ಕಲ್ಲಡ್ಕದಲ್ಲಿ ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆ; ಧ್ವಜಾರೋಹಣ ಕಾರ್ಯಕ್ರಮ

Date:

ಕಲ್ಲಡ್ಕ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ 18ನೇ ವರ್ಷದ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕಲ್ಲಡ್ಕ ಜಂಕ್ಷನ್‌ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಕ್ಷೇತ್ರಾಧ್ಯಕ್ಷರಾದ ಶಾಹುಲ್ ಹಮೀದ್ SH ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಅವರು, ಶೋಷಿತರು, ದಮನಿತರು ಹಾಗೂ ಸಮಾಜದ ಹಿಂದುಳಿದ ವರ್ಗಗಳ ಪರವಾಗಿ ರಾಜಕೀಯ ಹೋರಾಟದ ಮೂಲಕ ನ್ಯಾಯದ ಧ್ವನಿಯಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.ಮುಖ್ಯ ಭಾಷಣ ಮಾಡಿದ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೊಡಿ, ಪಕ್ಷದ ಸ್ಥಾಪನೆಯ ಉದ್ದೇಶಗಳು ಹಾಗೂ ಜನಪರ ಹೋರಾಟಗಳ ಬಗ್ಗೆ ವಿವರಿಸಿದರು. ಸಮಾಜದ ಎಲ್ಲಾ ವರ್ಗಗಳ ಹಕ್ಕುಗಳ ರಕ್ಷಣೆಗೆ ಎಸ್‌ಡಿಪಿಐ ಬದ್ಧವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಸದಸ್ಯರಾದ ಸಿದ್ದಿಕ್ ಕಲ್ಲಡ್ಕ, ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಇಕ್ಬಾಲ್ ಇಝಾನ್, ಕ್ಷೇತ್ರ ಸಮಿತಿಯ ಸದಸ್ಯರಾದ ಬಶೀರ್ ಬೊಳ್ಳಾಯಿ, ಹಾಗೂ ಯಾಶೀರ್ ಕಲ್ಲಡ್ಕ, ಕಲ್ಲಡ್ಕ ಬ್ಲಾಕ್ ಸಮಿತಿಯ ಅಧ್ಯಕ್ಷ ಸತ್ತಾರ್ ಕಲ್ಲಡ್ಕ, ಕಾರ್ಯದರ್ಶಿ ಅನ್ವರ್ ಆಲಡ್ಕ, ಗೋಳ್ತಮಜಲು ಗ್ರಾಮ ಸಮಿತಿ ಅಧ್ಯಕ್ಷ ಜವಾಝ್ ಕಲ್ಲಡ್ಕ ಹಾಗೂ ಸಜಿಪ ಮುನ್ನೂರು ಗ್ರಾಮ ಸಮಿತಿಯ ಅಧ್ಯಕ್ಷ ಆಸಿಫ್ ನಂದಾವರ ಉಪಸ್ಥಿತರಿದ್ದರು. ಹಮೀದ್ ಅಲಿ ಸ್ವಾಗತಿಸಿದರು. ಮನ್ಸೂರ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿ, ದನ್ಯವಾದಗೈದರು.

ಕ್ಷೇತ್ರ ವ್ಯಾಪ್ತಿಯ ನಂದಾವರ, ಪೆರಾಜೆ, ಆಲಂಪಾಡಿ, ಪಾಂಡವರಕಲ್ಲು, ಕಾವಳಕಟ್ಟೆ, ಬಂಟ್ವಾಳ ಕೆಳಗಿನ ಪೇಟೆ, ಅಕ್ಕರಂಗಡಿ, ಗೂಡಿನಬಳಿ, ಕುಮೇರು, ಲೊರೆಟ್ಟೋಪದವು, ರಂಗೇಲು, ಆಲಡ್ಕ, ತಲಪಾಡಿ, ಕಲಾಯಿ, ಪರ್ತಿಪ್ಪಾಡಿ, ಬೊಳಂತೂರು, ಕಡಂಬು, ಮಂಚಿ, ಕರೋಪಾಡಿ ಹಾಗೂ ತಾಳಿತ್ತನೂಜಿ ಪ್ರದೇಶದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂಲ್ಕಿ ಬ್ಲಾಕ್ ಕಾಂಗ್ರೆಸ್ ನಿಯೋಗದಿಂದ ಕೆಪಿಸಿಸಿ ಅಧ್ಯಕ್ಷರ ಭೇಟಿ

ಮೂಲ್ಕಿ: ಕರ್ನಾಟಕದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಬಲಿಷ್ಠವಾಗಿ ಸಂಘಟಿತರಾಗಬೇಕಾದರೆ ಪಕ್ಷದ ನಾಯಕರುಗಳು, ಕಾರ್ಯಕರ್ತರುಗಳು...

ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ: ಜನರ ಸುರಕ್ಷತೆಗೆ ಆದ್ಯತೆ ನೀಡಲು ಕಿನ್ನಿಗೋಳಿ ಪ.ಪಂಚಾಯತ್ ಅಧ್ಯಕ್ಷ ಗುರುರಾಜ್ ಕರೆ

ಮೂಲ್ಕಿ: ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವುದು ನಮ್ಮ ಕರ್ತವ್ಯ, ಪ್ರಾಣಿಗಳ...

ಮಂಗಳೂರು–ಮುಡಿಪು–ವಿಟ್ಲ ರಸ್ತೆಯಲ್ಲಿ ಸರ್ಕಾರಿ ಬಸ್ ಸೇವೆ ಯಾಕಿಲ್ಲ?

ಮಂಗಳೂರು: ರಾಜ್ಯ ಸರ್ಕಾರವು ಮಹಿಳೆಯರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ಗಳಲ್ಲಿ...

ವಿದ್ಯುತ್ ಆಘಾತಕ್ಕೊಳಗಾಗಿ ರಾಷ್ಟ್ರಪಕ್ಷಿ ನವಿಲು ಸಾವು

ಉಳ್ಳಾಲ: ಜೂ:19: ವಿದ್ಯುತ್ ಆಘಾತಕ್ಕೊಳಗಾಗಿ ಹೆಣ್ಣು ನವಿಲೊಂದು ದಾರುಣವಾಗಿ ಮೃತಪಟ್ಟ ಘಟನೆ...