ಈಡನ್ ಗ್ಲೋಬಲ್ ಸ್ಕೂಲ್‌ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Date:

ಪುತ್ತೂರು: ಈಡನ್ ಗ್ಲೋಬಲ್ ಸ್ಕೂಲ್, ಬೆಳಂದೂರಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ವಿಜೃಂಭಣೆಯಿಂದ ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ಬಶೀರ್ ಹಾಜಿ ಸವಣೂರು ಅವರ ಅಧ್ಯಕ್ಷತೆಯಲ್ಲಿ, ಟ್ರಸ್ಟಿ ಪುತ್ತುಬಾವ ಹಾಜಿ, ನಿವೃತ್ತ ಸೈನಿಕ ಸುಬ್ಬಪ್ಪ ಪಾಟಲಿ ಎನ್ ಅವರ ನೇತೃತ್ವದಲ್ಲಿ ವಿವಿಧ ಅತಿಥಿಗಳ ಸಮ್ಮುಖದಲ್ಲಿ ಧ್ವಜಾರೋಹಣ ನಡೆಸಲಾಯಿತು.

ಚಾಪಲ್ಲ ಜುಮಾ ಮಸೀದಿ ಅಧ್ಯಕ್ಷರಾದ ಉಮ್ಮರ್ ಹಾಜಿ, ಸಂಸ್ಥೆಯ ಹಿತೈಷಿ ಹಾಗೂ ಉದ್ಯಮಿಗಳಾದ ಲತೀಫ್ ತಿಂಗಳಾಡಿ, ನೌಫಲ್ ಸವಣೂರು, ಉಮರ್ ಬೆಳ್ಳಾರೆ ಅವರ ಗಣ್ಯ ಉಪಸ್ಥಿತಿಯಲ್ಲಿ, ಸಂಸ್ಥೆಯ ಪ್ರಾಂಶುಪಾಲರಾದ ರಂಝಿ ಮುಹಮ್ಮದ್, ಉಪ ಪ್ರಾಂಶುಪಾಲರಾದ ಅಝ್ಹರ್ ಹಾಗೂ ಮೌಲ್ಯ ಶಿಕ್ಷಣದ ಮುಖ್ಯ ಶಿಕ್ಷಕರಾದ ಡಾ. ನಿಝಾಮುದ್ದೀನ್ ಝೈನಿ ಉಸ್ತಾದ್ ಅವರು ವಿದ್ಯಾರ್ಥಿಗಳಿಗೆ ಶುಭಹಾರೈಸಿ ಸಂದೇಶ ನೀಡಿದರು.

ಶೈಕ್ಷಣಿಕ ಸಂಯೋಜಕಿ ಹರ್ಷಿತಾ, ಇಸಿಸಿಇ ಸಂಯೋಜಕಿ ಶ್ರುತಿ ಶೆಟ್ಟಿ, ಸಂಸ್ಥೆಯ ಮೇಲ್ವಿಚಾರಕ ಇಬ್ರಾಹಿಂ, ಶಾಲಾ ನಾಯಕ ನಿಹಾದ್ ಮತ್ತು ಶಾಲಾ ನಾಯಕಿ ಶಝ ಉಪಸ್ಥಿತರಿದ್ದರು. ಶಾಲಾ ಸಮಾಜ ವಿಭಾಗ ಶಿಕ್ಷಕರ ನಿರ್ವಹಣೆಯಲ್ಲಿ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಕರ್ಷಕ ದೈಹಿಕ ಕವಾಯತ್ ಹಾಗೂ ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶಿಝ ಫಾತಿಮಾ ನಿರೂಪಿಸಿ, ಐಫಾ ಫಾತಿಮಾ ಸ್ವಾಗತಿಸಿ, ಅಯಾನ್ ಇಸ್ಮಾಯಿಲ್ ಅವರು ವಂದನಾರ್ಪಣೆ ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷರಾದ ಅಶ್ರಫ್‌ ಶಾ ಮಾಂತೂರ್, ಟ್ರಸ್ಟ್ ಸದಸ್ಯರುಗಳಾದ ಖಾದರ್ ಹಾಜಿ ಸವಣೂರು, ಅಬ್ದುಲ್ ಹಮೀದ್‌ ಹಾಜಿ ಬೈತಡ್ಕ, ನಿಝರ್ ದರ್ಬೆ, ಇಸ್ಮಾಯಿಲ್ ಹಾಜಿ ಬೈತಡ್ಕ, ಮುಸ್ತಫಾ ಸಅದಿ ಪುತ್ತೂರು, ಅಬ್ಬಾಸ್ ಬಾವ ಹಾಜಿ ನೆಕ್ಕರೆ, ಮುಹಮ್ಮದ್ ಹಾಜಿ ನಡುಪದವು, ಅಶ್ರಫ್ ಕೆಕುಡೆ ಹಾಗೂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸಿ ಶಾಲಾ ಸಂಭ್ರಮದಲ್ಲಿ ಭಾಗಿಯಾದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...