ದುಬೈ: ಉದ್ಯೋಗ ನಿಮಿತ್ತ ದುಬೈಗೆ ತೆರಳಿ ಆರ್ಥಿಕ ಸಂಕಷ್ಟಕ್ಕೊಳಗಾಗುವ ಜೊತೆಗೆ ಪಾಸ್ ಪೋರ್ಟ್ ಕಳೆದುಕೊಂಡು ಊರು ಸೇರಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದ ಬಜ್ಪೆ ಮೂಲದ ವಿದ್ವತ್ ಶೆಟ್ಟಿ ಅವರಿಗೆ ಕರ್ನಾಟಕ ಕಲ್ಬರಲ್ ಪೌಂಡೇಶನ್ ಆಸರೆಯಾಗಿದೆ.

ಕುಟುಂಬದ ಮಂದಿಯ ಕಣ್ಣೀರ ಕೂಗು ಸಾಗರದಾಚೆಯ ಕನ್ನಡಿಗರ ಕಿವಿಗೆ ತಲುಪುದಾಗ ಜಾಗ್ರತರಾಗಿ ಕಾರ್ಯರಂಗಕ್ಕಿಳಿದ ಕೆಸಿಎಫ್ ನೇತಾರರ ಅವಿರತ ಪ್ರಯತ್ನದಿಂದ ವಿದ್ವತ್ ಅವರಿಗೆ ಮರಳಿ ಊರಿಗೆ ಪ್ರಯಾಣಿಸಲು ಸಾಧ್ಯವಾಗುವಂತೆ ಯುಎಇ ಸರಕಾರಿ ಅಧಿಕಾರಿಗಳು ಸಾಲ ಮರು ಪಾವತಿ ನಿರಪೇಕ್ಷಣ ಪತ್ರ ಜೊತೆಗೆ ಇತರ ಅಗತ್ಯ ದಾಖಲೆಗಳನ್ನು ಒದಗಿಸಿದ್ದು, ವಿದ್ವತ್ ಶೆಟ್ಟಿಯವರು ಈಗಾಗಲೇ ಊರು ಸೇರಿ ಕೊಂಡಿದ್ದು ಕುಟುಂಬಿಕರು ನಿಟ್ಟುಸಿರು ಬಿಡುವಂತಾಗಿದೆ.
ಅದಕ್ಕಾಗಿ ಶ್ರಮಿಸಿದ್ದ ಬರ್ಷಾ ಇಲ್ಯಾಸ್ ಮದನಿ ಸೇರಿದಂತೆ ಇತರ ಕೆಸಿಎಫ್ ಸನ್ನದ್ದ ಸಂಘದ ಕಾರ್ಯಕರ್ತರನ್ನು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಭಿನಂದಿಸಿದೆ.


