರಿ ಬಿದ್ದಿದ್ದಾರೆ. ಆದರೆ ಕೋಣಗಳು ತಮ್ಮನ್ನು ತಡೆಯಲು ಬಂದ ಜನರ ಕೈಗೆ ಸಿಗದೆ ಏರ್ರಾಬಿರ್ರಿಯಾಗಿ ತೋಟದ ಮಧ್ಯೆ ಓಡಿ ಜುಮಾದಿ ದೈವಸ್ಥಾನದ ಬಳಿ ಸ್ವಲ್ಷ ನಿಂತು ಮತ್ತೆ ಓಡಿದ ಜೋಡೆತ್ತುಗಳು ಶಾಂಭವಿ ನದಿಗೆ ಹಾರಿದೆ ಈ ಸಂದಭ೯ದಲ್ಲಿ ದೂಜ ಪ್ರಾಣ ಕಳೆದುಕೊಂಡರೆ ಅದರ ಜತೆಯಲ್ಲಿದ್ದ ಇನ್ನೊಂದು ಕೋಣ ಮೇಲಕ್ಕೆ ಬಂದಿದೆ.


ಬಳ್ಕುಂಜೆ ಕಂಬಳ ಸಂಘಟಕಿ ಮಲ್ಲಿಕಾ ಯಶವಂತ ಶೆಟ್ಟಿ ಅವರು ಕಳೆದ ಮೂರು ವಷ೯ಗಳಿಂದ ಕಂಬಳವನ್ನು ನಡೆಸುತ್ತಾ ಬಂದಿದ್ದಾರೆ. ಆದರೆ ಸ್ಥಳೀಯರು ಮಾತನಾಡಿಕೊಳ್ಳುವ ಪ್ರಕಾರ ಮಲ್ಲಿಕಾ ಅವರು ಸ್ವಲ್ಪ ದಿನಗಳ ಹಿಂದೆ ದೈವದ ಕಲದಲ್ಲಿ ಎದುರು ನಿಂತು “ಈ ನಿನ್ನ ಉರಿನ್ ತೂಪಾವೆಂದ್ ಪನ್ಪತಾ ಏಪ ನಿನ್ನ ಉರಿ ತೋಜಾವುನು” ಎಂದು ದೈವಕ್ಕೆ ಸವಾಲು ಹಾಕಿದ್ದು ಇದೀಗ ದೈವ ತನ್ನ ಉರಿಯನ್ನು ತೋರಿಸಿಕೊಟ್ಟಿದೆ ಎಂದು ಮಾತನಾಡಿ ಕೊಳ್ಳುತ್ತಿದ್ದಾರೆ.
ದೂಜ ಪ್ರಾಣ ಕಳೆದುಕೊಂಡ ಬಗ್ಗೆ ಕಂಬಳದ ಅಭಿಮಾನಿಗಳಿಗೆ ನೋವಿತ್ತಾದರೂ ಯಾರ ವಾಟ್ಸಪ್ ಸ್ಟೇಟಸ್ ಹಾಗೂ ಕಂಬಳ ಗ್ರೂಪಿನಲ್ಲಿ ಈ ಸುದ್ಧಿ ನಿನ್ನೆ ರಾತ್ರಿವರೆಗೆ ವೈರಲ್ ಆಗಿಲ್ಲವೆನ್ನಲಾಗಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

IPS ಅಧಿಕಾರಿಯ ವಿರುದ್ಧ SP ಗಂಭೀರ ಆರೋಪ – DGP ಗೆ ಪತ್ರ ಬರೆದು, “30 ನಿಮಿಷ ಕೊಡಿ, ಸತ್ಯ ಬಯಲು ಮಾಡ್ತೇನೆ” ಎಂದು ಉಲ್ಲೇಖ…!!!

ಮಾನಸಿಕ ಕಿರುಕುಳ, ತಾರತಮ್ಯ ಆರೋಪ; ಪೊಲೀಸ್ ಇಲಾಖೆಯಲ್ಲಿ ಸಂಚಲನ ಬೆಂಗಳೂರು: ಕರ್ನಾಟಕ ಪೊಲೀಸ್...

ಲೇಖಕಿ ರೆಶೆಲ್ ಫೆರ್ನಾಂಡಿಸ್ ಅವರಿಗೆ ದಿವಾ ಪ್ಲಾನೆಟ್ ವತಿಯಿಂದ ಟಾಪ್ 50 ಗಮನಾರ್ಹ ಮಹಿಳಾ ಗೌರವ

ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಪ್ರಮುಖ ಯುವ ಲೇಖಕಿ ಮತ್ತು ವಾಗ್ಮಿ, ಎಬಿವಿಪಿ...

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಮೂಡುಬಿದಿರೆ: ಕರಾವಳಿ ಹಾಗೂ ಮಲೆನಾಡಿನ...

ರಂಗ ಸ್ವರೂಪ (ರಿ.) ಕುಂಜತ್ತಬೈಲ್ ವತಿಯಿಂದ ಬೇಸಿಗೆ ಶಿಬಿರ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ

ಕಾವೂರು: ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಆಯೋಜಿಸಿದ ರಂಗೋತ್ಸವ 2026' 4ದಿನಗಳ...