ಸೈಯದ್ ಮದನಿ ಚಾರಿ ಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸೈಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಯದ್ ಮದನಿ ಪ್ರೌಢಶಾಲೆಯಲ್ಲಿ ಭಾರತದ 80ನೇ ಸ್ವಾತಂತ್ರ್ಯೋತ್ಸವವನ್ನು ವಿ ವಿಜೃಂಭಣೆ ಯಿಂದ ಆಚರಿಸಲಾಯಿತು.

ಉಲ್ಲಾಳ ಕೇಂದ್ರ ಜುಮಾ ಮಸೀದಿಯ ಜತೆ ಕಾರ್ಯದರ್ಶಿ ಇಸಾಕ್ ಕೋಡಿ ಅವರು ಧ್ವಜಾರೋಹಣ ಗೈದರು.
ಮಸ್ಜಿದು ಲ್ ಕರಿಮಣಿ ಅಧ್ಯಕ್ಷರಾದ ಹಾಜಿ ಮೊಹಮ್ಮದ್ ತ್ವಾಹ , ಸಾಲ ಸಂಚಾಲಕರಾದ ಮೊಹಮ್ಮದ್ ಇಸ್ಮಾಯಿಲ್ ಹಾಜಬ್ಬ,, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಹಾಜಿ ಜೈನುದ್ದೀನ್, ಅಲ್ತಾಫ್ ಯು ಹೆಚ್, ಅಬ್ದುಲ್ ಕರೀಂ, ಹಳೆ ವಿದ್ಯಾರ್ಥಿ ಅಬ್ದುಲ್ ಸುಕುರ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ
ಕೆ ಎಂ ಕೆ ಮಂಜನಾಡಿಯವರು ಶಾಂತಿ ಸಹಬಾಳ್ವೆ ಪ್ರೀತಿ ಪ್ರಸ್ತುತ ಸ್ವಾತಂತ್ರ್ಯೋತ್ಸವದ ಸಂದೇಶವೆಂದು ಸಾರಿದರು



