ಮಂಗಳೂರು–ಮುಡಿಪು–ವಿಟ್ಲ ರಸ್ತೆಯಲ್ಲಿ ಸರ್ಕಾರಿ ಬಸ್ ಸೇವೆ ಯಾಕಿಲ್ಲ?

Date:

ಮಂಗಳೂರು: ರಾಜ್ಯ ಸರ್ಕಾರವು ಮಹಿಳೆಯರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ನೀಡಿದೆ. ಆದರೆ ಮಂಗಳೂರು ಮುಡಿಪು ಮತ್ತು ವಿಟ್ಲ ಭಾಗದ ಅನೇಕ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತರಾಗಿರುವುದು ವಿಷಾದನೀಯ.

ರಾಜ್ಯದ ಇತರ ಭಾಗಗಳ ರಸ್ತೆಗಳಲ್ಲೆಲ್ಲಾ ಸರ್ಕಾರಿ ಬಸ್‌ಗಳು ಸಂಚರಿಸುತ್ತಿರುವಾಗ, ಈ ಮಾರ್ಗದಲ್ಲಿ ಯಾಕೆ ಸಮರ್ಪಕ ಸರ್ಕಾರಿ ಬಸ್ ಸೇವೆ ಇಲ್ಲ? ಇಲ್ಲಿನ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಹಕ್ಕು ಬೇಡವೇ? ಅವರು ಕೂಡ ರಾಜ್ಯದ ನಾಗರಿಕರಲ್ಲವೇ? ಈ ಭಾಗದ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯ ಕುರಿತು ಗಮನಹರಿಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಂಗಳೂರು–ಮುಡಿಪು–ವಿಟ್ಲ ರಸ್ತೆಯಲ್ಲಿ ಹೆಚ್ಚಿನ ಸರ್ಕಾರಿ ಬಸ್‌ಗಳನ್ನು ಓಡಿಸುವ ಕ್ರಮ ಕೈಗೊಳ್ಳಬೇಕು. ಇದರಿಂದ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಪ್ರಯಾಣಿಕರು ಸರ್ಕಾರದ ಯೋಜನೆಗಳ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

ರಾಜ್ಯದ ಎಲ್ಲ ನಾಗರಿಕರನ್ನು ಸಮಾನವಾಗಿ ಕಾಣುವ ಮನೋಭಾವದೊಂದಿಗೆ ಸರ್ಕಾರವು ಈ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಬೇಕೆಂದು ವಿನಂತಿಸುತ್ತೇವೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಿದ್ಯುತ್ ಆಘಾತಕ್ಕೊಳಗಾಗಿ ರಾಷ್ಟ್ರಪಕ್ಷಿ ನವಿಲು ಸಾವು

ಉಳ್ಳಾಲ: ಜೂ:19: ವಿದ್ಯುತ್ ಆಘಾತಕ್ಕೊಳಗಾಗಿ ಹೆಣ್ಣು ನವಿಲೊಂದು ದಾರುಣವಾಗಿ ಮೃತಪಟ್ಟ ಘಟನೆ...

ದೇರಳಕಟ್ಟೆಯಲ್ಲಿ ತಂಬಾಕು ಮುಕ್ತ ದಿನಾಚರಣೆ

ದೇರಳಕಟ್ಟೆ: ಮಂಗಳೂರು ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ತಂಬಾಕು...

ಯುವ ನ್ಯಾಯವಾದಿಯ ಮೇಲೆ ಹಲ್ಲೆ: ಮೂವರ ವಿರುದ್ಧ ವಿವಿಧ ಗಂಭೀರ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲು

ಕಬಕ, ಜೂನ್ 14: ಯುವ ನ್ಯಾಯವಾದಿಯೊಬ್ಬರ ಮೇಲೆ ಹಲ್ಲೆ ನಡೆಸಿ ...

ರವಿ ನಾಯ್ಕಾಪು ಅವರಿಗೆ ನಿರೂಪಣಾ ಕೌಸ್ತುಭ ಪ್ರಶಸ್ತಿ: 28 ಕ್ಕೆ ಮುಂಬಯಿಯಲ್ಲಿ ಪ್ರದಾನ

ಕಾಸರಗೋಡು: ನಿರೂಪಕ, ಸಂಘಟಕ, ಲೇಖಕ ರವಿ ನಾಯ್ಕಾಪು ಅವರಿಗೆ 'ನಿರೂಪಣಾ ಕೌಸ್ತುಭ'...