ಮುಡಿಪು: ಮುಡಿಪುವಿನಲ್ಲಿ ಪ್ರಪ್ರಥಮ ಬಾರಿ ಹಲಸು ಮೇಳ ಹಾಗೂ ಆಟಿ ಆಹಾರೋತ್ಸವ ಹಮ್ಮಿಕೊಳ್ಳಲಾಗಿದೆ, ಜುಲೈ 24, 25, 26 ರಂದು ಬೆಳಗ್ಗೆ 9 ರಿಂದ ರಾತ್ರಿ 9 ವರೆಗೆ ಮುಡಿಪು ಆಡಿಟೋರಿಯಂ ನಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ.

ಜಿಲ್ಲೆಯ ವಿವಿಧ ರೈತೋತ್ಪಾದಕ ಸಂಸ್ಥೆಗಳು, ಸ್ವಾವಲಂಬಿ ಮಹಿಳೆಯರು, ಸ್ವಸಹಾಯ ಸಂಘಗಳ ಸದಸ್ಯರು ಕೃಷಿ ಉತ್ಪನ್ನಗಳ ಮಾರಾಟ, ಕರಕುಶಲ ವಸ್ತುಗಳ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ.
ಕೃಷಿ ಸಲಕರಣೆಗಳ ಮಾರಾಟ, ವಿವಿಧ ಹೂವು, ಹಣ್ಣಿನ ಗಿಡಗಳ ಮಾರಾಟ, ಗೊಬ್ಬರ, ಚಟ್ಟಿ, ಮಣ್ಣಿನ ಮಡಕೆಗಳ ಮಾರಾಟ ನಡೆಯಲಿದೆ.
ವಿಶೇಷ ಆಕರ್ಷಣೆಯಾಗಿ ಆಟಿ ಕಲೆಂಜ ಪ್ರದರ್ಶನ, ಚೆನ್ನೆ ಮಣೆ ಆಟ, ಹಲಸು ಭಾರ ಎತ್ತುವ ಸ್ಪರ್ಧೆ ನಡೆಯಲಿದೆ.
ಹಲಸಿನ ಬಿಸಿ ಬಿಸಿ ಹೋಳಿಗೆ, ಜಿಲೇಬಿ,
ಗರಿ ಗರಿ ಹಪ್ಪಳ, ಚಿಪ್ಸ್, ಹಲಸಿನ ಕಬಾಬ್, ಮುಲ್ಕ, ಹಲಸಿನ ಶೀರಾ ಪಾಯಸ, ಜಾಮ್ ಮೊದಲಾದ ಹಲಸಿನ ಖಾದ್ಯಗಳ ಮಾರಾಟ ಮಳಿಗೆಗಳು ಇರಲಿವೆ.
ನೈಸರ್ಗಿಕ ಹಣ್ಣುಗಳ ಐಸ್ಕ್ರೀಂ, ಜ್ಯೂಸ್, ಕೆಂಪು, ಬಿಳಿ, ಬಂಗಾರ ವರ್ಣದ ಹಲಸು ಮಾರಾಟ ಹಾಗೂ ಆಟಿ ತಿಂಗಳ ಆಹಾರ ಖಾದ್ಯಗಳ ವಿಶೇಷ ಮಳಿಗೆಗಳನ್ನು ತೆರೆಯಲಾಗುವುದು.
ಸಾರ್ವಜನಿಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.


