ರಾಷ್ಟ್ರೀಯ

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ; 17ನೇ ಮಹಾಸಭೆ-ಎಸ್.ಟಿ.ವಿಜಯಕುಮಾರ್ ಅಗಲಿಕೆಗೆ ಸಂತಾಪಸಭೆ

ಕಲಾವಿದರ ಉದ್ದೇಶಿತ ಕಾರ್ಯಗಳು ಮುನ್ನಲೆಗೆ ಬರಲಿವೆ: ಡಾ| ಸುರೇಂದ್ರಕುಮಾರ್ ಹೆಗ್ಡೆ ಮುಂಬಯಿ, ಸೆ.25: ಒಳ್ಳೆಯ ಕೆಲಸ ಮಾಡುವ ತುಡಿತ ಇದ್ದವರು ಎಲ್ಲೂ ಪದಾಧಿಕಾರಿಯೇ ಆಗಬೇಕೆಂದಿಲ್ಲ. ಸಾಮಾನ್ಯ ಸದಸ್ಯನಾಗಿಯೂ ನಿಸ್ವಾರ್ಥ ಸೇವೆ ಸಲ್ಲಿಸಲು ಸಾಧ್ಯ. ಪರಿಷತ್ತುನ ಸ್ವಂತಃ ಕಚೇರಿ ಹೊಂದಿ ನಮ್ಮ ಸಂಘಕ್ಕೆ ಒಂದು ನೆಲೆ ಸಿಕ್ಕಿದೆ. ಪರಿಷತ್ತುವಿನ ಬಹಳ ಮುಖ್ಯವಾದ ಕೆಲಸಗಳು ಈ ಅವಧಿಯಲ್ಲಿ ಪೂರ್ಣಗೊಂಡಿರುವುದರಿಂದ ಮುಂದಿನ ಅವಧಿಯಲ್ಲಿ ನಮ್ಮ ಉದ್ದೇಶಿತ ಕಾರ್ಯಗಳು ಮುನ್ನಲೆಗೆ ಬರಲಿವೆ ಎಂದು ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ತಿಳಿಸಿದರು. ಇಂದಿಲ್ಲಿ ಮಂಗಳವಾರ ಸಾಂತಕ್ರೂಜ್ ಪೂರ್ವದ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ನಡೆಸಲಾದ ಪರಿಷತ್ತುವಿನ 17ನೇ ವಾರ್ಷಿಕ ಮಹಾಸಭೆಯ ಸಭಾಧ್ಯಕ್ಷತೆ ವಹಿಸಿ ಸುರೇಂದ್ರಕುಮಾರ್ ಮಾತನಾಡಿ ಷೋಡಶ ಸಂಭ್ರಮದಲ್ಲಿರುವ ಕನ್ನಡಿಗ ಕಲಾವಿದರ ಪರಿಷತ್ತು 18ರ ಹೊಸ್ತಿಲ ಪಯಣದಲ್ಲಿದೆ. ಎಲ್ಲಾ ಪ್ರಕಾರದ ಕಲಾಸಂಸ್ಥೆಗಳ ಮಾತೃಸಂಸ್ಥೆಯಾದ ನಮ್ಮ ಪರಿಷತ್ತು ಹಲವಾರು ವರುಷಗಳಿಂದ ಪ್ರಯಣತ್ನದ ಸ್ವಂತ ಕಚೇರಿ ಸದಸ್ಯರೆಲ್ಲ್ಲರ ಸಾಂಘಿಕ ಪ್ರಯತ್ನದ ಫಲಶ್ರುತಿ, ಕಲಾಮಾತೆಯ ಅನುಗ್ರಹ, ಬೃಹನ್ಮುಂಬಯಿಯಲ್ಲಿನ ಸಹೃದಯಿ ಕಲಾಪ್ರೇಮಿ ದಾನಿಗಳ ಸಹಕಾರದಿಂದ ಸದ್ಯ ಸಾಕಾರಗೊಂಡಿದೆ. ನಮ್ಮ ಬಹುದೊಡ್ದ ಯೋಜನೆಯಾದ ಕಲಾವಿದರ ಮಾಹಿತಿ ಗ್ರಂಥ ‘ಕಲಾವಿದರ ಕೈಪಿಡಿ’ ಕೂಡಾ ಈ ವರ್ಷ ಸದಸ್ಯರ ಕೈಸೇರಿದೆ ಎಂಬ ತೃಪ್ತಿ ನಮಗಿದೆ. ಪ್ರಸ್ತುತ ವರ್ಷದಲ್ಲಿ ಕಲಾವಿದರ ಶ್ರೇಯೋಭಿವೃದ್ಧಿಗಾಗಿನ ನಮ್ಮ ಕನಸಿನ ಬಹುದೊಡ್ಡ ಯೋಜನೆ ‘ಕ್ಷೇಮನಿಧಿ’ಗಾಗಿ ಬಹು ಮೊತ್ತವನ್ನೂ ಶೀಘ್ರವಾಗಿ ಸಂಗ್ರಹಿಸುವ ಭರವಸೆ ನಮಗಿದೆ. ಪರಿಷತ್ತ್‌ನ ಸಿದ್ಧಿ ಸಾಧನೆಗಳು ಮಹಾರಾಷ್ಟ್ರವಲ್ಲದೆ ಕರ್ನಾಟಕದಲ್ಲೂ ಪ್ರಸಿದ್ದಿಯಲ್ಲಿದೆ ಎಂಬ ಸಂತೋಷ ನಮ್ಮೆಲ್ಲರಿಗಿದೆ ಎಂದರು. ಪರಿಷತ್ತ್‌ನ ಉಪಾಧ್ಯಕ್ಷರುಗಳಾದ ಕಮಲಾಕ್ಷ ಸರಾಫ್ ಮತ್ತು ಸಿಎ| ಶ್ರೀನಿವಾಸ ಪಿ.ಸಫಲ್ಯ, ಗೌರವ ಕಾರ್ಯದರ್ಶಿ ಚಂದ್ರಶೇಖರ ಭಟ್, ಗೌರವ ಖಜಾಂಚಿ ಪಿ.ಬಿ ಚಂದ್ರಹಾಸ್, ಜೊತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಾರಾ ಆರ್.ಬಂಗೇರ, ಪ್ರಕಾಶ್ ಶೆಟ್ಟಿ ಪಯ್ಯಾರು, ಎನ್.ಟಿ ಪೂಜಾರಿ, ಕೊಲ್ಯಾರು ರಾಜು ಶೆಟ್ಟಿ, ಬಾಲಕೃಷ್ಣ ಡಿ.ಶೆಟ್ಟಿ ವೇದಿಕೆಯಲ್ಲಿದ್ದು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆಯನ್ನಿತ್ತರು. ಉಪಾಧ್ಯಕ್ಷ ಶ್ರೀನಿವಾಸ ಪಿ.ಸಫಲ್ಯ ಮಾತನಾಡಿ ನೆಲೆಯ ಮೇಲೆ ಕಲೆ ನಿಂತಾಗ ಆದು ಪ್ರಜ್ವಲಿಸುತ್ತದೆ. ಕಲಾವಿದರು, ಕ್ಷಣವಾದರೂ ಈ ಸಂಸ್ಥೆಗೆ ಸ್ಪಂದಿಸಬೇಕು. ಕೆಲವು ಸದಸ್ಯರು ತಮ್ಮ ಅಸಹಾಯಕ ಸ್ಥಿತಿಯಲ್ಲಿ ಸಂಸ್ಥೆಯ ಬಳಿ ಬಂದು ಮತ್ತೆ ದೂರ ನಿಲ್ಲುವಾಗ ಖೇದವಾಗುತ್ತದೆ ಎಂದು ವಿಷಾಧಿಸಿದರು. ಚಂದ್ರಶೇಖರ ಭಟ್ ಗತವಾರ್ಷಿಕ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿದರು. ಪಿ.ಬಿ ಚಂದ್ರಹಾಸ್ ಗತವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. 2025-2028ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಆಂತರಿಕ ಲೆಕ್ಕಪರಿಶೋಧಕರನ್ನಾಗಿ ಮತ್ತೆ ಜಗದೀಶ್ ಡಿ.ರೈ ಅವರನ್ನೇ ಹಾಗೂ ಬಾಹ್ಯ ಲೆಕ್ಕಪರಿಶೋಧ ಕರನ್ನಾಗಿ ರಾವ್ ಎಂಡ್ ಅಶೋಕ್ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯನ್ನೇ ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು. ಪರಿಷತ್ತುವಿನ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಪದ್ಮನಾಭ ಸಸಿಹಿತ್ಲು, ಎನ್.ಪೃಥ್ವಿರಾಜ್ ಮುಂಡ್ಕೂರು, ಲ| ಮುರಳೀಧರ ಹೆಗಡೆ, ವಿಶೇಷ ಆಹ್ವಾನಿತ ಸದಸ್ಯರುಗಳಾದ ಡಿ.ಭಾಸ್ಕರ ಶೆಟ್ಟಿ, ಚಂದ್ರಕಾಂತ ಕೆ.ಸಾಲಿಯಾನ್, ಜೂಲಿಯೆಟ್ ಪಿರೇರಾ, ಸುಶೀಲಾ ಎಸ್.ದೇವಾಡಿಗ, ಮಹಿಳಾ ವಿಭಾಗದ ಸಂಚಾಲಕಿ ಕುಸುಮಾ ಸಿ.ಪೂಜಾರಿ, ಸದಸ್ಯೆಯರುಗಳಾದ ಅಮಿತ ಜತ್ತನ್, ಪ್ರತಿಮಾ ಬಿ.ಬಂಗೇರ, ಸುರೇಖಾ ಹೆಚ್.ದೇವಾಡಿಗ ಸೇರಿದಂತೆ ಸದಸ್ಯರನೇಕರು ಹಾಜರಿದ್ದು ಸಭೆಯಲ್ಲಿನ ಸಲಹೆಗಾರರಾದ ಕೆ.ಕೆ ಶೆಟ್ಟಿ, ಡಾ| ಭರತಕುಮಾರ್ ಪೊಲಿಪು, ಸದಸ್ಯೆ ಡಾ| ಜಿ.ಪಿ ಕುಸುಮಾ ಮಾತನಾಡಿ ಸಲಹೆ ಸೂಚನೆಗಳನ್ನೀಡಿ ಪರಿಷತ್ತುವಿಗೆ ಉಜ್ವಲ ಭವಿಷ್ಯ ಹಾರೈಸಿದರು. ಹಿರಿಯ ರಂಗ ಕಲಾವಿದರಾಗಿದ್ದು ಪರಿಷತ್ತ್‌ನ ಸ್ಥಾಪಕಾಧ್ಯಕ್ಷರಾಗಿದ್ದು ಇತ್ತೀಚೆಗೆ ನಿಧನರಾದ ಎಸ್.ಟಿ ವಿಜಯಕುಮಾರ್ ತಿಂಗಳಾಯ ಮತ್ತು ಭೋಜ ಬಂಗೇರ ಅವರ ಆಗಲಿಕೆಗೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಡಾ| ಸುರೇಂದ್ರಕುಮಾರ್ ಹೆಗ್ಡೆ, ಶ್ರೀನಿವಾಸ ಪಿ.ಸಫಲ್ಯ, ಡಾ| ಭರತಕುಮಾರ್ ಪೊಲಿಪು, ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ, ಡಾ| ಸತೀಶ್ ಎನ್.ಬಂಗೇರ, ಶೈಲೇಶ್ ಪುತ್ರನ್, ವಾಸುದೇವ್ ಮಾರ್ನಾಡ್, ಜಗದೀಶ್ ಡಿ.ರೈ, ಓಂದಾಸ್ ಕಣ್ಣಂಗಾರ್, ಅಶೋಕ್ ಕುಕ್ಯಾನ್ ಸಸಿಹಿತ್ಲು,  ತಾರಾ ಆರ್.ಬಂಗೇರ ನುಡಿ ನಮನ ಸಲ್ಲಿಸಿ ಸಂತಾಪ ಸೂಚಿಸಿದರು. ಜಯಲಕ್ಷ್ಮೀ ದೇವಾಡಿಗ ಅವರ ಪ್ರಾರ್ಥನೆಯೊಂದಿಗೆ ಮಹಾಸಭೆ ಆರಂಭ ಗೊಂಡಿತು. ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ಸಭಾ ಕಲಾಪ ಆರಂಭಿಸಿದರು. ಪಿ.ಬಿ ಚಂದ್ರಹಾಸ್ ಉಪಕಾರ ಸ್ಮರಿಸಿದರು.  

