ಮಾ 30ರಿಂದ ಎ.9: ಕಿನ್ಯದಲ್ಲಿ ಕೂಟು ಝಿಯಾರತ್ ಕಾರ್ಯಕ್ರಮ

Date:



ಉಳ್ಳಾಲ: ಕೇರಳ, ಕರ್ನಾಟಕ ಗಡಿ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಕಿನ್ಯ ಕೇಂದ್ರ ಜುಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಹಝ್ರತ್ ವಲಿಯುಲ್ಲಾಹಿ ಹುಸೈನ್ ಮುಸ್ಲಿಯಾರ್ ರವರ ಹೆಸರಿನಲ್ಲಿ ನಡೆಸಿಕೊಂಡು ಬರುವ ಮುಖಾಂ ಕೂಟು ಝಿಯಾರತ್ ಎಪ್ರಿಲ್ 9 ಗುರುವಾರ ರಾತ್ರಿ ನಡೆಯಲಿದೆ.

ಈ ಪ್ರಯುಕ್ತ ಮಾ.30 ರಿಂದ ಏಪ್ರಿಲ್ 8 ಬುಧವಾರ ಅಸ್ತ ಗುರುವಾರ ರಾತ್ರಿ ವರೆಗೆ ಧಾರ್ಮಿಕ ಮತ ಪಂಡಿತರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬೂಸ್ವಾಲಿ ಹಾಜಿ ತಿಳಿಸಿದ್ದಾರೆ.
ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮಾಅತ್ ಅಧ್ಯಕ್ಷ ಅಬೂಸ್ವಾಲಿ ಹಾಜಿ ಕಿನ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕೂಟು ಝಿಯಾರತ್ ಕಾರ್ಯಕ್ರಮದ ಉದ್ಘಾಟನೆ ಮಾ.30 ರಂದು ಸೋಮವಾರ ರಾತ್ರಿ 8.30 ಕ್ಕೆ ನಡೆಯಲಿದ್ದು, ಸಯ್ಯಿದ್ ಮುಕ್ತಾರ್ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಅಮೀರ್ ತಂಙಳ್ ಕಿನ್ಯ ದುಆ ಆಶೀರ್ವಚನ ನೀಡಲಿದ್ದಾರೆ. ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಮುಸ್ತಫಾ ಅನ್ಸಾರಿ, ನಿಕಟಪೂರ್ವ ಮುದರ್ರಿಸ್ ಅಬ್ದುಲ್ ಮಜೀದ್ ದಾರಿಮಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕಿನ್ಯ ಕುತುಬಿಯ ಮದ್ರಸ ಮುಖ್ಯ ಶಿಕ್ಷಕ ಮುದರ್ರಿಸ್ ಮೊಯ್ಯದ್ದೀನ್ ಸಿರಾಜ್ ಹುದವಿ ಭಾಗವಹಿಸಲಿದ್ದಾರೆ ಎಂದರು.


