VL TV Kannada

1479 POSTS

Exclusive articles:

ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ (ರಿ) ಸುಮ್ಮಬಂಡಸಾಲೆ ಬಜಗೋಳಿ, ಲಯನ್ಸ್ ವತಿಯಿಂದ ಔಷಧ ಕೊಡುಗೆ ಹಸ್ತಾಂತರ.

ಮೂಡುಬಿದಿರೆ : ರಸ್ತೆ ಅಪಘಾತಗಳಲ್ಲಿ ಗಾಯಗೊಂಡು ಅನಾ ರೋಗ್ಯದಿಂದ ಬಳಲುತ್ತಿರುವ ಬೀದಿ ನಾಯಿಗಳು ಹಾಗೂ ದನಗಳ ರಕ್ಷಣೆಗೆ ಮುಂದಾಗಿರುವ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ಆಶ್ರಯದಲ್ಲಿ ಸುಮಾರು 175 ನಾಯಿಗಳು 150 ದನಗಳನ್ನು,...

ಐಲೇಸಾ ವಯೋಸಮ್ಮಾನ್-2025 ಪುರಸ್ಕಾರಕ್ಕೆ ಶಿಕ್ಷಕಿ ಯಕ್ಷಗಾನ ಕಲಾವಿದೆ ಸಾವಿತ್ರಿ ಶ್ರೀನಿವಾಸ್ ರಾವ್ ಆಯ್ಕೆ

