SDPI ದೇರಳಕಟ್ಬೆ ಬ್ಲಾಕ್ ರಚನೆ: ಅಧ್ಯಕ್ಷರಾಗಿ ಶಮೀರ್ ಟಿಪ್ಪು ನಗರ, ಕಾರ್ಯದರ್ಶಿಯಾಗಿ ಇಬ್ರಾಹಿಂ ಹರೇಕಳ ಆಯ್ಕೆ

Date:

ದೇರಳಕಟ್ಟೆ, ಆಗಸ್ಟ್ 1, 2026: ಸೋಶಿಯಲ್ ಡೆಮೋಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇರಳಕಟ್ಟೆ ಬ್ಲಾಕ್ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜುಲೈ 31, 2026ರಂದು ಹರೇಕಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ದೇರಳಕಟ್ಟೆ ಬ್ಲಾಕ್ ಅಧ್ಯಕ್ಷರಾದ ಕಮರ್ ಮಾಲಾರ್ ವಹಿಸಿದ್ದರು. ಅವರು ಸಭೆಯನ್ನು ಉದ್ಘಾಟಿಸಿದರು. ಕ್ಷೇತ್ರಾಧ್ಯಕ್ಷರಾದ ಝಹಿದ್ ಮಲಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಅಕ್ಬರ್ ರಾಝ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕ್ಷೇತ್ರ ಉಪಾಧ್ಯಕ್ಷರಾದ ಬಶೀರ್ ಎಸ್.ಎಂ., ಕ್ಷೇತ್ರ ಕಾರ್ಯದರ್ಶಿಗಳಾದ ಉಬೈದ್ ಅಮ್ಮೆಂಬಳ, ಅಶ್ರಫ್ ಮಂಚಿ, ಆರೀಫ್ ಬೋಳಿಯಾರ್, ಸಲೀಂ ಕುಂಪನಮಜಲ್ ಹಾಗೂ ಕ್ಷೇತ್ರ ಸಮಿತಿ ಸದಸ್ಯರಾದ ಹನೀಫ್ ರಂತಡ್ಕ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿಂದಿನ ದೇರಳಕಟ್ಟೆ ಬ್ಲಾಕ್ ಸಮಿತಿಯನ್ನು ವಿಸರ್ಜಿಸಿ, ಆಂತರಿಕ ಚುನಾವಣೆಯ ಮೂಲಕ ನೂತನ ಬ್ಲಾಕ್ ಸಮಿತಿಯನ್ನು ರಚಿಸಲಾಯಿತು.

ನೂತನ ದೇರಳಕಟ್ಟೆ ಬ್ಲಾಕ್ ಸಮಿತಿ:

  • ಅಧ್ಯಕ್ಷರು: ಶಮೀರ್ ಟಿಪ್ಪು ನಗರ
  • ಉಪಾಧ್ಯಕ್ಷರು: ಜಮಾಲ್ ನ್ಯೂಪಡ್ಪು
  • ಕಾರ್ಯದರ್ಶಿ: ಇಬ್ರಾಹಿಂ ಹರೇಕಲ
  • ಜೊತೆ ಕಾರ್ಯದರ್ಶಿ: ನವಾಜ್ ಕುತ್ತಾರ್
  • ಕೋಶಾಧಿಕಾರಿ: ಇರ್ಷಾದ್ ದೇರಳಕಟ್ಟೆ
  • ಸಮಿತಿ ಸದಸ್ಯರು: ನಾಸಿರ್ ಮಾಲಾರ್, ಕಮರ್ ಮಾಲಾರ್

ಸಭೆಯಲ್ಲಿ ಝ್ಯನ್ನುದ್ದೀನ್ ಹರೇಕಲ ಅವರು ಸ್ವಾಗತಿಸಿದರು. ಆಸೀಫ್ ಮಾಲಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ನೂತನ ಬ್ಲಾಕ್ ಅಧ್ಯಕ್ಷರಾದ ಶಮೀರ್ ಅವರು ವಂದಿಸಿದರು.

ನೂತನವಾಗಿ ರಚನೆಯಾದ ದೇರಳಕಟ್ಟೆ ಬ್ಲಾಕ್ ಸಮಿತಿಯು ಪಕ್ಷವನ್ನು ತಳಮಟ್ಟದಲ್ಲಿ ಇನ್ನಷ್ಟು ಬಲಿಷ್ಠವಾಗಿ ಸಂಘಟಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ ಎಂದು ಸಭೆಯಲ್ಲಿ ಆಶಯ ವ್ಯಕ್ತಪಡಿಸಲಾಯಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...