ಉಳ್ಳಾಲ, ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ದರ್ಗಾ ಸಮಿತಿ ಆಶ್ರಯದಲ್ಲಿ ದರ್ಗಾ ವಠಾರದಲ್ಲಿ 80 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯದ ಮಹತ್ವದ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಸಯ್ಯಿದ್ ಮದನಿ ಕಾಲೇಜು ಆಫ್ ಸೈನ್ಸ್ ಪ್ರೊಫೆಸರ್ ಇಬ್ರಾಹೀಮ್ ಅಹ್ಸನಿ,ನಜೀಬ್ ನೂರಾನಿ, ತಸ್ಲೀಮ್ ಸಖಾಫಿ, ಅಬ್ದುಲ್ ಸಲಾಮ್ ಸಖಾಫಿ, ಸ್ಕೂಲ್ ಆಫ್ ಇಫ್ಲುಲ್ ಕುರ್ ಆನ್ ಪ್ರೊಫೆಸರ್ ಜಮಾಲ್ ನೂರಾನಿ ಮದನಿ, ಕಾರ್ಯದರ್ಶಿ ಇಸಾಕ್, ಕೋಶಾಧಿಕಾರಿ ನಾಝೀಮ್ ಮುಕಚೇರಿ,ಸದಸ್ಯ ಅಬ್ದುಲ್ ಖಾದರ್ ಕೋಡಿ, ಖಲೀಲ್ ಮಿಲ್ಲತ್ ನಗರ, ಹನೀಫ್ ಹಾಜಿ ಮಾರ್ಗತಲೆ , ಮೊಹಮ್ಮದ್ ಕೈಫ್ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ದುಲ್ ಮಜೀದ್ ಫಾಳ್ ಲಿ ದುಆ ನೆರವೇರಿಸಿದರು ಹಪೀಫ್ ಅಬ್ಬಾಸ್ ಕಿರಾಅತ್ ಪಠಿಸಿದರುಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ದರ್ಸ್ ವಿದ್ಯಾರ್ಥಿಗಳು ಸ್ವಾತಂತ್ರ್ಯ ದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಇಂಡಿಪೆಂಡೆನ್ಸ್ ಮ್ಯಾಗ್ಝಿನ್ ಪಬ್ಲಿಕೇಶನ್ ಬಿಡುಗಡೆ ಮಾಡಲಾಯಿತು.