ಮಾ.31 ರಿಂದ ‌ಎ.8 ವರೆಗೆ ಪ್ರತಿ ದಿನ ರಾತ್ರಿ 8.30 ರಿಂದ ವಿವಿಧ ಧಾರ್ಮಿಕ ಮತ ಪಂಡಿತರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಅಲ್ ಬುಖಾರಿ ಕಿನ್ಯ, ಪಿ.ಎ.ಅಹ್ಮದ್ ಬಾಖವಿ ಮಂಜನಾಡಿ, ಖಾಸಿಂ ದಾರಿಮಿ ಕಿನ್ಯ, ಡಾ.ಫಾರೂಕ್ ನಈಮಿ ಕೊಲ್ಲಂ, ಅನಸ್ ಅಮಾನಿ ಪುಷ್ಪಗಿರಿ, ಹುಸೈನ್ ಸಅದಿ ಕೆಸಿರೋಡ್, ಸಿದ್ದೀಕ್ ಅಝ್ ಅರಿ ಪಯ್ಯನ್ನೂರು, ಹಂಝ ಮಿಸ್ಬಾಯಿ ಓಟಪದವು, ಡಾ.ಸಾಲೀಹ್ ಫೈಝಿ, ಮುಹ್ಯಿಯುದ್ದೀನ್ ಹುದವಿ ಸಹಿತ ಹಲವು ಧಾರ್ಮಿಕ ಮುಖಂಡರು ಭಾಗವಹಿಸಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಎ.9 ಗುರುವಾರ ರಾತ್ರಿ 8.30 ಕ್ಕೆ ಸಮಾರೋಪ ಸಮಾರಂಭ, ಕೂಟು ಝಿಯಾರತ್ ನಡೆಯಲಿದೆ. ಸಯ್ಯಿದ್ ಇಬ್ರಾಹಿಮ್ ಬಾತಿಷಾ ತಂಙಳ್ ಆನೆಕಲ್, ಸಯ್ಯಿದ್ ಮುಹೀನ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ , ನೌಫಲ್ ಫೈಝಿ, ಸ್ಪೀಕರ್ ಯುಟಿ ಖಾದರ್ ಭಾಗವಹಿಸಲಿದ್ದಾರೆ. ಅಶ್ರಫ್ ರಹ್ಮಾನಿ ಚೌಕಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅದೇ ದಿನ ರಾತ್ರಿ ಕೂಟು ಝಿಯಾರತ್ ಬಳಿಕ ಅನ್ನದಾನ ನಡೆಯಲಿದೆ. ಸ್ತ್ರೀಯರಿಗೆ ಎ.9 ಗುರುವಾರ ಮಧ್ಯಾಹ್ನ ಎರಡು ಗಂಟೆಯಿಂದ ಸಂಜೆ ಆರು ಗಂಟೆಯ ವರೆಗೆ ಅನ್ನದಾನ ವ್ಯವಸ್ಥೆ ಮಾಡಲಾಗಿದೆ ಎಂದು ‌ಸುದ್ದಿಗೋಷ್ಠಿಯಲ್ಲಿ ಜಮಾಅತ್ ಅಧ್ಯಕ್ಷ ಅಬೂಸ್ವಾಲಿ ಹಾಜಿ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಕಿನ್ಯ ಕೇಂದ್ರ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಅಬ್ದುಲ್ ಖಾದರ್, ಕೋಶಾಧಿಕಾರಿ ಸಾಧು ಕುಂಞಿ ಸಾಗ್ ಬಾಗ್, ಉಪಾಧ್ಯಕ್ಷರಾದ ಹಮೀದ್ ಕಿನ್ಯ, ಇಬ್ರಾಹೀಮ್, ಅಬ್ಬು ಹಾಜಿ, ಕಾರ್ಯದರ್ಶಿ ಗಳಾದ ಇಸ್ಮಾಯಿಲ್ ಹಾಜಿ ಸಾಗ್, ಮೊಹಮ್ಮದ್ ಹಾಜಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದಾವಣಗೆರೆ ಸಾಮೂಹಿಕ ಅತ್ಯಾಚಾರ ಪ್ರಕರಣ: ವಿಮೆನ್ ಇಂಡಿಯಾ ಮೂವ್ಮೆಂಟ್ ಖಂಡನೆ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ...

ಜೂನ್ 21: ಮೂಡಬಿದಿರೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಮಹಾಸಭೆ

ಮೂಡಬಿದಿರೆ: ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ...

ಉಡುಪಿ: ತಾಯಿಯ ಕಂಕುಳಲ್ಲಿದ್ದ ಮಗುವಿನ ತಲೆಗೆ ಬಿದ್ದ ತೆಂಗಿನಕಾಯಿ; ಒಂದೂವರೆ ವರ್ಷದ ಕಂದಮ್ಮ ದಾರುಣ ಸಾವು

ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಹೆರಂಜೆಯಲ್ಲಿ ಹೃದಯವಿದ್ರಾವಕ ಘಟನೆ...

ಜನ ಸಾಮಾನ್ಯರಿಗೆ ಹಕ್ಕುಗಳು ನಿರಾಕರಣೆಯಾದಾಗ ಹೋರಾಟ ರೂಪಿಸುವುದು ನಾಯಕರ ಮೊದಲ ಜವಾಬ್ದಾರಿ: ಶಾಕಿರ್ ಅಳಕೆಮಜಲ್

ಬಂಟ್ವಾಳ, ಜೂನ್ 11: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)...