ರೋಟರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ

Date:

ಮೂಡುಬಿದಿರೆ: ಇಲ್ಲಿನ ರೋಟರಿ ಪಿ.ಯು.ಕಾಲೇಜಿನ ವಿದ್ಯಾರ್ಥಿ ಸಂಘವು ಮಂಗಳವಾರ ಉದ್ಘಾಟನೆಗೊಂಡಿತು. ಖ್ಯಾತ ವಾಗ್ಮಿ,ಬರಹಗಾರರು ಆದ ಅರವಿಂದ ಚೊಕ್ಕಾಡಿ ಉದ್ಘಾಟಿಸಿ ಕಾಲೇಜಿನ ಮಕ್ಕಳಿಗೆ ಇರಬೇಕಾದ ನಾಯಕತ್ವದ ಗುಣ ಮತ್ತು ಶಿಸ್ತು, ವಿದ್ಯಾರ್ಥಿಗಳು ಕಾಲೇಜಿನಲ್ಲಿ ಆಳವಡಿಸುವ ಮೌಲ್ಯಗಳ ಬಗ್ಗೆ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರಜೆಗಳ ಹಕ್ಕುಗಳ ಮಹತ್ವವನ್ನು ತಿಳಿ ಹೇಳಿದರು.

ರೋಟರಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಡಾ|| ಬಿ.ಎ ಯತಿಕುಮಾರ ಸ್ವಾಮಿ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಉತ್ತಮ ನಾಯಕ ಯಾರು ಮತ್ತು ನಾಯಕತ್ವ ವಹಿಸುವಲ್ಲಿ ಅವನ ಪಾತ್ರವನ್ನುಜ್ಞಾನದ ಅರಿವನ್ನು ಬೆಳೆಸುವುದರ ಜೊತೆಗೆ ಒಬ್ಬ ವಿದ್ಯಾರ್ಥಿಯಾದವನು ಕಲಿಸಿದ ಗುರುಗಳಿಗೆ ,ಹೆತ್ತ ತಂದೆ ತಾಯಿಗೆ ಮತ್ತು ಕಲಿತ ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತರಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ರವಿ ಕುಮಾರ್ ಇವರು ವಿದ್ಯಾರ್ಥಿ ಸಂಘದ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.

ಕಾಲೇಜಿನ ಉಪಪ್ರಾಂಶುಪಾಲೆ ವೈಶಾಲಿ ಸ್ವಾಗತಿಸಿದರು. ಆಂಗ್ಲ ಭಾಷೆ ಉಪನ್ಯಾಸಕ ಆನ್ಶಿಲ್ ಸೆರಾವೋ ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ಭಾಷೆ ಉಪನ್ಯಾಸಕ ಗೌರಿಶಂಕರ್ ಇವರು ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂಡಬಿದಿರೆ: ಮನೆಕೆಲಸಕ್ಕಿದ್ದ ಜಾರ್ಖಂಡ್ ಮೂಲದ ಮಹಿಳೆ ನಾಪತ್ತೆ

ಮೂಡಬಿದಿರೆ: ಜಾರ್ಖಂಡ್ ಮೂಲದ ಮಹಿಳೆಯೊಬ್ಬರು ದರೆಗುಡ್ಡೆ ಸಮೀಪದ ಕಕ್ಕೆಕಾಡು ಬಳಿಯ ಮನೆಯಿಂದ...

ಮಂಗಳೂರು ಖಾಝಿ ಶೈಖುನಾ ತ್ವಾಖಾ ಉಸ್ತಾದ್ ನಿಧನಕ್ಕೆ ಸಂತಾಪ

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಖಾಜಿಯಾಗಿದ್ದ ಗೌರವಾನ್ವಿತ ಧಾರ್ಮಿಕ ಮುಖಂಡರಾದ...

ಮಂಗಳೂರು ಖಾಝಿ ಶೈಖುನಾ ತ್ವಾಖಾ ಉಸ್ತಾದ್ ನಿಧನ

ಮಂಗಳೂರು: ಕೇಂದ್ರ ಮುಶಾವರ ಸದಸ್ಯರೂ, ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ...