ದೇರಳಕಟ್ಟೆ: ಸುಮಾರು 17 ವರ್ಷಗಳಿಂದ ದೇರಳಕಟ್ಟೆಯ ಜನತೆಗೆ ಪರಿಚಿತವಾಗಿದ್ದ ‘ಗುಡ್‌ವಿಲ್’ ಗೃಹೋಪಯೋಗಿ ಉಪಕರಣಗಳ ಮಳಿಗೆಯು ತನ್ನ ವಿಸ್ತೃತ ಮತ್ತು ವಿಶಾಲವಾದ ಹೊಸ ಶೋರೂಮ್‌ನ್ನು ನಾಳೆ, ಅಕ್ಟೋಬರ್ 12 ರಂದು ಉದ್ಘಾಟಿಸಲಿದೆ.
ಪ್ರೇಮ ಸಂಜೀವಿನಿ ಸಿಟಿ ಮಾರ್ಕೆಟ್ ಕಟ್ಟಡದಲ್ಲಿ ನೂತನವಾಗಿ ಆರಂಭವಾಗಲಿರುವ ಈ ಶೋರೂಮ್‌ನಲ್ಲಿ ಗೃಹೋಪಯೋಗಿ ವಸ್ತುಗಳು, ಫರ್ನಿಚರ್, ಕಿಚನ್ ಉಪಕರಣಗಳು ಹಾಗೂ ದೈನಂದಿನ ಅಗತ್ಯ ವಸ್ತುಗಳ ದೊಡ್ಡ ಸಂಗ್ರಹವಿರಲಿದೆ.
ಉದ್ಘಾಟನೆಯ ಪ್ರಯುಕ್ತ ಗ್ರಾಹಕರಿಗೆ ವಿಶೇಷ ವಿನಿಮಯ ಆಫರ್‌ಗಳು, ಕೂಪನ್ ಗಿಫ್ಟ್‌ಗಳು ಮತ್ತು ಹಲವು ಆಕರ್ಷಕ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಮುಖ್ಯವಾಗಿ, ಉದ್ಘಾಟನಾ ಆಫರ್‌ನ ಭಾಗವಾಗಿ ರೂ. 5,000 ಮೌಲ್ಯದ ಪ್ರತಿ ಖರೀದಿಗೆ ಕೂಪನ್ ಸೌಲಭ್ಯವಿದ್ದು, ಈ ಕೊಡುಗೆಯು ಮುಂದಿನ ಮೂರು ತಿಂಗಳ ಕಾಲ ಲಭ್ಯವಿರಲಿದೆ ಎಂದು ಗುಡ್‌ವಿಲ್‌ನವರು ತಿಳಿಸಿದ್ದಾರೆ.



