ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭಉದ್ಯೋಗ ಸೃಷ್ಟಿಸುವ ವ್ಯಕ್ತಿಗಳಾಗಿ ದೇಶಕ್ಕೆ ಕೊಡುಗೆ ನೀಡಿ: ಡಾ. ವಿದ್ಯಾಶಂಕರ್ ಎಸ್

Date:

ಕೊಣಾಜೆ: ಪದವಿ ಪಡೆದ ಪ್ರತಿಯೊಬ್ಬರೂ ಉದ್ಯೋಗ ಹುಡುಕುವವರಾಗುವ ಬದಲು,ತಮ್ಮ‌ ಅರ್ಹತೆ, ಸಾಮರ್ಥ್ಯದಿಂದ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಿ ರೂಪುಗೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಗುರಿ ಹೊಂದಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ವಿದ್ಯಾಶಂಕರ್ ಎಸ್ ಅವರು ಹೇಳಿದರು.

ಅವರು ಶನಿವಾರ ನಡುಪದವಿನ ಪಿ.ಎ. ಕಾಲೇಜ್ ಆಫ್ ಎಂಜಿನಿಯರಿಂಗ್‌ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರ ಬದಲಾವಣೆಗಳು ನಡೆಯುತ್ತಿದ್ದು, ಹೊಸ ಕೌಶಲ್ಯಗಳನ್ನು ಕಲಿಯುವ ಮೂಲಕ ಭವಿಷ್ಯದ ಅವಕಾಶಗಳನ್ನು ಬಳಸಿಕೊಳ್ಳಬೇಕು. ಜೀವನದಲ್ಲಿ ಎದುರಾಗುವ ವೈಫಲ್ಯ ಹಾಗೂ ಹಿನ್ನಡೆಗಳಿಗೆ ಸೋಲದೆ ಅಮೂಲ್ಯವಾದ ಪಾಠಗಳನ್ನು ಕಲಿಯಬೇಕು. ವೈಫಲ್ಯಕ್ಕೆ ಕಾರಣವೇನು ಎಂಬುದನ್ನು ಅರಿತು, ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಿಕೊಂಡು ಮುಕ್ತ ಮನಸ್ಸಿನಿಂದ ಮತ್ತೆ ಪ್ರಯತ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಮಂಗಳೂರು ಕೂಡ ತಂತ್ರಜ್ಞಾನ ಹಾಗೂ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಪ್ರಮುಖ ತಂತ್ರಜ್ಞಾನ ಕಂಪನಿಗಳು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯುವ ಎಂಜಿನಿಯರ್‌ಗಳಿಗೆ ಉದ್ಯೋಗ ಹಾಗೂ ಉದ್ಯಮಶೀಲತೆಗೆ ಹಲವು ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಈ ಅವಕಾಶಗಳನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಸಂಸ್ಥೆಗಳನ್ನು ನಿರ್ಮಿಸುವ ಕನಸು ಕಾಣಬೇಕು ಎಂದರು.

