ಮಂಗಳೂರು ವಿವಿಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆ

Date:

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 80 ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಧ್ವಜಾರೋಹಣವನ್ನು ನೆರವೇರಿಸಿದರು.


ಬಳಿಕ ಮಂಗಳ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ವಾಯುಸೇನೆ ಅಧಿಕಾರಿ ಹಾಗೂ ಮಂಗಳೂರು ವಿವಿ ಹಣಕಾಸು ಅಧಿಕಾರಿ ಪಂಚಲಿಂಗ ಸ್ಚಾಮಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ದೇಶ ಹಿಂದೆಯೇ ಸಂಪತ್ಭರಿತ ದೇಶವಾಗಿತ್ತು. ಇದರಿಂದಾಗಿಯೆ ಡಚ್ಚರು, ಪೋರ್ಚುಗೀಸರು, ಬ್ರಿಟೀಷರು ಮೊದಲಾದವರು ಇಲ್ಲಿಗೆ ಬಂದು ನಮ್ಮ ಅಮೂಲ್ಯ ಸಂಪತ್ತನ್ನು ಲೂಟಿ ಮಾಡುವುದರೊಂದಿಗೆ ಅವರೇ ಆಳುವಂತಾಯಿತು. ಆದರೂ ಭಾರತ ಇಂದಿಗೂ ಜಗತ್ತಿಗೆ 4 ನೇ ಆರ್ಥಿಕ ಶಕ್ತಿಯಾಗಿ ನಿಂತಿದೆ. ದೇಶ ಪ್ರೇಮದೊಂದಿಗೆ ನಾವೆಲ್ಲರೂ ಒಗ್ಗಟ್ಟಾಗಿ ದೇಶ ಕಟ್ಟೋಣ ಎಂದರು.


ಕುಲಸಚಿವರಾದ ಸಂತೋಷ್ ಬಿ ಜಗಲಸಾರ,‌ ಪರೀಕ್ಷಾಂಗ ಕುಲಸಚಿವರಾದ ಭಾರತವು ವಿಜ್ಞಾನ , ತಂತ್ರಜ್ಞಾನ ಸೇರಿದಂತೆ ಅನೇಕ ರೀತಿಯಲ್ಲಿ ಮುಂದುವರಿದಿದ್ದೇವೆ. ಆದರೆ ಪರಿಸರ ಅಸಮತೋಲನ ಸೇರಿದಂತೆ ಅನೇಕ ಸವಾಲುಗಳೂ ಮುಂದಿವೆ. ಇಂದಿನ ಯುವ ಜನತೆಯ ಜ್ಞಾನ ,ಕೌಶಲ್ಯ, ಶ್ರಮ,‌ ಪರಿಶ್ರಮ, ದೇಶ ಸೇವೆಯೇ ದೇಶದ ಮುಂದಿನ ದೇಶದ ನಿರ್ಧರಿಸುತ್ತದೆ ಎಂದರು.
ಮಂಗಳೂರು ವಿವಿ ಕುಲಪತಿ ಪ್ರೊ .ಪಿ.ಎಲ್.ಧರ್ಮ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವರಾದ ಪ್ರೊ.ದೇವೇಂದ್ರಪ್ಪ , ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೆಶಕರಾದ ಡಾ.ಜೆರಾಲ್ಡ್ ಸಂತೋಷ್ ಅವರು ಉಪಸ್ಥಿತರಿದ್ದರು.


ಮಂಗಳೂರು ವಿವಿ ದೈಹಿಕ ಶಿಕ್ಷಣ‌ ವಿಭಾಗದ ದೈಹಿಕ ಶಿಕ್ಷಣ ವಿಭಾಗದ ಡಾ.ರಮೇಶ್ ಅವರು ಸ್ವಾಗತಿಸಿದರು. ವಿವಿ ಶಿಕ್ಷಕೇತರರ ಉದ್ಯೋಗಿಗಳ ಸಂಘದ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ಎಂಬಿ ಅವರು ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...