ಕೆಸಿಎಫ್ ಯುಎಇ ಸನ್ನದ್ದ ಸಂಘಕ್ಕೆ ನೂತನ ಸಾರಥ್ಯ

Date:

ದುಬೈ: ಅನಿವಾಸಿ ಕನ್ನಡಿಗರ ನೆಚ್ಚಿನ ಸಂಘಟನೆಯಾಗಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಕಲ್ಚರಲ್ ಪೌಂಡೇಶನ್ ಕೆಸಿಎಫ್ ಇದರ ಯುಎಇ ರಾಷ್ಟ್ರೀಯ ಸಮಿತಿಯ ಸಹಯೋಗದೊಂದಿಗೆ ಯುಎಇಯಾದ್ಯಂತ ನಡೆಸಲಾಗುವ ಸಮಾಜಕಲ್ಯಾಣ ಮತ್ತು ತುರ್ತು ಸಮಯದ ಸ್ವಯಂಸೇವಕರ ಸನ್ನದ್ದ ಸಂಘಕ್ಕೆ ನೂತನ ಸಾರಥಿಗಳನ್ನು ಇತ್ತೀಚೆಗೆ ಘೋಷಿಸಲಾಯಿತು.

ಝೈನುದೀನ್ ಹಾಜಿ ಬೆಳ್ಳಾರೆ ಚೆಯರ್ಮಾನ್, ಸಮದ್ ಬಿರಾಳಿ ಕನ್ವೀನರ್, ನವಾಝ್ ಹಾಜಿ ಕೋಟಿಕ್ಕಾರ್ ಕೋರ್ಡಿನೇಟರ್ ಮತ್ತು ರಝಾಕ್ ಸಅದಿ ವಗ್ಗ ಮೀಡಿಯಾ ಕನ್ವೀನರ್ ರನ್ನಾಗಿ ಆಯ್ಕೆ ಮಾಡಲಾಯಿತು.

ಕೆಸಿಎಫ್ ಕಳೆದ 13 ವರ್ಷಗಳಿಂದ ಅನಿವಾಸಿ ಕನ್ನಡಿಗರ ಶ್ರೇಯಾಬಿವೃದ್ದಿಗಾಗಿ ಶ್ರಮಿಸುತ್ತಿದ್ದು ಯುಎಇ ಸೇರಿದಂತೆ ಎಲ್ಲಾ ಗಲ್ಫ್ ರಾಜ್ಯಗಳು ಮಾತ್ರವಲ್ಲದೆ ಈಜಿಫ್ಟ್, ಲಂಡನ್ ಮತ್ತು ಜಪಾನ್ ರಾಷ್ಟ್ರಗಳಲ್ಲೂ ಕಾರ್ಯಚರಿಸುತ್ತಿದೆ.

ಉದ್ಯೋಗ ಮತ್ತು ವೀಸ ವಂಚನೆ ಪ್ರಕರಣಗಳಲ್ಲಿ ಕಾನೂನಾತ್ಮಕ ಸಹಾಯ, ನಿರುದ್ಯೋಗಿ ಅನಿವಾಸಿಗಳ ಆಹಾರ, ವಸತಿ ಮತ್ತು ಮರು ಪ್ರಯಾಣ ಟಿಕೆಟ್ ಗಳ ವ್ಯವಸ್ಥೆಯನ್ನು ಕೂಡಾ ಮಾಡಿದೆ.
ಯಎಇ ಸರಕಾರಿ ಬ್ಲಡ್ ಬ್ಯಾಂಕ್ ಸಂಯೋಜನೆಯೊಂದಿಗೆ ಹಲವು ಯಶಸ್ವಿ ರಕ್ತದಾನ ಮತ್ತು ಆರೋಗ್ಯ ತಪಾಸಣ ಶಿಬಿರಗಳನ್ನು ಏರ್ಪಡಿಸಿ ಸರಕಾರದ ಹಲವು ಗೌರವ ಪತ್ರಗಳನ್ನು ಪಡೆದುಕೊಂಡಿದೆ. ಕೋವಿಡ್ ಸೇರಿದಂತೆ ಭಾರತ ಮತ್ತು ವಿಶ್ವದ ಹಲವು ಕಡೆ ನಡೆದ ಪ್ರಾಕೃತಿಕ ದುರಂತಗಳ ಸಮಯದಲ್ಲಿ ಅಗತ್ಯ ನೆರವುಗಳನ್ನು ಒದಗಿಸಲಾಗಿದೆ.

ರೋಗಿಗಳ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದು ಹೆಚ್ಚಿನ ಚಿಕಿತ್ಸೆ ಅಥವಾ ವಿಶ್ರಾಂತಿಗಾಗಿ ಊರಿನ ಪ್ರಯಾಣದ ವೆಚ್ಚವನ್ನು ಮತ್ತು ವಾರಿಸುದಾರಿಲ್ಲದ ಹಲವು ಮೃತ ದೇಹಗಳ ವಿಲೇವಾರಿ ಮಾಡಲು ಮತ್ತು ಅವುಗಳ ಪರಿಪಾಲನೆ ಮತ್ತು ಸ್ಥಳೀಯ ದಫನ ಅಥವಾ ಊರಿಗೆ ತಲುಪಿಸುವ ಕಾರ್ಯಗಳಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...