ಬಡಗಮಿಜಾರು: ಪರಿಹಾರಧನ ಪೂರ್ಣ ಪಾವತಿಸದೆ ಕಾಮಗಾರಿ, ರೈತರಿಂದ ತೀವ್ರ ವಿರೋಧ, ಪ್ರತಿಭಟನೆ

Date:

ಮೂಡುಬಿದಿರೆ: ಬಡಗಮಿಜಾರು ಗ್ರಾಮದ ಮಂಜನಬೈಲು ಪ್ರದೇಶದ ರೈತರ ಜಮೀನಿನಲ್ಲಿ 440 ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಗೆ ಸಂಬಂಧಿಸಿದಂತೆ ಸ್ಟೆರ್‌ಲೈಟ್ ಕಂಪೆನಿ ಸಂಪೂರ್ಣ ಪರಿಹಾರಧನ ಪಾವತಿಸದೆ ಪೊಲೀಸ್ ಬಲದ ಸಹಾಯದಿಂದ ಬುಧವಾರ ಹಾಗೂ ಗುರುವಾರ ಕಾಮಗಾರಿ ನಡೆಸಿರುವುದು ತೀವ್ರ ವಿರೋಧಕ್ಕೆ ವ್ಯಕ್ತ ಪಡಿಸಿದ್ದಾರೆ.

ಮಂಜನಬೈಲಿನ ಸಂಜೀವ್ ಗೌಡ ಅವರ ತೋಟದಲ್ಲಿ ಕಾಮಗಾರಿ ನಡೆಸಿದ ವೇಳೆ ಸಂಜೀವ್ ಗೌಡ ಹಾಗೂ ಸ್ಥಳೀಯ ರೈತರು ಸ್ಥಳಕ್ಕೆ ಆಗಮಿಸಿ ಕಂಪೆನಿಯ ಕ್ರಮವನ್ನು ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ರೈತಪರ ಹೋರಾಟಗಾರ ಅಲ್ಫೋನ್ಸ್ ಡಿಸೋಜ, “ಮೂರು ತಿಂಗಳ ಹಿಂದೆ ಕಿನ್ನಿಗೋಳಿಯಲ್ಲಿ ನಡೆದ ಸಭೆಯಲ್ಲಿ ಎ.ಸಿ., ಶಾಸಕರು, ವಕೀಲರು, ಕಿಸಾನ್ ಸಂಘದ ಅಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ, ಸ್ಟೆರ್‌ಲೈಟ್ ಕಂಪೆನಿಯ ಅಧಿಕಾರಿಗಳು ಹಾಗೂ ಸಂತ್ರಸ್ತ ರೈತರು ಭಾಗವಹಿಸಿದ್ದರು. ಆ ಸಭೆಯಲ್ಲಿ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರಧನ ಪಾವತಿಸಬೇಕು ಹಾಗೂ ಕಾಮಗಾರಿ ವೇಳೆ ಪೊಲೀಸ್ ಬಲ ಬಳಸಬಾರದು ಎಂದು ಕಂಪೆನಿಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿತ್ತು. ಆದರೂ ಕಂಪೆನಿ ಈ ಸೂಚನೆಗಳನ್ನು ಕಡೆಗಣಿಸಿ, ರೈತರ ಮೇಲೆ ದೌರ್ಜನ್ಯ ಎಸಗುತ್ತಿದೆ” ಎಂದು ಆರೋಪಿಸಿದರು. ಸ್ಥಳೀಯ ರೈತರು, “ಪರಿಹಾರಧನದ ವಿಚಾರ ಬಗೆಹರಿಯುವವರೆಗೆ ಕಾಮಗಾರಿ ನಿಲ್ಲಿಸಬೇಕು” ಎಂದು ಆಗ್ರಹಿಸಿದ್ದಾರೆ.

ಬುಧವಾರದೊಳಗೆ ಮೊತ್ತ ಪಾವತಿ: ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ‌ ಸಂದೇಶ್ ಪಿ.ಜಿ ಅವರು, ಕಂಪೆನಿಯವರಲ್ಲಿ ಯಾವಾಗ ಉಳಿದ ಮೊತ್ತವನ್ನು ಸಂತ್ರಸ್ತರಿಗೆ ನೀಡುತ್ತೀರಿ? ಎಂದು ಅಧಿಕಾರಿಯವರಲ್ಲಿ ಕೇಳಿದ್ದು, ಮುಂದಿನ ಬುಧವಾರದೊಳಗೆ ಪಾವತಿ ಮಾಡುತ್ತೇನೆ. ಈ ಕುರಿತು ಲಿಖಿತವಾಗಿಯೂ ರೈತರಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

IPS ಅಧಿಕಾರಿಯ ವಿರುದ್ಧ SP ಗಂಭೀರ ಆರೋಪ – DGP ಗೆ ಪತ್ರ ಬರೆದು, “30 ನಿಮಿಷ ಕೊಡಿ, ಸತ್ಯ ಬಯಲು ಮಾಡ್ತೇನೆ” ಎಂದು ಉಲ್ಲೇಖ…!!!

ಮಾನಸಿಕ ಕಿರುಕುಳ, ತಾರತಮ್ಯ ಆರೋಪ; ಪೊಲೀಸ್ ಇಲಾಖೆಯಲ್ಲಿ ಸಂಚಲನ ಬೆಂಗಳೂರು: ಕರ್ನಾಟಕ ಪೊಲೀಸ್...

ಬಳ್ಕುಂಜೆಯಲ್ಲಿ ಕುದಿ ಕಂಬಳ: ಹೊಳೆಗೆ ಹಾರಿ ಪ್ರಾಣಬಿಟ್ಟ ದೂಜ

ಮೂಡುಬಿದಿರೆ: ಕಂಬಳದ ಕನೆ ಹಲಗೆ ವಿಭಾಗದಲ್ಲಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿದ್ದ ತಿರುವೈಲು...

ಲೇಖಕಿ ರೆಶೆಲ್ ಫೆರ್ನಾಂಡಿಸ್ ಅವರಿಗೆ ದಿವಾ ಪ್ಲಾನೆಟ್ ವತಿಯಿಂದ ಟಾಪ್ 50 ಗಮನಾರ್ಹ ಮಹಿಳಾ ಗೌರವ

ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಪ್ರಮುಖ ಯುವ ಲೇಖಕಿ ಮತ್ತು ವಾಗ್ಮಿ, ಎಬಿವಿಪಿ...

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಮೂಡುಬಿದಿರೆ: ಕರಾವಳಿ ಹಾಗೂ ಮಲೆನಾಡಿನ...