ಮೂಡಬಿದಿರೆ: ಮನೆಕೆಲಸಕ್ಕಿದ್ದ ಜಾರ್ಖಂಡ್ ಮೂಲದ ಮಹಿಳೆ ನಾಪತ್ತೆ

Date:

ಮೂಡಬಿದಿರೆ: ಜಾರ್ಖಂಡ್ ಮೂಲದ ಮಹಿಳೆಯೊಬ್ಬರು ದರೆಗುಡ್ಡೆ ಸಮೀಪದ ಕಕ್ಕೆಕಾಡು ಬಳಿಯ ಮನೆಯಿಂದ ನಾಪತ್ತೆಯಾಗಿರುವ ಘಟನೆ ಜೂನ್ 9 ರಂದು ನಡೆದಿದೆ. ಈ ಕುರಿತು ಮನೆಯವರು ಮೂಡಬಿದಿರೆ ಪೊಲೀಸ್ ಠಾಣೆ ದೂರು ನೀಡಿದ್ದಾರೆ.

ಕರ್ಮೇಲಾ ಸೋರೆನ್( 48) ನಾಪತ್ತೆಯಾದ ಮಹಿಳೆ. ಕಳೆದ ಎರಡು ವರ್ಷಗಳಿಂದ ಆನೆಗುಡ್ಡೆ ಮತ್ತು ದರೆಗುಡ್ಡೆ ಮಧ್ಯದ ಕಕ್ಕೆಕಾಡು ನಿವಾಸಿಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ಈಕೆ, ಜೂನ್ 9ರ ಮಧ್ಯಾಹ್ನ 12.30ರ ಸುಮಾರಿಗೆ ಯಾರಿಗೂ ತಿಳಿಸದೆ ಮನೆಯಿಂದ ಹೊರಟಿದ್ದಾರ.ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆ ನಡೆದುಕೊಂಡು ಹೋಗುತ್ತಿರುವುದು ದಾಖಲಾಗಿದೆ. ದರೆಗುಡ್ಡೆ ರಸ್ತೆಯ ಮೂಲಕ ತೆರಳಿದ ಈಕೆ, ಮಧ್ಯಾಹ್ನ 2.30ರ ಸುಮಾರಿಗೆ ಖಾಸಗಿ ಬಸ್ ಹತ್ತಿರುವುದು ಖಚಿತವಾಗಿದೆ. ಬಸ್ ನಿರ್ವಾಹಕರು ನೀಡಿದ ಮಾಹಿತಿಯ ಪ್ರಕಾರ, ಮಧ್ಯಾಹ್ನ 2.45ಕ್ಕೆ ಮಹಿಳೆ ಮೂಡಬಿದಿರೆ ಬಸ್ ನಿಲ್ದಾಣದಲ್ಲಿ ಇಳಿದಿದ್ದಾಳೆ. ಬಸ್‌ನಲ್ಲಿ ಟಿಕೆಟ್ ಕೇಳಿದಾಗ ಈಕೆ ಸರಿಯಾಗಿ ಸ್ಪಂದಿಸಿಲ್ಲ ಹಾಗೂ ಮಾನಸಿಕವಾಗಿ ಸ್ವಲ್ಪ ಅಸ್ವಸ್ಥಗೊಂಡಂತೆ ಕಂಡುಬಂದಿದ್ದಾಳೆ ಎಂದು ತಿಳಿದುಬಂದಿದೆ.

ನಾಪತ್ತೆಯಾದ ಮಹಿಳೆಯ ಮೊಬೈಲ್ ಫೋನ್ ಮಧ್ಯಾಹ್ನ ಗಂಟೆಗೆ ಸ್ವಿಚ್ ಆಫ್ ಆಗಿದ್ದು, ಕೊನೆಯ ಟವರ್ ಲೊಕೇಶನ್ ಮೂಡಬಿದಿರೆಯ ‘ಪಂಚರತ್ನ ಹೋಟೆಲ್’ ಬಳಿ ತೋರಿಸುತ್ತಿದೆ ಎಂದು ತಿಳಿದುಬಂದಿದೆ. ನಾಪತ್ತೆಯಾದ ಸಮಯದಲ್ಲಿ ಗುಲಾಬಿ ಬಣ್ಣದ ನೈಟಿ ಧರಿಸಿದ್ದು, ಕೈಯಲ್ಲಿ ನೀರಿನ ಬಾಟಲಿ ಹಾಗೂ ಚಿಪ್ಸ್ ಪ್ಯಾಕೆಟ್ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಮೂಡಬಿದಿರೆ ಬಸ್ ಸ್ಟ್ಯಾಂಡ್, ಮಿಜಾರು, ಹಾಗೂ ಸಂಪಿಗೆ ಚರ್ಚ್ ರಸ್ತೆಯ ಮಾರ್ಕೆಟ್ ಮುಂತಾದ ಕಡೆಗಳಲ್ಲಿ ತೀವ್ರ ಹುಡುಕಾಟ ನಡೆಸಲಾಗಿದ್ದರೂ ಮಹಿಳೆಯ ಯಾವುದೇ ಸುಳಿವು ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರೋಟರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ರೋಟರಿ ಪಿ.ಯು.ಕಾಲೇಜಿನ ವಿದ್ಯಾರ್ಥಿ ಸಂಘವು ಮಂಗಳವಾರ ಉದ್ಘಾಟನೆಗೊಂಡಿತು. ಖ್ಯಾತ...

ಮಂಗಳೂರು ಖಾಝಿ ಶೈಖುನಾ ತ್ವಾಖಾ ಉಸ್ತಾದ್ ನಿಧನಕ್ಕೆ ಸಂತಾಪ

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಖಾಜಿಯಾಗಿದ್ದ ಗೌರವಾನ್ವಿತ ಧಾರ್ಮಿಕ ಮುಖಂಡರಾದ...

ಮಂಗಳೂರು ಖಾಝಿ ಶೈಖುನಾ ತ್ವಾಖಾ ಉಸ್ತಾದ್ ನಿಧನ

ಮಂಗಳೂರು: ಕೇಂದ್ರ ಮುಶಾವರ ಸದಸ್ಯರೂ, ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ...