ವಿದ್ಯುತ್ ಆಘಾತಕ್ಕೊಳಗಾಗಿ ರಾಷ್ಟ್ರಪಕ್ಷಿ ನವಿಲು ಸಾವು

Date:

ಉಳ್ಳಾಲ: ಜೂ:19: ವಿದ್ಯುತ್ ಆಘಾತಕ್ಕೊಳಗಾಗಿ ಹೆಣ್ಣು ನವಿಲೊಂದು ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪಿಲಾರು ಮಹಾಲಕ್ಷ್ಮಿ ಮಂದಿರದ ಬಳಿ ನಡೆದಿದೆ.ಪಿಲಾರು ಮಹಾಲಕ್ಷ್ಮಿ ಮಂದಿರದ ಬಳಿಯ ವಿದ್ಯುತ್ ಕಂಬದ ತಂತಿಯಲ್ಲಿ ಕುಳಿತ ಹೆಣ್ಣು ನವಿಲಿಗೆ ವಿದ್ಯುತ್ ಪ್ರವಹಿಸಿ ಕೆಳಗೆಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದೆ.

ನವಿಲು ಸಾವನ್ನಪ್ಪಿರುವುದನ್ನು ಕಂಡ ಸ್ಥಳೀಯರಾದ ಶೈಲೇಶ್ ಗಟ್ಟಿಯವರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಕೋಟೆಕಾರು ಉಪವಲಯ ಅರಣ್ಯ ಪಾಲಕರಾದ ರೋಹಿತ್ ಕುಮಾರ್ ಅವರು ನವಿಲಿನ ಕಳೇಬರವನ್ನು ವಿಲೇವಾರಿ ಮಾಡಿದ್ದಾರೆ. ಇತ್ತೀಚಿಗೆ ಅಪಾರ ಸಂಖ್ಯೆಯ ನವಿಲುಗಳು ಆಹಾರ ಅರಸಿ ಕಾಡನ್ನ ಬಿಟ್ಟು ಸಮುದ್ರ ತೀರ ಹಾಗೂ ಜನನಿಬೀಡ ಪ್ರದೇಶಗಳಿಗೆ ಲಗ್ಗೆ ಇಟ್ಟಿದ್ದು,ವಿದ್ಯುತ್ ಕಂಬಗಳ ತಂತಿಗಳಿಂದ ಪ್ರಾಣಾಪಾಯ ಎದುರಿಸುತ್ತಿವೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮಂಗಳೂರು–ಮುಡಿಪು–ವಿಟ್ಲ ರಸ್ತೆಯಲ್ಲಿ ಸರ್ಕಾರಿ ಬಸ್ ಸೇವೆ ಯಾಕಿಲ್ಲ?

ಮಂಗಳೂರು: ರಾಜ್ಯ ಸರ್ಕಾರವು ಮಹಿಳೆಯರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ಗಳಲ್ಲಿ...

ದೇರಳಕಟ್ಟೆಯಲ್ಲಿ ತಂಬಾಕು ಮುಕ್ತ ದಿನಾಚರಣೆ

ದೇರಳಕಟ್ಟೆ: ಮಂಗಳೂರು ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ತಂಬಾಕು...

ಯುವ ನ್ಯಾಯವಾದಿಯ ಮೇಲೆ ಹಲ್ಲೆ: ಮೂವರ ವಿರುದ್ಧ ವಿವಿಧ ಗಂಭೀರ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲು

ಕಬಕ, ಜೂನ್ 14: ಯುವ ನ್ಯಾಯವಾದಿಯೊಬ್ಬರ ಮೇಲೆ ಹಲ್ಲೆ ನಡೆಸಿ ...

ರವಿ ನಾಯ್ಕಾಪು ಅವರಿಗೆ ನಿರೂಪಣಾ ಕೌಸ್ತುಭ ಪ್ರಶಸ್ತಿ: 28 ಕ್ಕೆ ಮುಂಬಯಿಯಲ್ಲಿ ಪ್ರದಾನ

ಕಾಸರಗೋಡು: ನಿರೂಪಕ, ಸಂಘಟಕ, ಲೇಖಕ ರವಿ ನಾಯ್ಕಾಪು ಅವರಿಗೆ 'ನಿರೂಪಣಾ ಕೌಸ್ತುಭ'...