ಬೊಳ್ಳಾಯಿ: ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್ (ರಿ.) ಬೊಳ್ಳಾಯಿ ಸಂಸ್ಥೆಯ 46ನೇ ವಾರ್ಷಿಕ ಮಹಾಸಭೆಯು ದಿನಾಂಕ 23-05-2026 ರಂದು ಎಂ.ಎಸ್.ಎಫ್ ಕಚೇರಿಯಲ್ಲಿ ಬದ್ರಿಯಾ ಜುಮಾ ಮಸೀದಿಯ ಖತೀಬ್ ಶಾಫಿ ಮದನಿ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
1980ರಲ್ಲಿ ಉದ್ಯಾವರ ಯು.ಎಸ್. ಹಮೀದ್ ತಂಙಳ್ ಅವರಿಂದ ಸ್ಥಾಪಿತಗೊಂಡ ಈ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಗೌರವಾಧ್ಯಕ್ಷ ಹಾಜಿ ಅಬ್ದುಲ್ ರಝಾಕ್ ಸಖಾಫಿ, ಬೊಳ್ಳಾಯಿ ಜಮಾಅತ್ ಅಧ್ಯಕ್ಷ ಬಿ.ಎಸ್. ಅಬೂಬಕ್ಕರ್ ಹಾಗೂ ಸಂಸ್ಥೆಯ ಅಧ್ಯಕ್ಷ ಅಬೂಬಕ್ಕರ್ ಹಾಜಿ ಎ-1 ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಬಿ.ಐ.ಬಿ. ಅವರು ಸ್ವಾಗತಿಸಿದರು. ಬಳಿಕ ಸಂಸ್ಥೆಯ ಕಾರ್ಯದರ್ಶಿ ಇಸ್ಮಾಯಿಲ್ ಜಿ. ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು.
ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಹಾಜಿ ಅಬ್ದುಲ್ ರಝಾಕ್ ಸಖಾಫಿ, ಮಾರ್ಗದರ್ಶಕರಾಗಿ ಶಾಫಿ ಮದನಿ ಉಸ್ತಾದ್ (ಖತೀಬ್, ಬದ್ರಿಯಾ ಜುಮಾ ಮಸೀದಿ) ಹಾಗೂ ಬೊಳ್ಳಾಯಿ ಸ್ವಲಾತ್ ಮಜ್ಲೀಸ್ ನೇತೃತ್ವ ನೀಡಲಾಯಿತು.
- ಅಧ್ಯಕ್ಷರಾಗಿ ಅಬೂಬಕ್ಕರ್ ಹಾಜಿ ಎ-1, ಕಾರ್ಯಾಧ್ಯಕ್ಷರಾಗಿ ಜೆ. ಶಾಫಿ, ಉಪಾಧ್ಯಕ್ಷರುಗಳಾಗಿ ಜೆ. ಸುಲೈಮಾನ್, ಬಶೀರ್ ಆಟೋ
- ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಜಿ., ಜೊತೆ ಕಾರ್ಯದರ್ಶಿಯಾಗಿ ರಪೀಕ್ ಕುಕ್ಕಿಲ, ಖಜಾಂಜಿಯಾಗಿ ನಿಝಾರ್ ಜೆ., ಲೆಕ್ಕ ಪರಿಶೋಧಕರಾಗಿ ರಿಯಾಜ್ ಪಿ., ಸ್ವಲಾತ್ ಕಲೆಕ್ಷನ್ ಸಂಚಾಲಕರಾಗಿ ಬಿ.ಎಂ. ಅಬ್ದುಲ್ ಲತೀಫ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ರಝಾಕ್ ಬಿ.ಐ.ಬಿ., ಎನ್. ಅಬ್ದುಲ್ ಕರೀಂ, ಬಿ.ಎಚ್. ಇಂತಿಯಾಜ್, ಬಿ.ಎ. ಹನೀಫ್, ಬಿ.ಎ. ಲತೀಫ್ ಆಯ್ಕೆಗೊಂಡರು.
ಸಭೆಯು ಸಂಸ್ಥೆಯ ಮುಂದಿನ ಚಟುವಟಿಕೆಗಳ ಕುರಿತು ಚರ್ಚಿಸಿ, ಸಮಾಜಮುಖಿ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ನಿರ್ಧರಿಸಿತು.


