ನೀಕೆ೯ರೆ ಪ್ರೌಢಶಾಲೆಯಲ್ಲಿ ನೂತನ ಕೊಠಡಿಗಳ ಉದ್ಘಾಟನೆ

Date:

  • ಪ್ರಧಾನ ಮಂತ್ರಿಗಳ ಆಶಯದಂತೆ ವಿದ್ಯಾರ್ಥಿಗಳ ಭವಿಷ್ಯದ ಕನಸು ಸಾಕಾರ: ಸಂಸದ ಬ್ರಿಜೇಶ್ ಚೌಟ

ಮೂಡಬಿದಿರೆ: ತಾಲೂಕಿನ ಸರಕಾರಿ ಪ್ರೌಢಶಾಲೆ ನೀಕೆ೯ರೆ ಇಲ್ಲಿ ಎಂಆರ್ ಪಿಎಲ್ ನ ರೂ. 35 ಲಕ್ಷ ಅನುದಾನದಲ್ಲಿ ನಿಮಾ೯ಣಗೊಂಡಿರುವ ಹೊಸ ತರಗತಿ ಕೊಠಡಿ ಕಟ್ಟಡ ಹಾಗೂ ಪೋಷಕರು ಮತ್ತು ದಾನಿಗಳ ಸಹಕಾರದಿಂದ ರೂ. 1.75 ಲಕ್ಷದಲ್ಲಿ ನಿಮಾ೯ಣಗೊಂಡಿರುವ ಗ್ರಂಥಾಲಯವನ್ನೊಳಗೊಂಡ ಸ್ಮಾರ್ಟ್ ತರಗತಿ ‘ಜ್ಞಾನಾಂಬುದಿ’ಯನ್ನು ದ.ಕ ಸಂಸದ ಬ್ರಿಜೇಶ್ ಚೌಟ ಸೋಮವಾರ ಉದ್ಘಾಟನೆಗೊಳಿಸಿದರು.


ನಂತರ ಮಾತನಾಡಿ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪ್ರಧಾನಿ ಅವರು ಕಳೆದ 12 ವರ್ಷದಿಂದ ಅಭಿವೃದ್ಧಿ ಚಟುವಟಿಕೆಗೆ ಆದ್ಯತೆ ನೀಡುತ್ತಿದ್ದಾರೆ. ಶಾಲೆ, ಮಕ್ಕಳ ಬಗ್ಗೆ ಕಾಳಜಿ ಇದ್ದರೆ ಶಾಸಕರು ಒಂದು ಶಾಲೆಯನ್ನು ಹೇಗೆ ಅಭಿವೃದ್ಧಿ ಮಾಡಬಹುದು ಎಂಬುವುದಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್ ಮಾದರಿಯಾಗುವ ಮೂಲಕ ಪ್ರಧಾನ ಮಂತ್ರಿಗಳ ಆಶಯದಂತೆ ವಿದ್ಯಾಥಿ೯ಗಳ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸುತ್ತಿದ್ದಾರೆ ಎಂದರು.

ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಶಾಲೆಗೆ ಬಹಳಷ್ಟು ಅಭಿವೃದ್ಧಿ ಕೊಡುಗೆ ನೀಡಲಾಗಿದೆ. ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ಇರುವ ಕಾರಣ ಮಕ್ಕಳು ಇಲ್ಲಿಗೆ ಬರುತ್ತಿದ್ದಾರೆ. ಸರಕಾರ ಮೂಲ ಸೌಕರ್ಯ ನೀಡಿದರೆ ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಬಹುದು. ಪಬ್ಲಿಕ್ ಶಾಲೆ ಆದರೆ ಸರಕಾರ ಬೇರೆಯೇ ಅನುದಾನ ನೀಡಿ ಒಂದೇ ಕ್ಯಾಂಪಸ್ ವ್ಯವಸ್ಥೆ ಮಾಡುತ್ತದೆ. ಮುಂದೆ ಆದಷ್ಟು ಬೇಗ ಇಲ್ಲಿ ಪಿಯುಸಿ ಶಿಕ್ಷಣವೂ ಆರಂಭವಾಗಬೇಕು. ಶಿಕ್ಷಕರು ಪೋಷಕರು ಸರಿಯಾಗಿದ್ದರೆ ಉತ್ತಮ ಶಿಕ್ಷಣದ ಜತೆಗೆ ಶಾಲೆಯನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಸಹಕರಿಸಲಾಗುವುದು ಎಂದರು.

ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ. ಗಫೂರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಶಿಕ್ಷಣ ಉತ್ತಮ ಮಾಗ೯ದಶ೯ನಲ್ಲಿ ನಡೆಯಬೇಕೆಂದು, ಕನಾ೯ಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ ಮಾತನಾಡಿ ವಿದ್ಯಾರ್ಥಿಗಳು ದೇಶಪ್ರೇಮದೊಂದಿಗೆ ದೇಶದ ಶಕ್ತಿಯಾಗಿ ಬೆಳೆಯುತ್ತಿದ್ದಾರೆ. ಯುವ ಸಮುದಾಯಕ್ಕೆ ಅನುಗುಣವಾದ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ಹಮ್ಮಿಕೊಳ್ಳುತ್ತಿದೆ. ಜನರ ಸೇವಾಭಿವೃದ್ದಿಗೆ ಮತ್ತಷ್ಟು ಆದ್ಯತೆ ನೀಡಬೇಕು ಎಂದರು.

ಎಸ್ ಎಸ್ ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದಿರುವ ಮೂವರು ವಿದ್ಯಾರ್ಥಿಗಳಾದ ಜಾನ್ಹವಿ, ಪ್ರಜ್ವಲ್, ದೀಪಾ, ಎಂಆರ್ ಪಿ ಎಲ್ ನ ಸಿಎಸ್ ಆರ್ ವಿಭಾಗದ ಜನರಲ್ ಮ್ಯಾನೇಜರ್ ಮಂದಾರ್ ವಿ.ಕಾಳೆ, ಉದ್ಯಮಿ, ದಾನಿ ಸುರೇಶ್ ಶೆಟ್ಟಿ, ಕಟ್ಟಡ ನಿಮಾ೯ಣಕ್ಕೆ ಶ್ರಮಿಸಿದ ಮಹೇಶ್, ದಿನೇಶ್, ಕಾಂಟ್ರಾಕ್ಟರ್ ಸಂಪತ್, ವಗಾ೯ವಣೆಗೊಂಡಿರುವ ಶಿಕ್ಷಕಿ ಹರಿಣಾಕ್ಷಿ ಅವರನ್ನು ಈ ಸಂದಭ೯ದಲ್ಲಿ ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಚೀಫ್ ಮ್ಯಾನೇಜರ್ ಎಂ.ಕೆ.ರಾವ್, ಮೂಡುಬಿದಿರೆ ತಾಲೂಕು ಪ್ರಭಾರ ಕಾಯ೯ ನಿವ೯ಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ದೋಟ, ತೆಂಕ ಮಿಜಾರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ಶಾಲಿನಿ ಸಾಲ್ಯಾನ್, ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಸದಸ್ಯೆ ಜಯಲಕ್ಷ್ಮೀ ಶೆಟ್ಟಿಗಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಬಿ, ಎಸ್.ಡಿ.ಎಂ.ಸಿ ಕಾಯಾ೯ಧ್ಯಕ್ಷ ಮಹೇಶ್ ಮತ್ತಿತರರು ಈ ಸಂದಭ೯ದಲ್ಲಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಡಾ. ಪ್ರತಿಮಾ ಹೆಚ್. ಪಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸವಿತಾ ವಿ. ಕೋಟ್ಯಾನ್ ಕಾಯ೯ಕ್ರಮ ನಿರೂಪಿಸಿದರು. ಚಾಲಚಂದ್ರ ಜಿ. ಆಚಾರಿ ವಂದಿಸಿದರು.


ನೀಕೆ೯ರೆ ಪ್ರಾಥಮಿಕ ಶಾಲೆಗೆ ರೂ. 25 ಲಕ್ಷದಲ್ಲಿ ನಿಮಾ೯ಣಗೊಳ್ಳಲಿರುವ ತರಗತಿ ಕೊಠಡಿಗಳಿಗೆ ಸಂಸದ ಬ್ರಿಜೇಶ್ ಚೌಟ ಅವರು ಇದೇ ಸಂದಭ೯ದಲ್ಲಿ ಶಂಕುಸ್ಥಾಪನೆಗೈದರು.


LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಮೂಲ್ಕಿ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ

ಕೊಂಕಣ ರೈಲ್ವೆ ನಷ್ಟದಲ್ಲಿದೆ ವಿಲೀನಗೊಳಿಸುವುದೇ ಸೂಕ್ತ ಪರಿಹಾರ: ಬ್ರಿಜೇಶ್ ಚೌಟ ಮೂಲ್ಕಿ: ಹಣಕಾಸಿನ...

ಮೂಡಬಿದಿರೆಯಲ್ಲಿ ಮಾರುತಿ ಸಿಯಾಜ್ ಕಾರಿಗೆ ಬೆಂಕಿ: ಕಾರಿನಲ್ಲಿದ್ದವರು ಪಾರು

ಮೂಡಬಿದಿರೆ: ಫಾಗ್ ಲೈಟ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕಾರೊಂದು ಸುಟ್ಟ ಘಟನೆ...

ಜಿಲ್ಲಾ ಕಂಬಳ ಸಮಿತಿ ಮಹಾಸಭೆ: 2026-27ನೇ ಕಂಬಳ ವೇಳಾಪಟ್ಟಿ ಬಿಡುಗಡೆ

ಮೂಡಬಿದಿರೆ: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯ ಜಿಲ್ಲಾ...