
ನಾಟೆಕಲ್: ರಹ್ಮಾನಿಯಾ ವೆಲ್ಫೇರ್ ಮತ್ತು ಚಾರಿಟಬಲ್ ಟ್ರಸ್ಟ್ ನ ಪ್ರಾಯೋಜನೆಯಲ್ಲಿ, ಕನಚೂರ್ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್, ನಾಟಿಕಲ್ ಸಹಯೋಗದಲ್ಲಿ ಇಂದು ದಿನಾಂಕ 12ನೇ ಅಕ್ಟೋಬರ್ 2025ರಂದು ಕಾರ್ಮೆಲ್ ಶಾಲಾವರಣ, ಬೀರಿ, ಕೋಟೆಕಾರಿನಲ್ಲಿ ಬೆಳಿಗ್ಗೆ 08:00ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಉಚಿತ ವೈದ್ಯಕೀಯ ಆರೋಗ್ಯ ತಪಾಸಣೆ ಶಿಬಿರದ ಆಯೋಜನೆ ಮಾಡಲಾಗಿದೆ. ಈ ಶಿಬಿರದಲ್ಲಿ ಜನರಲ್ ಮೆಡಿಸಿನ್, ಕಣ್ಣಿನ ತಪಾಸಣೆ, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಎಲುಬಿನ ತಜ್ಞರು ಹಾಗೂ ಕಿವಿ–ಮೂಗು–ಗಂಟಲು ತಜ್ಞರುಗಳು ಸೇವೆ ನೀಡಲಿದ್ದಾರೆ. ವೈದರಾದ ಡಾ. ತಾರಾನಾಥ್ ಶೆಟ್ಟಿ (MBBS) ಅವರಿಗೆ ಅವರ 40 ವರ್ಷಗಳ ನಿಸ್ವಾರ್ಥ ವೈದ್ಯಕೀಯ ಸೇವೆಗೆ ವಿಶೇಷ ಗೌರವ ಸಲ್ಲಿಸಲಾಗುವುದು. ಸಾರ್ವಜನಿಕರು ಈ ಶಿಬಿರದ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಶಿಬಿರದ ಆಯೋಜಕರು ವಿನಂತಿಸಿಕೊಂಡಿದ್ದಾರೆ.