ಯಕ್ಷಗಾನ ಕಲಾವಿದೆ ಸಾವಿತ್ರಿ ಶ್ರೀನಿವಾಸ್ ರಾವ್ ಆಯ್ಕೆ ಮುಂಬಯಿ, ಅ.10: ಐಲೇಸಾ ತನ್ನ ಹುಟ್ಟು ಹಬ್ಬದ ಸಲುವಾಗಿ ಕೊಡಮಾಡುವ ವಯೋಸಮ್ಮಾನ್ ವಿಶಿಷ್ಟ ಪುರಸ್ಕಾರಕ್ಕೆ ಶಿಕ್ಷಕಿ, ಮಕ್ಕಳ ವ್ಯಕ್ತಿತ್ವ ವಿಕಸನದ ಶಿಬಿರಗಳಿಂದ ತನ್ನ ವಿದ್ಯಾಥಿ ವಲಯದಲ್ಲಿ ವಿಶೇಷ ಶ್ರೇಯ ಪಡೆದ 81ರ ಹರೆಯದ ಶಿಕ್ಷಕಿ ಸಾವಿತ್ರಿ ಎಸ್ ರಾವ್ ಆಯ್ಕೆಯಾಗಿದ್ದಾರೆ. ಶಿಕ್ಷಕಿಯಾಗಿರುವ ಇವರು ತನ್ನ 66ನೇ ವಯಸ್ಸಿನಲ್ಲಿ ಯಕ್ಷಗಾನ ನಾಟ್ಯ ಕಲಿತು 113 ಪ್ರದರ್ಶನಗಳನ್ನು ಕೊಟ್ಟು ಹಾಗೂ ತಾಳ ಮದ್ದಳೆಗಳಲ್ಲಿ ಭಾಗವಹಿಸಿ ಇವರು ಯಾವುದೇ ಕಲಿಕೆಗೆ ವಯಸ್ಸಿನ ಹಂಗಿಲ್ಲವೆಂದು ನಿರೂಪಿಸಿದವರು. ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಕನ್ನಡ ತುಳು ಹಾಡುಗಳನ್ನು ನಾಟಕಗಳನ್ನು ಬರೆದು ಹಾಡಿ, ಆಡಿ ಜನಜನಿತರಾದವರು. ಮಂಗಳೂರಿನ ಅಶೋಕನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕಿಯಾಗಿ ಸುಮಾರು 27 ವರ್ಷಗಳ ಕಾಲ ನಿರಂತರ ಸೇವೆಯಲ್ಲಿದ್ದು ಸ್ವಯಂ ನಿವೃತ್ತರಾದವರು. ಮಕ್ಕಳಿಗೆ ಭಗವದ್ಗೀತೆ ಕಂಠ ಪಾಠ ಭಾವ ಗೀತೆ ಗಾಯನ, ಕತೆ ಹೇಳುವ,ಭಾಷಣ ಕಮ್ಮಟ ಹೀಗೆ ಹಲವಾರು ಮಕ್ಕಳ ವ್ಯಕ್ತಿತ್ವ ವಿಕಸನದ ಕಾರ್ಯಕ್ರಮಗಳನ್ನು ಐನೂರಕ್ಕಿಂತಲೂ ಅಧಿಕ ಶಾಲೆಗಳಲ್ಲಿ ನಡೆಸಿ ಮಕ್ಕಳ ಮನ ಗೆದ್ದವರು. ನವಿಲುಗರಿ, ಹಾಡು ಬಾ ಕೋಗಿಲೆ ಕವನ ಸಂಕಲನ ಮತ್ತು ಒಂದು ಗುಬ್ಬಿಯ ಕಥೆ, ಹುಲಿಯನ್ನು ಮೆಚ್ಚಿಸಿದ ಹುಡುಗ ಕಥಾಸಂಕಲನಗಳನ್ನು ಬರೆದು ಅದನ್ನು ಮಕ್ಕಳ ಮಡಿಲಿಗೆ ತಲುಪಿಸಿದವರು. ಆಶಾಜ್ಯೋತಿ ಮೂಲಕ ವಿಕಲಚೇತನರ ಸಲುವಾಗಿ ವಿಶಿಷ್ಠರಿಗಾಗಿ ವಿಶಿಷ್ಟ ಮೇಳ ಕಾರ್ಯಕ್ರಮ ಆಯೋಜಿಸಿ ಅವರಿಗೆ ವಿಶೇಷ ಪ್ರವಾಸಗಳನ್ನು ಏರ್ಪಡಿಸಿದವರು. ತನ್ನ ಪತಿಯ ಜೊತೆ ಸೇರಿ ಕಲ್ಲಾವು ಸಾವಿತ್ರಿ ಶ್ರೀನಿವಾಸ ಟ್ರಸ್ಟ್ ಸ್ಥಾಪಿಸಿ ಅಶಕ್ತ ವಿದ್ಯಾಥಿಗಳಿಗೆ ವಿದ್ಯಾಭ್ಯಾಸದ ಖರ್ಚಿಗೆ ನೆರವಾಗುತ್ತಿದ್ದಾರೆ. ಎಲೆಮರೆಯ ಇವರ ಈ ನಿಸ್ವಾರ್ಥ ಸೇವೆಯನ್ನು ಗಮನಿಸಿ ಐಲೇಸಾ ಈ ಸಾರಿಯ ವಯೋಸಮ್ಮಾನವನ್ನು ಸಾವಿತ್ರಿರಾವ್ ಅವರಿಗೆ ಇದೇ ಅಕ್ಟೋಬರ್.26ನೇ ತಾರೀಖು ಆದಿತ್ಯವಾರ ಮಂಗಳೂರು ಬೊಕ್ಕಪಟ್ಟಣದ ಅಕ್ಷಯ ಸಭಾಂಗಣದಲ್ಲಿ ಮದ್ಯಾಹ್ನ 1:00 ಗಂಟೆಯಿಂದ ಆರಂಭವಾಗುವ ಸರಳಸ ಮಾರಂಭದಲ್ಲಿ ಪ್ರದಾನ ಮಾಡಲಿದೆ. ಪುರಸ್ಕಾರವು ಒಟ್ಟು ಒಂದು ಲಕ್ಷ ಮೊತ್ತವನ್ನು ಒಳಗೊಂಡಿದ್ದು ಅವರ ವಯಸ್ಸಿನಷ್ಟೇ ನಗದು ಅಂದರೆ ರೂಪಾಯಿ 81,000/- ಹಾಗೂ ಉಳಿದಂತೆ ಅವರ ಇಷ್ಟದ ಉಡುಗೊರೆಗಳೊಂದಿಗೆ ಸಂಗೀತ, ಸಾಹಿತ್ಯ ಸಂಭ್ರಮದ ಜೊತೆಯಲ್ಲಿ ವಿಶಿಷ್ಠವಾಗಿ ನೀಡಲಾಗುವುದು. ಕಾರ್ಯಕ್ರಮದಲ್ಲಿ ದೇಶ, ವಿದೇಶಗಳಿಂದ ಗಣ್ಯರು, ಸಾವಿತ್ರಿರಾವ್ ಅವರ ವಿದ್ಯಾಥಿಗಳು ಸಹಪಾಠಿಗಳು ಭಾಗವಹಿಸುವರು. ಸಮಾಜಮುಖಿ ಈ ಕಾರ್ಯಕ್ರಮದಲ್ಲಿ ಎಲ್ಲರೂ ಮುಕ್ತವಾಗಿ ಭಾಗವಹಿಸಬೇಕು ಮತ್ತು ಹೆಚ್ಚಿನ ಮಾಹಿತಿಗಾಗಿ ಅನಂತ್ ರಾವ್ ಗೋಪಾಲ್ಪಟ್ಟೆ, ಅಜೇಶ್ ಚಾರ್ಮಾಡಿ, ವಿವೇಕ್ ಮಂಡೇಕರ ಇವರನ್ನು ಸಂಪರ್ಕಿಸಬಹುದು ಎಂದು ಐಲೇಸಾ ಮುಂಬಯಿ ಸಂಚಾಲಕ ಸೂರಿ ಮಾರ್ನಾಡು ವಿನಂತಿಸಿದ್ದಾರೆ.