ನೊವಿಗೋ ಸೊಲ್ಯೂಷನ್ಸ್ ಸಿಇಒ ಮೊಹಮ್ಮದ್ ಹನೀಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಅಯಾ ಕಾಲಘಟ್ಟಕ್ಕೆ ಪೂರಕವಾಗಿ ನಮ್ಮ ಭವಿಷ್ಯದ ಬಗ್ಗೆ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಂಡು ಮುನ್ನಡೆದರೆ ಅನೇಕ ಅವಕಾಶಗಳು ಒದಗಿ ಬರುತ್ತವೆ. ಮಂಗಳೂರು ಸೇರಿದಂತೆ ಕರಾವಳಿ ಪ್ರದೇಶವು ಸಿಲಿಕಾನ್ ಸಿಟಿಯಾಗಿ ಮಾರ್ಪಾಟಾಗುತ್ತಿದೆ. ಅನೇಕ ಉನ್ನತ ಕಂಪೆನಿಗಳು ನೆಲೆಯೂರುತ್ತಿವೆ.ದೊಡ್ಡ ಕನಸಿನೊಂದಿಗೆ ಉತ್ತಮ ಪರಿಶ್ರಮದ ಮೂಲಕ ಮುನ್ನಡೆದರೆ ಜೀವನದಲ್ಲಿ ಯಶಸ್ವು ಕಾಣಲು ಸಾಧ್ಯ ಎಂದು ಹೇಳಿದರು. ‌
ಪಿಎ ಎಜ್ಯುಕೇಶನಲ್ ಟ್ರಸ್ಟ್ ನ ಹಣಕಾಸು ಅಧಿಕಾರಿ ಅಹ್ಮದ್ ಕುಟ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡೀನ್ ಡಾ.ಸಯ್ಯದ್ ಅಮೀನ್ ಅಹ್ಮದ್ ಅವರು ಶೈಕ್ಷಣಿಕ ಸಾಧಕರ ಪಟ್ಟಿ ವಾಚಿಸಿದರು.
ಪ್ರಾಂಶುಪಾಲರಾದ ಡಾ.ರಮೀಸ್ ಎಂ.ಕೆ. ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ವಿಧಿ ಬೋಧಿಸಿದರು.
ಸಮಾರಂಭದಲ್ಲಿ ಆಡಳಿತ ಮಂಡಳಿಯ ಟ್ರಸ್ಟಿಗಳು, ವಿವಿಧ ವಿಭಾಗಗಳ ಪ್ರಾಂಶುಪಾಲರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಇಸ್ಮಾಯಿಲ್ ಶಾಫಿ ಸ್ವಾಗತಿಸಿದರು. ಉಪಪ್ರಾಂಶುಪಾಲೆ ಡಾ.ಶರ್ಮಿಳಾ ಕುಮಾರಿ ಎಂ.ಅವರು ವಂದಿಸಿದರು. ಪ್ರೊ.ಫಾತಿಮತ್ ರೈಹಾನ್ ಹಾಗೂ ವಿಯೋಲ ಇಶ್ಮಿತ ಲೋಬೋ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸೇತುವೆ ಕುಸಿತ: ತಕ್ಷಣ ಸ್ಪಂದಿಸಿದ ಬಜ್ಪೆ ನಾಗರಿಕರಕ್ಷಣಾ ವೇದಿಕೆ – ಎರಡು ದಿನಗಳಲ್ಲಿ ಪರ್ಯಾಯ ರಸ್ತೆ ವ್ಯವಸ್ಥೆಗೆ ಅಧಿಕಾರಿಗಳ ಭರವಸೆ

ಬಜ್ಪೆ, ಮಂಗಳೂರು–ಬಜ್ಪೆ–ಕಟ್ಟೀಲ್ ರಾಜ್ಯ ಹೆದ್ದಾರಿಯ ಕರಬಾರು ಸಮೀಪದಲ್ಲಿರುವ ಸೇತುವೆ ಕುಸಿದು ವಾಹನ...

ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಗೊಂದಲ – ಅಕೀಮ್ ಕೂರ್ನಡ್ಕ ಆಸ್ಪತ್ರೆಗೆ ದಾಖಲು

ಪುತ್ತೂರು: ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಉಂಟಾದ ಗೊಂದಲ ಹಾಗೂ ಉದ್ವಿಗ್ನ...

ಸೆ.ಬಂಟ್ಸ್ ಹಾಸ್ಟೆಲ್, ಶ್ರೀ ರಾಮಕೃಷ್ಣ ಶಾಲಾ ಮೈದಾನದಲ್ಲಿ ಅಂತರ್ ಜಿಲ್ಲಾ ಮಟ್ಟದ ಬಂಟ ಕ್ರೀಡೋತ್ಸವ

ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ ದಕ್ಷಿಣ ಕನ್ನಡ, ಉಡುಪಿ ಮತ್ತು...