ಮೂಲ್ಕಿ: ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವುದು ನಮ್ಮ ಕರ್ತವ್ಯ, ಪ್ರಾಣಿಗಳ ರಕ್ಷಣೆಯ ಜೊತೆಗೆ ಅದಕ್ಕೆ ಪೂರಕ ಕಾರ್ಯಕ್ರಮಕ್ಕೆ ಸಹಕಾರ ಅಗತ್ಯ ಎಂದು ಕಿನ್ನಿಗೋಳಿ ಪಟ್ಟಣ ಪಂಚಾಯತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆ ಅಂಗಡಿ ಹೇಳಿದರು.
ಅವರು ಕಿನ್ನಿಗೋಳಿ ಉಲ್ಲಂಜೆ ಶ್ರೀ ಕೊರಗಜ್ಜ ಮಂತ್ರದೇವತಾ ಕ್ಷೇತ್ರದಲ್ಲಿ ಜನನಿ ಜನ ಸೇವಾ ಸಂಸ್ಥೆ ಉಲ್ಲಂಜೆ ಕೊಡೆತ್ತೂರು, ಮತ್ತು ಪಶುಪಾಲನ ಪಶು ವೈದ್ಯಕೀಯ ಸೇವಾ ಇಲಾಖೆ ಪಶು ಆಸ್ಪತ್ರೆ ಕಿನ್ನಿಗೋಳಿ ಹಾಗೂ ಪಟ್ಟಣ ಪಂಚಾಯತಿ ಕಿನ್ನಿಗೋಳಿ ಇವರ ಜಂಟಿ ಆಶ್ರಯದಲ್ಲಿ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಶುವೈದ್ಯಾಧಿಕಾರಿ ಡಾ. ವಿಶ್ವರಾಧ್ಯ ರೇಬಿಸ್ ಲಸಿಕಾ ಬಗ್ಗೆ
ಜನನಿ ಜನ ಸೇವಾ ಸಂಸ್ಥೆ ಉಲ್ಲಂಜೆಯ ಅಧ್ಯಕ್ಷ ಪ್ರಕಾಶ್ ಆಚಾರ್ಯ ಕಿನ್ನಿಗೋಳಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಕ್ಷೇತ್ರದ ಧರ್ಮದರ್ಶಿ ಹರೀಶ್ ಪೂಜಾರಿ, ಕಿನ್ನಿಗೋಳಿ ಪಟ್ಟಣ ಪಂಚಾಯತಿ ಸದಸ್ಯರಾದ ಶೈಲೇಶ್ ಅಂಚನ್, ಸಂತಾನ್ ಡಿಸೋಜ, ಕೋಕಿಲ ಡಿ. ಅಮೀನ್, ಸುನಿತಾ ರೋಡ್ರಿಗಸ್, ಬರ್ಕೆ ಫ್ರೆಂಡ್ಸ್ ಕೊಡೆತ್ತೂರು ಅಧ್ಯಕ್ಷ ಪ್ರೇಮ್ ರಾಜ್ ಶೆಟ್ಟಿ, ಮಾಧವ ಪೂಜಾರಿ ಉಲ್ಲಂಜೆ, ನಿತಿನ್ ಉಲ್ಲಂಜೆ, ನವೀನ್ ಉಲ್ಲಂಜೆ ಮತ್ತಿತರರು ಇದ್ದರು ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು. ಪ್ರಮೀಳಾಚಾರ್ಯ ವಂದಿಸಿದರು. ಒಟ್ಟು 132 ಶ್ವಾನಗಳಿಗೆ 42 ಬೆಕ್ಕುಗಳಿಗೆ ರೇಬಿಸ್ ಲಸಿಕೆ ನೀಡಲಾಯಿತು.