ಪಣಪಿಲದಲ್ಲಿ ರೂ 1.30 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಕೋಟ್ಯಾನ್ ಶಿಲಾನ್ಯಾಸ

ಮೂಡುಬಿದಿರೆ : ದರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಪಿಲ ಗ್ರಾಮದಲ್ಲಿ ರೂ 1.10 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ 20ಲಕ್ಷದಲ್ಲಿ ನಿಮಾ೯ಣಗೊಂಡಿರುವ ಹಿಂದೂ ರುದ್ರಭೂಮಿಯ ಶಾಸಕ ಉಮಾನಾಥ ಎ. ಕೋಟ್ಯಾನ್...

ಮೂಡುಬಿದಿರೆ ಬಂಟರ ಸಂಘದಿಂದ ರೂ.12 ಲಕ್ಷ ವಿದ್ಯಾಥಿ೯ ವೇತನ ವಿತರಣೆ

ಮೂಡುಬಿದಿರೆ : ಇಲ್ಲಿನ ಬಂಟರ ಸಂಘ ವತಿಯಿಂದ ಹೋಟೆಲ್ ಪಂಚರತ್ನದಲ್ಲಿ ಶನಿವಾರ ನಡೆದ ಬಂಟ ಸಮಾಜ ಬಾಂಧವರ ಸಭೆ, ಸನ್ಮಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಡೆಯಿತು....

ಅನಿಲ್ ರೊಬೆನ್ ಮೆಂಡೋನ್ಸಾ ಅವರಿಗೆ ಕರ್ನಾಟಕ ಮಾಣಿಕ್ಯ-ಸೇವಾರತ್ನ ರಾಜ್ಯ ಪ್ರಶಸ್ತಿ

ಮೂಡುಬಿದಿರೆ: ಸಮಾಜಸೇವಕ, ಅಂಬ್ಯುಲೆನ್ಸ್ ಚಾಲಕ ಮೂಡುಬಿದಿರೆಯ ಅನಿಲ್ ರೊಬೆನ್ ಮೆಂಡೋನ್ಸಾ ಅವರಿಗೆ ಕರ್ನಾಟಕ ಮಾಣಿಕ್ಯ-ಸೇವಾರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮೈಸೂರು ಪುರಭವನದಲ್ಲಿ ಭಾನುವಾರ ನಡೆದ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ಪ್ರಶಸ್ತಿ...

Breaking

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...
spot_imgspot_img