SDPI ಮುಡಿಪು ಬ್ಲಾಕ್ ಸಮಿತಿ ರಚನೆ: ಅಧ್ಯಕ್ಷರಾಗಿ ಹನೀಫ್ ರಂತಡ್ಕ, ಕಾರ್ಯದರ್ಶಿಯಾಗಿ ನವಾಝ್ ಸಜೀಪ ಆಯ್ಕೆ

Date:

ಮುಡಿಪು: ಸೋಶಿಯಲ್ ಡೆಮೋಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಡಿಪು ಬ್ಲಾಕ್ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಜುಲೈ 31, 2026ರಂದು ಹರೇಕಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಅಧ್ಯಕ್ಷರಾದ ಕಮರ್ ಮಾಲಾರ್ ವಹಿಸಿ, ಸಭೆಯನ್ನು ಉದ್ಘಾಟಿಸಿದರು. ಕ್ಷೇತ್ರಾಧ್ಯಕ್ಷರಾದ ಝಹಿದ್ ಮಲಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ಅಗತ್ಯತೆ ಹಾಗೂ ಕಾರ್ಯಕರ್ತರ ಜವಾಬ್ದಾರಿಗಳ ಕುರಿತು ಮಾತನಾಡಿದರು.

ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಅಕ್ಬರ್ ರಾಝ ಅವರು ಆಂತರಿಕ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕ್ಷೇತ್ರ ಉಪಾಧ್ಯಕ್ಷರಾದ ಬಶೀರ್ ಎಸ್.ಎಂ., ಕ್ಷೇತ್ರ ಕಾರ್ಯದರ್ಶಿಗಳಾದ ಉಬೈದ್ ಅಮ್ಮೆಂಬಳ, ಅಶ್ರಫ್ ಮಂಚಿ, ಆರೀಫ್ ಬೋಳಿಯಾರ್, ಸಲೀಂ ಕುಂಪನಮಜಲ್ ಹಾಗೂ ಕ್ಷೇತ್ರ ಸಮಿತಿ ಸದಸ್ಯರಾದ ಹನೀಫ್ ರಂತಡ್ಕ ಉಪಸ್ಥಿತರಿದ್ದರು.

ಆಂತರಿಕ ಚುನಾವಣೆಯ ಮೂಲಕ ಮುಡಿಪು ಬ್ಲಾಕ್ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಮುಡಿಪು ಬ್ಲಾಕ್ ಸಮಿತಿಗೆ ಹನೀಫ್ ರಂತಡ್ಕ ಅವರು ಅಧ್ಯಕ್ಷರಾಗಿ, ಜಾಫರ್ ಪಾನೇಲ ಅವರು ಉಪಾಧ್ಯಕ್ಷರಾಗಿ, ನವಾಜ್ ಸಜೀಪ ಅವರು ಕಾರ್ಯದರ್ಶಿಯಾಗಿ, ಹನೀಫ್ ಪಜೀರ್ ಅವರು ಜೊತೆ ಕಾರ್ಯದರ್ಶಿಯಾಗಿ ಹಾಗೂ ರಿಜ್ವಾನ್ ಸಜೀಪ ಅವರು ಕೋಶಾಧಿಕಾರಿಯಾಗಿ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಅಶ್ರಫ್ ಮೋನು ಹಾಗೂ ಅಶ್ರಫ್ ಲಿಬಾಸ್ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಝ್ಯನ್ನುದ್ದೀನ್ ಹರೇಕಲ ಅವರು ಸ್ವಾಗತಿಸಿದರು. ಆಸೀಫ್ ಮಾಲಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ನೂತನ ಬ್ಲಾಕ್ ಅಧ್ಯಕ್ಷರಾದ ಹನೀಫ್ ರಂತಡ್ಕ ಅವರು ವಂದಿಸಿದರು.

ನೂತನವಾಗಿ ರಚನೆಯಾದ ಮುಡಿಪು ಬ್ಲಾಕ್ ಸಮಿತಿಯು ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, ಜನಪರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ ಎಂದು ಸಭೆಯಲ್ಲಿ ಆಶಯ ವ್ಯಕ್ತಪಡಿಸಲಾಯಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...