ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗುರುಪುರ ಬ್ರಾಂಚ್ ಸಮಿತಿ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗುರುಪುರ ಬ್ರಾಂಚ್ ಅಧ್ಯಕ್ಷ ಮುಸ್ತಫಾ ಗುರುಪುರ ರವರ ಅಧ್ಯಕ್ಷತೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ದಾರುಸ್ಸಲಾಂ ಜುಮ್ಮಾ ಮಸೀದಿ ಗುರುಪುರ ಖತೀಬರಾದ ತನ್ವೀರ್ ಫೈಝಿ ದುವಾ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಶುಭ ಸಂಧರ್ಭದಲ್ಲಿ ತುರ್ತು ಸಂಧರ್ಭದಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಲಾಯಿತು.

ಮುಖ್ಯ ಅತಿಥಿಯಾಗಿ ಯಂಗ್ ಡೆಮಾಕ್ರಟ್ಸ್ ರಾಜ್ಯ ಜಾಯಿಂಟ್ ಕನ್ವೀನರ್ ಮೂನಿಶ್ ಅಲಿ ಬಂಟ್ವಾಳ, SDPI ಜಿಲ್ಲಾಧ್ಯಕ್ಷರಾದ ಅಶ್ರಫ್ ಅಡ್ಡೂರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷಾದ ಉಸ್ಮಾನ್ ಗುರುಪುರ, ಕ್ಷೇತ್ರ ಉಪಾಧ್ಯಕ್ಷರಾದ ರಿಯಾಝ್ ಅಡ್ಡೂರು, ಗುರುಪುರ ಬ್ಲಾಕ್ ಅಧ್ಯಕ್ಷ ಸಲಾಂ ಗೋಳಿಪಡ್ಪು, ಗುರುಪುರ ಗ್ರಾಮ ಸಮಿತಿ ಅಧ್ಯಕ್ಷ ಸತ್ತಾರ್ ಎಸ್.ಬಿ, ಗುರುಪುರ ರೇಂಜ್ ಮದರಸ ಮೆನೇಜ್ಮೆಂಟ್ ಅಧ್ಯಕ್ಷ ಸಾಹುಲ್ ಹಮೀದ್ ಮೆಟ್ರೋ, ಪುತ್ತಿಗೆ ಮಸೀದಿ ಖತೀಬರಾದ ಜಾಫರ್ ಸಾಧಿಕ್ ಫೈಝಿ, ವೈದ್ಯಾಧಿಕಾರಿ ಡಾ| ಶ್ವೇತ ಪ್ರಭು, ಗುರುಪುರ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಸಫರಾ ನಾಸಿರ್, ದಾರುಲ್ ಉಲೂಮ್ ಮಸೀದಿ ಮತ್ತು ಮದರಸ ಅಧ್ಯಕ್ಷ ಲೆತೀಫ್ ಗುರುಪುರ, ಹಸನ್ ಹೈದ್ರೋಸ್ ಜುಮ್ಮಾ ಮಸೀದಿ ಅಲಾಯಿಗುಡ್ಡೆ ಅಧ್ಯಕ್ಷ ಅಬ್ದುಲ್ಲಾ ಬಜಾಲ್ ಮುಂತಾದವರು ಉಪಸ್ಥಿತಿತರಿದ್ದರು.

ಸ್ವಾಗತವನ್ನು ಕ್ಷೇತ್ರ ಸದಸ್ಯ ಅಶ್ರಫ್ ಕೈಕಂಬ ಹಾಗೂ ದನ್ಯವಾದ ಆಸ್ತರ್ ಅಡ್ಡೂರು ರವರು ನೆರೆವೇರಿಸಿದರು.



