ಬಂಟ್ವಾಳ: ಡಾll ಬಿ ಆರ್ ಅಂಬೇಡ್ಕರ್ ಹಿತರಕ್ಷಣಾ ಸೇವಾ ಸಮಿತಿ (ರಿ) ಸರಪಾಡಿ. ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಸರಪಾಡಿ
ಇದರ ಜಂಟಿ ಆಶ್ರಯದಲ್ಲಿ 5ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜೈ ಭೀಮ್ ಕ್ರೀಡಾಂಗಣದಲ್ಲಿ ದಿನಾಂಕ 06/09/2026 ನೇ ಆದಿತ್ಯವಾರದಂದು ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.



ಡಾll ಬಿ ಆರ್ ಅಂಬೇಡ್ಕರ್ ಹಿತರಕ್ಷಣಾ ಸೇವಾ ಸಮಿತಿ (ರಿ) ಸರಪಾಡಿ ಇದರ ಅಧ್ಯಕ್ಷರು ನವೀನ್ ಕೆಳಗಿನಬಳಿ ಹಾಗೂ ಸದಸ್ಯರ ಮುಖೇನ “ಜೈ ಭೀಮ್” ಕ್ರೀಡಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಿತಿ ರಚಿಸಲಾಯಿತು.

ಸಭಾ ಕಾರ್ಯಕ್ರಮನ್ನು
ಬೆಳಿಗ್ಗೆ 09:30 ಕ್ಕೆ ದೀಪ ಪ್ರಜ್ವಲೇನೆ ಮೂಲಕ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ (ರಿ) ಬಂಟ್ವಾಳ ತಾಲೂಕು.
ಇದರ ಪ್ರಧಾನ ಕಾರ್ಯದರ್ಶಿ ಪ್ರೀತಿರಾಜ್ ಪಲ್ಲಮಜಲು ಹಾಗೂ ಊರಿನ ಪ್ರಮುಖರ ಉಪಸ್ಥಿತರಿದ್ದರು.

ಡಾll ಬಿ ಆರ್ ಅಂಬೇಡ್ಕರ್ ಹಿತರಕ್ಷಣಾ ಸೇವಾ ಸಮಿತಿ (ರಿ) ಸರಪಾಡಿ ಇದರ ಅಧ್ಯಕ್ಷರು ನವೀನ್ ಕೆಳಗಿನಬಳಿ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಿತಿ ಅಧ್ಯಕ್ಷರು ದಿನೇಶ್ ಕೊಟ್ಟುಂಜ ಹಾಗೂ ಸರ್ವ ಸದಸ್ಯರ ಶ್ರಮದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.


