ಬಹರೈನ್ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಆಗಸ್ಟ್ 21ರಂದು ಮನಾಮದ ಕನ್ನಡ ಭವನದಲ್ಲಿ ನಡೆಯಲಿರುವ ಬ್ರಹತ್ ಮೀಲಾದ್ ಸಮ್ಮೇಳನದ ಕುರಿತು ಪತ್ರಿಕಾಗೋಷ್ಠಿ ನಿನ್ನೆ ಕೆ.ಸಿಎಫ್ ಸೆಂಟರ್ನಲ್ಲಿ ನಡೆಯಿತು.

“ಪ್ರವಾದಿ ﷺ ರವರ ಜೀವನ ಮಾನವತೆಗೆ ಮಾದರಿ” ಎಂಬ ಸಂದೇಶದೊಂದಿಗೆ ನಡೆಯಲಿರುವ ಸಮಾರಂಭವು ಆಗಸ್ಟ್ 21 ಶುಕ್ರವಾರ ಸಂಜೆ 6.30ಕ್ಕೆ ಕನ್ನಡ ಭವನ, ಮನಾಮದಲ್ಲಿ ನಡೆಯಲಿದೆ.
ಪ್ರಸಿದ್ದ ವಾಗ್ಮಿ ಝಿಕ್ರಾ ಥಿಯಾಲಾಜಿಕಲ್ ಅಕಾಡೆಮಿ, ಮೂಡಬಿದ್ರಿಯ ಪ್ರಿನ್ಸಿಪಾಲ್ ನೌಫಲ್ ಸಖಾಫಿ ಕಳಸ ಉಸ್ತಾದರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ಸಮ್ಮೇಳನದ ಉದ್ದೇಶ, ಕಾರ್ಯಕ್ರಮದ ವಿಶೇಷತೆಗಳು ಹಾಗೂ ಸಮಾಜದಲ್ಲಿ ಪ್ರವಾದಿ ಮುಹಮ್ಮದ್ ﷺ ಅವರ ಮಾನವೀಯ ಆದರ್ಶಗಳ ಸಂದೇಶವನ್ನು ಸಾರುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೆಸಿಎಫ್ ಬಹರೈನ್ ವತಿಯಿಂದ ಕರೆ ನೀಡಲಾಯಿತು.
ಪತ್ರಿಕಾಗೋಷ್ಟಿಯಲ್ಲಿ ಮೀಲಾದ್ ಸ್ವಾಗತ ಸಮಿತಿ ಚೇರ್ಮ್ಯಾನ್ ಕಲಂದರ್ ಮುಸ್ಲಿಯಾರ್, ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ವಿಠ್ಠಲ್, ಜಮಾಲುದ್ದೀನ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ, ಅದೇ ರೀತಿ ರಾಷ್ಟ್ರೀಯ ನಾಯಕರಾದ ಮನ್ಸೂರ್ ಬೆಲ್ಮ, ಮೂಸಾ ಪೈಬಂಚಾಲ್, ತೌಫೀಕ್ ಬೆಳ್ತಂಗಡಿ, ಲತೀಫ್ ಪೇರೋಲಿ, ಶಾಫಿ ಮಾದಾಪುರ ಝೋನ್ ನಾಯಕರರಾದ ಅಬೂಬಕ್ಕರ್ ಪೆರುವಾಯಿ, ವೇಣೂರ್ ಮುಹಮ್ಮದ್ ಅಲಿ ಮುಸ್ಲಿಯಾರ್, ನಿಯಾಜ್ ಕೂರ್ನಾಡ್, ಮಜೀದ್ ಪೈಂಬಚಾಲ್ ಉಪಸ್ಥಿತರಿದ್ದರು


