ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯತಿನ 2026-27 ನೇ ಸಾಲಿನ ಆಯವ್ಯಯವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಿವ್ಯಾ ಸತೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮಂಡನೆ ಮಾಡಲಾಯಿತು. 2026-27 ನೇ ಸಾಲಿನಡಿಯಲ್ಲಿ ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡುವ ಕುರಿತು ಯೋಜನೆಯನ್ನು ರೂಪಿಸಲಾಯಿತು.

ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಧೀರಜ್ ಕುಸಾಲನಗರ ಸದಸ್ಯರಾದ ಶ್ರೀಮತಿ ಅನಿತಾ, ಶ್ರೀಮತಿ ಭವಾನಿ, ಶ್ರೀ ಉದಯಕುಮಾರ್ ಶೆಟ್ಟಿ, ಶ್ರೀರಾಘವ ಗಟ್ಟಿ, ಶ್ರೀ ಕಿರಣ್ ಕುಮಾರ್, ಶ್ರೀ ನವೀನ್ ಕೊಂಡಾಣ, ಶ್ರೀ ಜಗದೀಶ್ ಕೊಂಡಾಣ, ಶ್ರೀ ಸುಜೀತ್ ಮಾಡೂರು, ಶ್ರೀಮತಿ ಆಯಿಷಾ, ಶ್ರೀ ಅಹ್ಮದ್ ಬಾವ, ಶ್ರೀ ಇಸಾಕ್, ಶ್ರೀ ಹರೀಶ್ ರಾವ್, ಶ್ರೀಮತಿ ಸೆಲಿಮಾಬಿ, ನಾಮನಿರ್ದೇಶಿತ ಸದಸ್ಯರಾದ ಶ್ರೀಮತಿ ಸೆಫಿಯಾ ಹಾಗೂ ಮುಖ್ಯಾಧಿಕಾರಿ ಶ್ರೀಮತಿ ಮಾಲಿನಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.