ಗುಜರಾತ್‌ನ ಬರೋಡಾದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮ ದಿನಾಚರಣೆ

ಗುಜರಾತ್‌ನ ಬರೋಡಾದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮ ದಿನಾಚರಣೆಸಾಮರಸ್ಯದ ಜೀವನವೇ ನಾರಾಯಣ ಗುರುಗಳ ಆದರ್ಶ: ಶಶಿಧರ್ ಬಿ. ಶೆಟ್ಟಿ, ಬರೋಡಾ ಮುಂಬೈ (ಆರ್‌ಬಿಐ), ಸೆಪ್ಟೆಂಬರ್ 10: ಗುಜರಾತ್ ಬಿಲ್ಲವರ ಸಂಘವು ಕಳೆದ...

ಸಿಎಂ ಫಡ್ನವೀಸ್ ಗೃಹ ಗಣಪತಿಯ ದರ್ಶನ ಪಡೆದ ವಿಜಯ್ ಎಸ್. ಶೆಟ್ಟಿ

ಸಿಎಂ ಫಡ್ನವೀಸ್ ಗೃಹ ಗಣಪತಿಯ ದರ್ಶನ ಪಡೆದ ವಿಜಯ್ ಎಸ್. ಶೆಟ್ಟಿ ಮುಂಬೈ (ಆರ್‌ಬಿಐ), ಸೆಪ್ಟೆಂಬರ್ 10: ಮಹಾರಾಷ್ಟ್ರದ ಗೌರವಾನ್ವಿತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧಿಕೃತ ನಿವಾಸ ವರ್ಷ ಬಂಗಲೆಯಲ್ಲಿ ಆಯೋಜಿಸಲಾದ ಗಣೇಶ...

ಮುಂಬಯಿ; ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2025  ಪ್ರಶಸ್ತಿ ಪ್ರದಾನ

ಪತ್ರಕರ್ತರ ಸುದ್ದಿಯಲ್ಲಿ ಎಂದಿಗೂ ರಾಜಿ ಸಲ್ಲದು : ಆಯೇಷಾ ಖಾನಂ ಮುಂಬಯಿ, ಸೆ.07: ಸಮತೋಲನ ವರದಿ ಮಾಡುವಿಕೆ, ನ್ಯಾಯಯುತ ಪತ್ರಿಕೋದ್ಯಮ, ಮಾಧ್ಯಮ ವಿಮರ್ಶೆಯಾಗಿರಬೇಕು. ವರದಿ ಮಾಡುವಿಕೆಯಲ್ಲಿ ಸೂಕ್ಷ ತೆಯು ಬಹಳ ಮುಖ್ಯವಾಗಿದ್ದು, ಸುದ್ದಿಯಲ್ಲಿ ಎಂದಿಗೂ ರಾಜಿ ಸಲ್ಲದು. ಪತ್ರಿಕೋದ್ಯಮದಲ್ಲಿ ಅಭ್ಯಾಸ, ಗುಣಮಟ್ಟ. ಮಹಾರಾಷ್ಟ್ರದಲ್ಲಿನ ಕನ್ನಡಿಗ ಮಾಧ್ಯಮಗಳು ಕನ್ನಡಿಗರ ದೃಷ್ಟಿಕೋನದಿಂದ ವರದಿ ಮಾಡುತ್ತಿರುವುದು ಸ್ತುತ್ಯಾರ್ಹ. ಆದ್ದರಿಂದಲೇ  ಮುಂಬಯಿವಾಸಿ ಕನ್ನಡಿಗ ಪತ್ರಕರ್ತರು ರಾಷ್ಟ್ರೀಯ ಪತ್ರಕರ್ತರಾಗಿದ್ದೀರಿ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ತಿಳಿಸಿದರು. ಇಂದಿಲ್ಲಿ ಭಾನುವಾರ ಅಂಧೇರಿ ಪೂರ್ವದ ಸಾಲೀಟರಿ ಕಾರ್ಪೋರೆಟ್ ಪಾರ್ಕ್‌ನ ಕ್ಲಬ್ ಹೌಸ್ ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಆಯೋಜಿಸಿದ್ದ ಸಂಘದ 2025ನೇ ವಾರ್ಷಿಕ ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಆಯೇಷಾ ಖಾನಂ ಮಾತನಾಡಿದರು.   ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಮತ್ತು ಪ್ರಶಸ್ತಿ ಸಮಿತಿ ಕಾರ್ಯಾಧ್ಯಕ್ಷೆ ಡಾ| ಸುನೀತಾ ಎಂ.ಶೆಟ್ಟಿ (ಪತ್ರಕರ್ತರ ಸಂಘದ ಹಿರಿಯ ಸಲಹೆಗಾರ್ತಿ), ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಜಿ.ಮುರುಳ್ಯ, ಸೂಕ್ತ ನ್ಯೂಸ್ ವಿಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರವರ್ತಕ ಜೋನ್ ವಿಲ್ಸನ್ ಲೋಬೊ ಪ್ರಧಾನ ಅಭ್ಯಾಗತರಾಗಿದ್ದು ನವ ದೆಹಲಿಯ ಹಿರಿಯ ಪತ್ರಕರ್ತ ಡಿ.ಉಮಪತಿ (ಚಿತ್ರದುರ್ಗ) ಅವರಿಗೆ ಶಾಲು ಹೊದಿಸಿ, ರೂ. 25,000/- ನಗದು, ಪುರಸ್ಕಾರ ಫಲಕ, ಪ್ರಶಸ್ತಿಪತ್ರ, ಫಲಪುಷ್ಫಗಳನ್ನಿತ್ತು 2025ನೇ ವಾರ್ಷಿಕ ರಾಷ್ಟ್ರೀಯ ಮಾಧ್ಯಮಶ್ರೀ  ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಕಲ್ಯಾಣ್ ಪರಿಸರದ ಹೆಸರಾಂತ ಎನ್‌ಜಿಒನ ಸಮಾಜ ಸೇವಾ ಕಾರ್ಯಕರ್ತೆ, ಟ್ರಾನ್ಸ್‌ಜೆಂಡರ್ ಶ್ರೀದೇವಿ ಲೋಂಡೆ ಅವರಿಗೆ ವಿಶೇಷ ಸನ್ಮಾನವನ್ನಿತ್ತು ಗೌರವಿಸಲಾಯಿತು. ಗೌ| ಪ್ರ| ಕಾರ್ಯದರ್ಶಿ ಸಾ.ದಯಾ (ದಯಾನಂದ್) ಪುರಸ್ಕತರನ್ನು, ಗೌರವ ಕೋಶಾಧಿಕಾರಿ ವಿಶ್ವನಾಥ್ ಪೂಜಾರಿ ನಿಡ್ಡೋಡಿ ಸನ್ಮಾನಿತರನ್ನು ಪರಿಚಯಿಸಿದರು. ಶಾಸಕಿ ಭಾಗೀರಥಿ ಮಾತನಾಡಿ ಪ್ರವೃತ್ತಿಯ  ಆಡಂಬರವಿಲ್ಲದ ವೃತ್ತಿಪರರು ಪತ್ರಕರ್ತರು. ಪುಸ್ತಕ-ಪೆನ್ನು ಆಸ್ತಿಯಾಗಿರಿಸಿದ ಪತ್ರಕರ್ತರು ಸಮಸ್ಯೆಗಳಿಗೆ ಪರಿಹಾರವನ್ನೀಡುವ ಶಕ್ತಿವುಳ್ಳವರಾಗಿದ್ದಾರೆ. ಜನನದಿಂದ ಮರಣದ ವರೇಗೆ ಸೇವೆಸಲ್ಲಿಸುವ ವೃತ್ತಿಯಿದ್ದರೆ ಅದು ಪತ್ರಕರ್ತರದ್ದಾಗಿದೆ. ಪತ್ರಕರ್ತರು ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲು ಸ್ಪೂರ್ತಿದಾಯಕರಾಗಿದ್ದು ಜನರ ಒಳ್ಳೆಯ ಕೆಲಸಗಳನ್ನು ಗುರುತಿಸುವ ಕೆಲಸ ಪತ್ರಕರ್ತರು ಮಾಡುತ್ತಿರುವುದು ಪ್ರಶಂಸನೀಯ ಎಂದರು. ಜನರಿಗೆ ಸತ್ಯವನ್ನು ಮುಟ್ಟಿಸುವ ಕೆಲಸ ಪತ್ರಕರ್ತರ ಧರ್ಮ. ನಾನು ಪ್ರಶಸ್ತಿಯನ್ನು ವಿನಮ್ರತೆ, ಸಂಕೋಚದಿಂದ ಸ್ವೀಕರಿಸಿದೆ. ಜನರ ವಕ್ತಾರರೇ ಪತ್ರಕರ್ತರು ಆಗಿದ್ದು, ಯುವ ಜನರಿಗೆ ಪ್ರಶಸ್ತಿಗಳು ನೀಡಿದಾಗ ಭಾವೀ ಜನಾಂಗಕ್ಕೆ ಸ್ಪೂರ್ತಿ ಪ್ರೇರಣೆಯಾಗುತ್ತದೆ. ಬರೆಯುವ ಕಲೆ ಇಲ್ಲದವರು ಪತ್ರಕರ್ತರಾಗಲು ಅಸಾಧ್ಯ. ಇಂದು ಪ್ರತಿಕಾವೃತ್ತಿ ಉದ್ಯಮವೃತ್ತಿಯಾಗಿ ಕಾರ್ಪೋರೇಟ್ ಮಟ್ಟಕ್ಕೆ ಬೆಳೆದಿದೆ. ಸಾಮಾಜಿಕ ಕಳಕಳಿ ಪತ್ರಕರ್ತರ ಆಗಬೇಕು ಎಂದು ಪ್ರಶಸ್ತಿಗೆ ಉತ್ತರಿಸಿ ಡಿ.ಉಮಪತಿ ತಿಳಿಸಿದರು. ಶ್ರೀದೇವಿ ಲೋಂಡೆ ಮಾತನಾಡಿ ಸಮಾಜದಲ್ಲಿ ಲಿಂಗ ತಾರತಮ್ಯವು ದೊಡ್ಡ ಸಮಸ್ಯೆಯಾಗಿದೆ. ಜನ್ಮ ನೀಡಿದ ಮಾತಾಪಿತರಿಂದ ಒಡಹುಟ್ಟಿದ ಸಹೋದರರಿಂದಲೂ ನಾವು ಲಜ್ಜೆಗೆಒಳಪಟ್ಟು  ಅಂತರ ಕಾಪಾಡಿ ಕೊಳ್ಳುವಂತಾಗಿರುವುದು ದೊಡ್ದ ದುರಂತವೇ ಸರಿ. ನಮ್ಮದು ಮನಸ್ಸು, ಆತ್ಮ, ಲಿಂಗ ಮತ್ತು ದೇಹ ಬೇರೆಬೇರೆಯಾಗಿದ್ದರೂ ಆದರೂ ನಾವೂ ಈ ಪ್ರಕೃತಿ ಸೃಷ್ಠಿಯಲ್ಲಿ ಭಗವಂತ ಮಕ್ಕಳೇ ಅನ್ನುವುದಷ್ಟೇ ನಮಗೆ ಸಂತೋಷ ನೀಡುತ್ತಿದೆ. ನಮಗೂ ಸಮಾಜದಲ್ಲಿ ಸ್ವಂತಿಕೆಯ ಸ್ಥಾನಮಾನವಿದ್ದು ಸಮಾನತೆಯ ಬದುಕುವಿದೆ. ಇದನ್ನು ಪರಿಗಣಿಸಿದ ಈ ಪತ್ರಕರ್ತರ ಸಂಘ ನನ್ನನ್ನು ಗೌರವಿಸಿರುವುದು ಅಭಿಮಾನ ತಂದಿದೆ. ನಿಮ್ಮ ವಿಶಾಲ ಮನೋಭಾವದ ಚಿಂತನೆಯಿಂದ ತೃತಿಯ ಲಿಂಗಿಯರಿಗೂ ಸೂಕ್ತಸ್ಥಾನಮಾನದ ಬಾಳು ಕರುಣಿಸಲಿ  ಎಂದರು. ಮಹಾರಾಷ್ಟ್ರವಾಸಿ ಕನ್ನಡಿಗರು ಹೊಂದಾಣಿಕೆಯಿಂದ ಬಾಳುವವರಾಗಿದ್ದಾರೆ. ಕೆ.ಟಿ ವೇಣುಗೋಪಾಲ್ ಓರ್ವ ಒಳ್ಳೆಯ ಮಾಧ್ಯಮ ಪ್ರತಿನಿಧಿ ಮಾತ್ರವಲ್ಲ, ಒಳ್ಳೆಯ ಬರಹಗಾರರೂ ಆಗಿದ್ದರು. ಇಂತಹ ಪ್ರತಿಷ್ಠಿತ ಪತ್ರಕರ್ತರ ಪ್ರಶಸ್ತಿ ಯಾರ್‍ಯರಿಗೂ ಸಲ್ಲಬಾರದು ಬದಲಾಗಿ ಅರ್ಹವ್ಯಕ್ತಿಗೆನೇ ಸಲ್ಲಬೇಕು. ಕೇವಲ ಸುದ್ಧಿಗಾರರಾಗದೆ ಒಳ್ಳೆಯ ಬರಹಗಾರನಾಗುವುದೇ ಪತ್ರಕರ್ತನ ಲಕ್ಷಣ. ಮುಂಬಯಿಯಂತಹ ಸಂಕೀರ್ಣ ಬದುಕಿನಲ್ಲಿ ಇಂತಹ ಸಂಘಟನೆ ಮುಂದುವರಿಯುವುದು ಕಷ್ಟವಾದರೂ ಅನಿವಾರ್ಯವೂ ಹೌದು. ಒಳ್ಳೆಯ ಓದುಗ, ಲೇಖಕನೇ ಶ್ರೇಷ್ಠವಾದ ಪತ್ರಕರ್ತನಾಗಲು ಸಾಧ್ಯ. ಆದುದರಿಂದ ಹಲವರ ಬಾಳಿಗಾಗಿ ಬಾಳುವುದೇ ಪತ್ರಕರ್ತರ ಕರ್ತವ್ಯವಾಗಬೇಕು ಎಂದ ಡಾ| ಸುನೀತಾ ಶೆಟ್ಟಿ ತಿಳಿಸಿ ಪ್ರಶಸ್ತಿಯ ಬಗ್ಗೆ ಮಾಹಿತಿಯನ್ನಿತ್ತರು. ಪತ್ರಕರ್ತರು ಪತ್ರಿಕೋದ್ಯಮದ ನಿಷ್ಠೆಗೆ ಬದ್ಧರಾಗಿ ಮುನ್ನಡೆಯುವ ಅಗತ್ಯವಿದೆ. ಈ ವೃತ್ತಿಧರ್ಮ ಖಂಡಿತಾವಾಗಿಯೂ ರಕ್ಷಿಸುವುದು. ನಮ್ಮ ನಡವಳಿಕೆಯು ಯಾವಾಗಲೂ ಜ್ಞಾನಕ್ಕಿಂತ ಹೆಚ್ಚಿನ ಮಹತ್ವವನ್ನು ಹೊಂದಿದ್ದು, ಜ್ಞಾನವು ವಿಫಲಗೊಳ್ಳುವ ಹಲವು ಸಂದರ್ಭಗಳಿವೆ. ಆದರೆ ನಡವಳಿಕೆಯು ಎಲ್ಲವನ್ನೂ ನಿಭಾಯಿಸುತ್ತದೆ. ಆದ್ದರಿಂದ ಪತ್ರಕರ್ತರಲ್ಲಿ ನಡವಳಿಕೆಯೂ ಅತ್ಯಗತ್ಯವಾಗಿದೆ. ಜೀವನ ಪ್ರಯಾಣದಲ್ಲಿ ಯಾವುದೂ ವ್ಯರ್ಥವಾಗುವುದಿಲ್ಲ. ಒಳ್ಳೆಯ ಮತ್ತು ಕೆಟ್ಟ ಅನುಭವಗಳು ನಿಮ್ಮ ಮನಸ್ಸು ಮತ್ತು ಹೃದಯವನ್ನು ಮುಂಬರುವದಕ್ಕೆ ರೂಪಿಸುತ್ತವೆ ಎಂಬುದನ್ನು ಪತ್ರಕರ್ತರು ತಿಳಿದು ಮುನ್ನಡೆಯಬೇಕು ಎಂದು ಅಧ್ಯಕ್ಷ ರೋನ್ಸ್ ಬಂಟ್ವಾಳ್ ತಿಳಿದರು. ಗೌ| ಪ್ರ| ಕಾರ್ಯದರ್ಶಿ ಸಾ.ದಯಾ (ದಯಾನಂದ್) ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು. ಕನ್ನಡ ಸಂಘ ಸಾಂತಕ್ರೂಜ್ ಅಧ್ಯಕ್ಷೆ ಸುಜತಾ ಆರ್.ಶೆಟ್ಟಿ, ಸುರೇಶ್ ಎಸ್.ಸಾಲಿಯಾನ್, ತುಳಸೀದಾಸ್ ಅವಿನ್, ಹಾಗೂ ಕೆ.ಟಿ ವೇಣುಗೋಪಾಲ್ ಅಭಿಮಾನಿಗಳನೇಕರು ಉಪಸ್ಥಿತರಿದ್ದು ಪುರಸ್ಕೃತರಿಗೆ ಅಭಿನಂದಿಸಿದರು.  ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ 2025-2028ರ ಸಾಲಿನ  ಅಧ್ಯಕ್ಷೆ ಡಾ| ಜಿ.ಪಿ ಕುಸುಮಾ, ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಗೌರವ ಪ್ರಧಾನ ಕಾರ್ಯದರ್ಶಿ ಸವಿತಾ ಸುರೇಶ್ ಶೆಟ್ಟಿ, ಗೌರವ ಕೋಶಾಧಿಕಾರಿ ಸುರೇಶ್ ಕೆ.ಮೂಲ್ಯ, ಜೊತೆ ಕಾರ್ಯದರ್ಶಿ ಶ್ಯಾಮ್ ಎಂ.ಹಂಧೆ, ಜೊತೆ ಕೋಶಾಧಿಕಾರಿ ಡಾ| ದುರ್ಗಪ್ಪ ವೈ.ಕೋಟಿಯವರ್ ಮತ್ತು ಪದಾಧಿಕಾರಿಗಳಿಗೆ ಆಯೇಷಾ ಖಾನಮ್ ಪುಷ್ಪಗುಚ್ಫಗಳನ್ನಿತ್ತು ಅಧಿಕಾರ  ವಹಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಂಗ ಎಸ್.ಪೂಜಾರಿ, ಡಾ| ಜಿ.ಪಿ ಕುಸುಮಾ,  ಅನಿತಾ ಪಿ.ಪೂಜಾರಿ ತಾಕೋಡೆ, ಕರುಣಾಕರ್ ವಿ.ಶೆಟ್ಟಿ, ಗೋಪಾಲ ಪೂಜಾರಿ ತ್ರಾಸಿ, ಶ್ಯಾಮ ಎಂ.ಹಂಧೆ, ಸಲಹಾ ಸಮಿತಿ ಸದಸ್ಯ ಸುರೇಂದ್ರ ಎ.ಪೂಜಾರಿ, ವಿಶೇಷ ಆಮಂತ್ರಿತ ಸದಸ್ಯರಾದ ಡಾ| ಶಿವರಾಮ ಕೆ. ಭಂಡಾರಿ, ನ್ಯಾಯವಾದಿ ಅಮಿತಾ ಎಸ್.ಭಾಗ್ವತ್, ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಸ್ಥಾಪಕ ಉಪಾಧ್ಯಕ್ಷ ಸದಾನಂದ ಡಿ.ನಾಯಕ್, ಸುಧಾಕರ್ ಉಚ್ಚಿಲ್, ಚಂದ್ರವತಿ ದೇವಾಡಿಗ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದರು. ವಿದ್ಯಾ ಎಂ.ಭಂಡಾರಿ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷ ಡಾ| ಶಿವ ಮೂಡಿಗೆರೆ ಪ್ರಸ್ತಾವನೆಗೈದು, ಸ್ವಾಗತಿಸಿ ದರು. ಜತೆ ಕಾರ್ಯದರ್ಶಿಸವಿತಾ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ಡಾ| ದುರ್ಗಪ್ಪ ವೈ.ಕೋಟಿಯವರ್, ಜಯರಾಮ ಜಿ.ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಡಾ| ಜಿ.ಪಿ ಕುಸುಮಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನ ಗೊಂಡಿತು.

400 ಕೆಜಿ ಆರ್‌ಡಿಎಕ್ಸ್‌ ಬಳಸಿ ಮುಂಬೈ ಸ್ಫೋಟಿಸುವುದಾಗಿ ಬೆದರಿಕೆ: ಆರೋಪಿ ಅಶ್ವಿನ್ ಕುಮಾರ್ ಬಂಧನ

ಮುಂಬೈ : 400 ಕೆಜಿ ಆರ್‌ಡಿಎಕ್ಸ್‌ ಬಳಸಿ ಮುಂಬೈ ನಗರದಲ್ಲಿ ದೊಡ್ಡ ಮಟ್ಟದಲ್ಲಿ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ನೋಯ್ಡಾದ ಅಶ್ವಿನ್ ಕುಮಾರ್ ಸುಪ್ರಾ...

Popular

Subscribe

spot_imgspot_img